ತಂತ್ರಜ್ಞಾನ ಬೆಳೆದಂತೆ ಉದ್ಯಮವೂ ಬೆಳೆಯುತ್ತದೆ: ಡಾ. ಬಾಲಸುಬ್ರಮಣ್ಯಂ

Upayuktha
0


ಪುತ್ತೂರು: ನಮ್ಮ ಹಿರಿಯರು ಕೈಯಲ್ಲೇ ಭೂಮಿ ಅಗೆಯುತ್ತಿದ್ದರು, ಈಗ ಜೆಸಿಬಿಗಳು ಭೂಮಿಯನ್ನುಅಗೆಯುತ್ತವೆ. ಮನುಷ್ಯರು ತಿಂಗಳುಗಟ್ಟಲೆ ಮಾಡುವ ಕೆಲಸವನ್ನು ದಿನವೊಂದರಲ್ಲೇ ಮಾಡಲು ಸಾಧ್ಯವಾಗಿದೆ. ಇದಕ್ಕೆ ಕಾರಣ ತಂತ್ರಜ್ಞಾನ. ಇದೇ ತಂತ್ರಜ್ಞಾನವೇ ಉದ್ಯಮದ ಸಕ್ಸಸ್ ಮಂತ್ರ. ಉದ್ಯಮಗಳಲ್ಲಿ ಹೊಸ ಹೊಸ ತಂತ್ರಜ್ಞಾನಗಳ ಅಳವಡಿಕೆಯಿಂದ ಕೆಲಸ ಸರಳವಾಗುತ್ತದೆ. ಇದರ ಪ್ರತಿಯಾಗಿ ಉದ್ಯಮವೂ ಹಾಗೆಯೇ ಅಭಿವೃದ್ಧಿ ಸಾಧಿಸುತ್ತದೆ. ಹಾಗೆಯೇ ನಾವೇ ನಿರ್ಮಿಸಿದ ಯಂತ್ರಗಳಿಗೂ ನಮ್ಮದೇ ಅನ್ನುವ ಸ್ವಾಧೀನತೆ ಇದ್ದರೆ ಒಳಿತು. ಇದು ಸ್ಪರ್ಧೆಯನ್ನು ಹೆಚ್ಚಿಸುತ್ತದೆ. ತಯಾರಿಸಿದವನಿಗೆ ಹೊಸ ಗುರುತನ್ನು ನೀಡುತ್ತದೆ ಎಂದು ಡಿಸಿಆರ್‌ನ ಪ್ರಧಾನ ವಿಜ್ಞಾನಿ ಡಾ. ಬಾಲಸುಬ್ರಮಣ್ಯಂ ಹೇಳಿದರು. 


ವಿವೇಕಾನಂದರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಸ್ವಾಯತ್ತ ಮಹಾವಿದ್ಯಾಲಯದ ಸ್ನಾತಕೋತ್ತರ ವಾಣಿಜ್ಯ ವಿಭಾಗ ಮತ್ತು ಐಕ್ಯುಎಸಿ, ವಿವೇಕಾನಂದ ಸಂಶೋಧನಾಕೇಂದ್ರ ಹಾಗೂ ಗೋಡಂಬಿ ಸಂಶೋಧನಾ ನಿರ್ದೇಶನಾಲಯ ಪುತ್ತೂರು ಇದರ ಸಹಯೋಗದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಇವರು ಭೌದ್ದಿಕ ಆಸ್ತಿ ಹಕ್ಕು, ಪೇಟೆಂಟ್ ಮುಂತಾದ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ನೀಡಿದರು. 


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್ ಮಾತನಾಡಿ, ನಮ್ಮದೇಶದಲ್ಲಿ ಸಂಶೋಧನೆಗಳನ್ನು ಮಾಡುವವರ ಸಂಖ್ಯೆ ಕಡಿಮೆಯೇ. ಆದರೂ ಮಾಡಿದ ಸಂಶೋಧನೆಗಳಿಗೂ ಮಾನ್ಯತೆ ಪಡೆದುಕೊಳ್ಳದೆ ಅದರ ಹೆಗ್ಗಳಿಕೆಯನ್ನೂ ಬೇರೆಯವರಿಗೆ ನೀಡುತ್ತಿದ್ದೇವೆ. ನಮ್ಮಲ್ಲಿ ಪೇಟೆಂಟ್ ಬಗ್ಗೆ, ಅದನ್ನು ಪಡೆದುಕೊಳ್ಳುವುದರ ಬಗ್ಗೆ ಜ್ಞಾನವೇಇಲ್ಲ. ಇದು ಬದಲಾಗಬೇಕು ಎಲ್ಲರಿಗೂ ಇದರ ಬಗ್ಗೆ ತಿಳಿದಾಗ ನಮ್ಮಲ್ಲಿಯೂ ಪೇಟೆಂಟ್‍ಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಿದರು. 


ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಿಭಾಗದ ಡೀನ್‍ ಡಾ. ವಿಜಯ ಸರಸ್ವತಿ, ಸ್ನಾತಕೋತ್ತರ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದ್ವಿತೀಯ ಎಂ.ಕಾಂ ವಿದ್ಯಾರ್ಥಿಗಳಾದ ರಾಹುಲ್ ಸ್ವಾಗತಿಸಿ, ಮೇಘನಾ ರೈ ವಂದಿಸಿದರು, ಪ್ರಥಮ ಎಂ. ಕಾಂ ವಿದ್ಯಾರ್ಥಿ ಪವನ್‍ಕಾರ್ಯಕ್ರಮ ನಿರೂಪಿಸಿದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top