ಆಪರೇಷನ್ ಸಿಂಧೂರ ಯಶಸ್ವಿ- ಕನಕ ದುರ್ಗಮ್ಮ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಕೆ

Chandrashekhara Kulamarva
0



ಬಳ್ಳಾರಿ: ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆಪರೇಷನ್ ಸಿಂಧೂರ  ಯಶಸ್ವಿಯಾಗಿ ನಡೆಸಿದೆ, ಆದ್ದರಿಂದ ಬಳ್ಳಾರಿ ಬಿಜೆಪಿ ಘಟಕದ ವತಿಯಿಂದ ಕನಕ ದುರ್ಗಮ್ಮ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ 101 ತೆಂಗಿನಕಾಯಿ ಒಡೆದು ಪ್ರಾರ್ಥನೆ ಮಾಡಲಾಯಿತು.


ಭಾರತೀಯ ಯೋಧರಿಗೆ ಒಳ್ಳೆಯದಾಗಲಿ ಎಂದು ಹಾರೈಸಿ ಸೈನಿಕರಿಗಾಗಿ ಮತ್ತು ಪ್ರಧಾನಿ ಮೋದಿಗೆ, ದೇವಿಗೆ ವಿಶೆಷ ಪೂಜೆ ಸಲ್ಲಿಕೆ ಮಾಡಲಾಗಿದೆ. ದೇಶಕಾಯುವ ಯೋಧರಿಗೆ ಯಾವುದೇ ತೊಂದರೆ ಆಗದಂತೆ ಕಾಪಾಡುವಂತೆ ಪ್ರಾರ್ಥಿಸಿ ಸಂಕಲ್ಪ ಮಾಡಿದ್ದಾರೆ. ಈ ಸಂದರ್ಭದಲ್ಲಿವಿಧಾನ ಪರಿಷತ್ ಸದಸ್ಯ ವೈಎಂ.ಸತೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು, ಬಿಜೆಪಿ ಮುಖಂಡ ದಿವಾಕರ್, ಪಾಲಿಕೆ ಸದಸ್ಯ ಗೋವಿಂದರಾಜುಲು, ಶ್ರೀನಿವಾಸ್ ಮೋತ್ಕರ್, ಗುಡಿ ಘಂಟಿ ಹನುಮಂತಪ್ಪ, ಸುರೇಖಾ ಮಲ್ಲನಗೌಡ, ಕೆ.ಎಸ್.ರಾಮಾಂಜಿನಿ, ಗಡ್ಡಂ ತಿಮ್ಮಪ್ಪ, ರಾಣಿತೋಟ ವೀರೇಶ್, ಉಜ್ವಲ, ರಘು, ಮತ್ತಿತರರು ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top