ಈ ಎರಡು ದೇಶಗಳ ಜೊತೆ ನಂಟು ಇಟ್ಟುಕೊಳ್ಳದಂತೆ ನಿರ್ದೇಶಕ, ನಿರ್ಮಾಪಕರಿಗೆ ತಿಳಿಸಲಾಗಿದೆ. ಸಿನಿಮಾಗಿಂತಲೂ ದೇಶವೇ ಮುಖ್ಯ. ಟರ್ಕಿ ಜೊತೆ ನಂಟು ಇಟ್ಟುಕೊಂಡರೆ ಭಾರತದ ಭದ್ರತೆಗೆ ತೊಂದರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈಗಾಗಲೇ ಪಾಕ್ ಕಲಾವಿದರು, ತಂತ್ರಜ್ಞರು ಭಾರತೀಯ ಸಿನಿಮಾಗಳಲ್ಲಿ ಕೆಲಸ ಮಾಡದಂತೆ ಬ್ಯಾನ್ ಮಾಡಲಾಗಿದೆ.
ಭಾರತದ ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನಕ್ಕೆ 350 ಡ್ರೋನ್ ಸರಬರಾಜು ಮಾಡಿದ್ದ ಟರ್ಕಿ, ಡ್ರೋನ್ ಬಳಕೆ ಬಗ್ಗೆ ಪಾಕ್ ಸೈನಿಕರಿಗೆ ತರಬೇತಿ, ಮಿಲಿಟರಿ ಯಂತ್ರೋಪಕರಣಗಳ ನೆರವು ನೀಡಿದೆ. ಕಾರ್ಯಾಚರಣೆ ವೇಳೆ ಯಂತ್ರೋ ಪಕರಣಗಳ ಬಳಕೆಗೆ ತನ್ನ ಸಿಬ್ಬಂದಿಯನ್ನೂ ಟರ್ಕಿ ಕಳುಹಿಸಿದ್ದು, ಟರ್ಕಿಯ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ. ಭಾರತದ ಮೇಲಿನ ದಾಳಿಗೆ ನಿರ್ದಿಷ್ಟ ಪ್ರದೇಶಗಳನ್ನು ಗುರುತಿಸಿದ್ದ ಟರ್ಕಿ ಸಲಹೆಗಾರರು, ಎತ್ತರದ ಪ್ರದೇಶದಲ್ಲಿರುವ ಸೇನಾ ನೆಲೆಗಳ ಮೇಲೆ ದಾಳಿ ಕೇಂದ್ರೀಕರಿಸುವಂತೆ ಪಾಕ್ ದಂಡ ನಾಯಕರಿಗೆ ಮಾಹಿತಿ ನೀಡಿದ್ದರು. ಟರ್ಕಿಯ 'ಅಸಿಸ್ಗಾರ್ಡ್ ಸೊಂಗರ್' ಡ್ರೋನ್ ಜತೆಗೆ 'ಬೇರಕ್ತಾರ್ ಟಿಬಿ2', ಮತ್ತು 'ಯಿಹಾ' ಡ್ರೋನ್‌ಗಳನ್ನು ಪಾಕಿಸ್ತಾನ ಬಳಸಿಕೊಂಡು ದಾಳಿ ನಡೆಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ