ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯದಲ್ಲಿ 2025-26ರಿಂದ ಕಾನೂನು ಶಿಕ್ಷಣ

Upayuktha
0



ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಲಾ ಅಡಿಯಲ್ಲಿ ಕಾನೂನು ಶಿಕ್ಷಣವನ್ನು 2025-26ನೇ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲು ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಡ್ವೊಕೇಟ್ಸ್ ಆಕ್ಟ್, 1961 ರ ಸೆಕ್ಷನ್ 7 (1) (ಐ) ರ ಅಡಿಯಲ್ಲಿ ಅನುಮೋದನೆಯನ್ನು ನೀಡಲಾಗಿದೆ. ಈ ಶೈಕ್ಷಣಿಕ ಕಾರ್ಯಕ್ರಮವನ್ನು 2025–26 ಮತ್ತು 2026–27ರ ಶೈಕ್ಷಣಿಕ ವರ್ಷಗಳಿಗೆ ಅನುಮೋದಿಸಲಾಗಿದೆ ಮತ್ತು ಕಾನೂನು ಶಿಕ್ಷಣ ನಿಯಮಗಳು-2008 ರ ನಿಯಮಗಳು ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹೊರಡಿಸಿದ ಎಲ್ಲಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಈ ಶಿಕ್ಷಣವನ್ನು ವಿಶ್ವವಿದ್ಯಾನಿಲದಲ್ಲಿ ನೀಡಲಾಗುವುದು. ಈ ಮೂಲಕ 145 ವರ್ಷಗಳ ಇತಿಹಾಸವಿರುವ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಯು ಇದೀಗ ಮತ್ತೊಂದು ಮೈಲುಗಲ್ಲಿನತ್ತ ದಾಪುಗಾಲು ಹಾಕಿದೆ.

ಆರಂಭಗೊಳ್ಳಲಿರುವ ಎರಡು ಕಾನೂನು ಕೋರ್ಸ್ ಗಳೆಂದರೆ:  ಮೂರು ವರ್ಷದ ಎಲ್‌ಎಲ್‌ಬಿ (ಆನರ್ಸ್): 60 ವಿದ್ಯಾರ್ಥಿಗಳು ಮಾತ್ರ,  ಐದು ವರ್ಷದ ಇಂಟಿಗ್ರೇಟೆಡ್ ಬಿಬಿಎ ಎಲ್ ಎಲ್ ಬಿ (ಆನರ್ಸ್): 60 ವಿದ್ಯಾರ್ಥಿಗಳು ಮಾತ್ರ. ಸ್ಕೂಲ್ ಆಫ್ ಲಾ ಪ್ರಾಯೋಗಿಕ ಕಲಿಕೆಗೆ ಬಲವಾದ ಒತ್ತು ನೀಡುತ್ತದೆ. ಕ್ಲಿನಿಕಲ್ ಕಾನೂನು ಶಿಕ್ಷಣ ಮತ್ತು ಕಾನೂನು ನೆರವು ಚಿಕಿತ್ಸಾಲಯಗಳಿಂದ ಹಿಡಿದು ನ್ಯಾಯಾಲಯಗಳು, ಕಾನೂನು ಸಂಸ್ಥೆಗಳು, ಎನ್‌ಜಿಒಗಳು ಮತ್ತು ನೀತಿ ಥಿಂಕ್ ಟ್ಯಾಂಕ್‌ಗಳೊಂದಿಗಿನ ಇಂಟರ್ನ್‌ಶಿಪ್‌ ಗಳವರೆಗೆ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪಯಣವನ್ನು ಬೆಳೆಸಲಿದ್ದಾರೆ. ಕಾನೂನು ಶಿಕ್ಷಣದ ಈ ಅವಧಿಯಲ್ಲಿ ನಿಯಮಿತ ಚರ್ಚೆಗಳು, ಮೂಟ್ ಸ್ಪರ್ಧೆಗಳು, ಗುಂಪು ಚರ್ಚೆಗಳು ಮತ್ತು ಕೇಸ್ ಸ್ಟಡಿ ಸೆಷನ್‌ಗಳು ನಡೆಯಲಿವೆ. 


ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ, ಕಾನೂನು ತಾರ್ಕಿಕತೆ ಮತ್ತು ಸಂವಹನ ಕೌಶಲ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಲಾಗುವುದು. ಸುಮಾರು 33 ಲಕ್ಷ ಮೌಲ್ಯದ ಗ್ರಂಥಾಲಯ ಸಂಪನ್ಮೂಲಗಳನ್ನು ಹೊಂದಿರುವ ಸಂತ ಅಲೋಶಿಯಸ್ ಕಾನೂನು ಗ್ರಂಥಾಲಯವು ಎಸ್ಸಿಸಿ ಆನ್‌ಲೈನ್, ಮನುಪತ್ರ ಮತ್ತು ನಿಂಬಸ್ ಇ- ಗ್ರಂಥಾಲಯದೊಂದಿಗೆ ಸಂಪೂರ್ಣವಾಗಿ ಸಂಯೋಜಿಸಲ್ಪಟ್ಟಿದೆ. ಇದು ಕೊಹಾ ಲೈಬ್ರರಿ ಮ್ಯಾನೇಜ್‌ಮೆಂಟ್ ಸಿಸ್ಟಮ್ ಮೂಲಕ ಪ್ರಮುಖ ಕಾನೂನು ದತ್ತಸಂಚಯಗಳು ಮತ್ತು ಜರ್ನಲ್‌ಗಳು ವಿದ್ಯಾರ್ಥಿಗಳಿಗೆ ದೊರೆಯುವಂತೆ 24/7 ಕಾಲಾವಧಿಯಲ್ಲಿ ಸೇವೆಯನ್ನು ಒದಗಿಸುತ್ತದೆ. ಮತ್ತು ಕಾನೂನು ಸಂಶೋಧನೆಗಳು ತಡೆರಹಿತವಾಗಿ ಇಲ್ಲಿ ಮುಂದುವರಿಯಲಿದೆ.


ಹವಾಮಾನ ನಿಯಂತ್ರಣ, ಸುತ್ತುವರಿದ ಬೆಳಕು ಮತ್ತು ಆಧುನಿಕ ಒಳಾಂಗಣಗಳೊಂದಿಗೆ ಸೂಕ್ಷ್ಮವಾಗಿ ರಚಿಸಲಾದ ಮೂಟ್ ಕೋರ್ಟ್ ರೂಮ್ ಇಲ್ಲಿದೆ. ಅಲ್ಲಿ ವಿದ್ಯಾರ್ಥಿಗಳು ನ್ಯಾಯಾಲಯದ ವಿಚಾರಣೆಯನ್ನು ಅನುಕರಿಸುತ್ತಾರೆ ಮತ್ತು ವಿದ್ಯಾರ್ಥಿಗಳು ವಕಾಲತ್ತು ಮತ್ತು ಭಾಷಣವನ್ನು ಹರಿತಗೊಳಿಸುತ್ತಾರೆ. ವಿಶ್ವವಿದ್ಯಾನಿಲಯವು ವೈಯಕ್ತಿಕ ಮತ್ತು ವೃತ್ತಿಪರತೆಯನ್ನು ಪೋಷಿಸಲು ಮಾರ್ಗದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಸೇವೆಯಲ್ಲಿರುವ ವಕೀಲರು ಮತ್ತು ಶೈಕ್ಷಣಿಕ ನಾಯಕರೊಂದಿಗೆ ವಿದ್ಯಾರ್ಥಿಗಳಿಗೆ ಸಂಪರ್ಕ ಏರ್ಪಡುವಂತೆ ಮಾಡುತ್ತದೆ. ಜೊತೆಗೆ ಕೌನ್ಸೆಲಿಂಗ್ ಮೂಲಕ ವಿದ್ಯಾರ್ಥಿಗಳ ಭಾವನಾತ್ಮಕ ಯೋಗಕ್ಷೇಮದ ಕುರಿತು ಕಾಳಜಿ ವಹಿಸುತ್ತದೆ. ಬೋಧಕವರ್ಗದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ತರಗತಿಗೆ ನಾವೀನ್ಯತೆಯನ್ನು ತರುವುದಕ್ಕಾಗಿ ಕ್ರಿಯಾತ್ಮಕ, ಸಂಶೋಧನಾ-ಆಧಾರಿತ ಶಿಕ್ಷಕರಿಂದ ಕಲಿಸಲಾಗುವುದು.


ದಾವೆ, ಕಾರ್ಪೊರೇಟ್ ಕಾನೂನು, ನ್ಯಾಯಾಂಗ ಸೇವೆಗಳು, ಸಾರ್ವಜನಿಕ ಹಿತಾಸಕ್ತಿ, ವಕೀಲ ಮತ್ತು ಅಂತರರಾಷ್ಟ್ರೀಯ ಕಾನೂನು ಸೇರಿದಂತೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ಇಂಟರ್ನ್‌ಶಿಪ್ ಮತ್ತು ಉದ್ಯೋಗಾವಕಾಶಗಳನ್ನು ಪಡೆಯಲು ಪೂರ್ವಭಾವಿಯಾಗಿ ನಿಯೋಜಿಸಲ್ಪಟ್ಟ ತಂಡವು ವರ್ಷಪೂರ್ತಿ ಕೆಲಸ ಮಾಡುತ್ತದೆ. ಕಾನೂನು ಕಾಲೇಜಿನಲ್ಲಿ ಸೆಂಟ್ರಲ್ ಯೂನಿವರ್ಸಿಟಿ ಲೈಬ್ರರಿ, ಹೈ-ಸ್ಪೀಡ್ ಇಂಟರ್ನೆಟ್, ಹಾಸ್ಟೆಲ್‌ಗಳು, ಆಧುನಿಕ ಕ್ರೀಡಾ ಸೌಲಭ್ಯಗಳು ಮತ್ತು ಸ್ಮಾರ್ಟ್ ತರಗತಿ ಕೋಣೆಗಳಿರುತ್ತವೆ. ಈ ಕೋರ್ಸ್ಗಳ ಪಠ್ಯಕ್ರಮಗಳು ಉದ್ಯೋಗಸ್ನೇಹಿಯಾಗಿದ್ದು, ಮೌಲ್ಯಾಧಾರಿತ ಮತ್ತು ಅತ್ಯುತ್ತಮ ಕಾನೂನು ಶಿಕ್ಷಣವನ್ನು ನೀಡುವ ಉದ್ದೇಶವನ್ನು ವಿಶ್ವವಿದ್ಯಾನಿಲಯ ಹೊಂದಿದೆ. ಮಾತ್ರವಲ್ಲದೆ ಕೋರ್ಸ್ಗಳನ್ನು ಹೆಚ್ಚು ವೃತ್ತಿಪರಗೊಳಿಸಲು ಮತ್ತು ಪ್ರಯೋಜನಕಾರಿಯಾಗಿಸಲು ಸಮಾನಮನಸ್ಕ ಸಂಸ್ಥೆಗಳ ಜೊತೆಗಿನ ಶೈಕ್ಷಣಿಕ ಸಹಯೋಗವನ್ನು ಸಂಸ್ಥೆ ಪಡೆದುಕೊಳ್ಳಲಿದೆ. ಈ ಮೂಲಕ ಜಾಗತಿಕ ಮಟ್ಟದ ಗುಣಮಟ್ಟದ ಶಿಕ್ಷಣದ ಅನುಭವವನ್ನು ವಿದ್ಯಾರ್ಥಿಗಳಿಗೆ ನೀಡಲು ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯ ಬದ್ಧವಾಗಿದೆ. ಜೊತೆಗೆ ಮುಂದಿನ ತಲೆಮಾರಿನ ಶ್ರೇಷ್ಠ ಕಾನೂನು ತಜ್ಞರನ್ನು ರೂಪಿಸುವ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ.


ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಇತ್ತೀಚೆಗೆ ನ್ಯಾಕ್ ಮೌಲ್ಯಮಾಪನದಲ್ಲಿ ಅತ್ಯುನ್ನತ ಗ್ರೇಡ್ A++ನ್ನು ಪಡೆದುಕೊಂಡಿತ್ತು. ಇದೀಗ ಕಾನೂನು ಶಿಕ್ಷಣದ ಮೂಲಕ ಸಂಸ್ಥೆಯ ಶೈಕ್ಷಣಿಕ ಪರಂಪರೆಯು ಮತ್ತಷ್ಟು ವ್ಯಾಪಕಗೊಳ್ಳಲಿದ್ದು, ನಮ್ಮ ರಾಷ್ಟ್ರದ ಕಾನೂನು ಶಿಕ್ಷಣದ ಪರಂಪರೆಗೆ ಇದೊಂದು ಉತ್ತಮ ಕೊಡುಗೆಯಾಗಲಿದೆ.


2025-26ನೇ ಶೈಕ್ಷಣಿಕ ಸಾಲಿನ ಕಾನೂನು ಶಿಕ್ಷಣದ ಪ್ರವೇಶ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಅರ್ಹ ವಿದ್ಯಾರ್ಥಿಗಳಿಂದ ಪ್ರವೇಶವನ್ನು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ ಸೈಟ್  www.staloysius.edu.in ಗೆ ಭೇಟಿ ನೀಡಿ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter


Post a Comment

0 Comments
Post a Comment (0)
To Top