ಉಡುಪಿ: ತೆರಿಗೆ ಉಳಿತಾಯದ ಸ್ಥಿರ ಠೇವಣಿಗಳು” (ಟ್ಯಾಕ್ಸ್ ಸೇವಿಂಗ್ ಫಿಕ್ಸೆಡ್ ಡೆಪಾಸಿಟ್‌ಗಳು) ಹೆಚ್ಚಿನ ಆದಾಯ ಮತ್ತು ತೆರಿಗೆ ಸಂಬಂಧಿತ ಉಳಿತಾಯ ಬಯಸುವ ಹೂಡಿಕೆದಾರರಿಗೆ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಿದೆ. ಬ್ಯಾಂಕುಗಳು ನೀಡುವ ಹೆಚ್ಚಿನ ಬಡ್ಡಿ ದರಗಳು ಮತ್ತು ಹೂಡಿಕೆದಾರರ ಹಣದ ರಕ್ಷಣೆ ವಿಷಯದಲ್ಲಿ ಇದು ಹೆಚ್ಚು ಜನಪ್ರಿಯವಾಗಿದೆ.
ಉಳಿತಾಯ ಖಾತೆಗಳಿಗೆ ಹೋಲಿಸಿದರೆ, ಸ್ಥಿರ ಠೇವಣಿಗಳು ಬಡ್ಡಿ ಗಳಿಸುವ ಹೆಚ್ಚಿನ ಸಾಧ್ಯತೆಯನ್ನು ಹೊಂದಿರುತ್ತವೆ. ಇದಲ್ಲದೆ, ಸ್ಥಿರ ಠೇವಣಿ ಹೂಡಿಕೆಯು 1961 ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಅ ಅಡಿಯಲ್ಲಿ ತೆರಿಗೆ ರಿಯಾಯಿತಿ ನೀಡುತ್ತದೆ. ಟ್ಯಾಕ್ಸ್ ಸೇವಿಂಗ್ ಫಿಕ್ಸೆಡ್ ಡೆಪಾಸಿಟ್ ಖಾತೆಯಲ್ಲಿ ಹೂಡಿಕೆ ಮಾಡುವ ಮೂಲಕ ಹೂಡಿಕೆದಾರರು ವರ್ಷಕ್ಕೆ ಗರಿಷ್ಠ 1.5 ಲಕ್ಷ ರೂಪಾಯಿಗಳವರೆಗೆ ತೆರಿಗೆ ರಿಯಾಯಿತಿ ಪಡೆಯಬಹುದು.
ಇದು ನಿಮಗೆ ಹೇಗೆ ಅನುಕೂಲಕರವಾಗಿದೆ? ಸುರಕ್ಷಿತ ಹೂಡಿಕೆ ಆಯ್ಕೆ: ಭಾರತೀಯ ರಿಸರ್ವ್ ಬ್ಯಾಂಕ್ ಹೊಂದಿರುವ ನಿಯಂತ್ರಣದ ಜೊತೆಗೆ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಆIಅಉಅ) ಹೊಂದಿರುವ ವಿಮಾ ಕಾರ್ಯಕ್ರಮದಿಂದಾಗಿ, ಬ್ಯಾಂಕಿನ ಸ್ಥಿರ ಠೇವಣಿ ಯೋಜನೆಯು ತನ್ನ ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದೆ. ಇದರ ಪರಿಣಾಮವಾಗಿ, ಹೂಡಿಕೆದಾರರ ಹಣ ಸುರಕ್ಷಿತವಾಗಿರುತ್ತದೆ.
ಹೆಚ್ಚಿನ ಬಡ್ಡಿ: ಟ್ಯಾಕ್ಸ್ ಸೇವಿಂಗ್ ಫಿಕ್ಸೆಡ್ ಡೆಪಾಸಿಟ್ ಒಂದು ಆಕರ್ಷಕ ಹೂಡಿಕೆ ಆಯ್ಕೆಯಾಗಿದೆ. ಹೆಚ್ಚಿನ ಆದಾಯವನ್ನು ಗಳಿಸುವುದರ ಜೊತೆಗೆ ತೆರಿಗೆ ಹೊಣೆಗಾರಿಕೆಯನ್ನು ಕಡಿಮೆ ಮಾಡಲು ಬಯಸುವವರಿಗೆ ಇದು ಹೆಚ್ಚು ಅನುಕೂಲಕರವಾಗಿದೆ. ಐದು ವರ್ಷಗಳಲ್ಲಿ ಗರಿಷ್ಠ 1.5 ಲಕ್ಷ ರೂಪಾಯಿಗಳ ಠೇವಣಿಯ ಮೇಲೆ ಅವರು ಸಾಮಾನ್ಯವಾಗಿ ವಾರ್ಷಿಕ 7-8% ಬಡ್ಡಿಯನ್ನು ಗಳಿಸುತ್ತಾರೆ. ಠೇವಣಿ ಮುಕ್ತಾಯದ ನಂತರ, ತೆರಿಗೆ ಉಳಿತಾಯದ ಸ್ಥಿರ ಠೇವಣಿಯಲ್ಲಿ ಇರಿಸಲಾದ ಹಣವನ್ನು ಬಡ್ಡಿಯ ಜೊತೆಗೆ ಸುಲಭವಾಗಿ ಹಿಂಪಡೆಯಬಹುದು.
ಏಕಗಂಟಿನ ಮೊತ್ತ: ಒಂದೇ ಮೊತ್ತದಲ್ಲಿ ಹೂಡಿಕೆಗೆ ಅವಕಾಶ ಮಾಡಿಕೊಡಲಾಗಿದ್ದು, ಇದು ಹೂಡಿಕೆ ಮಾಡುವವರಿಗೆ ಅತ್ಯಂತ ಪೂರಕವಾಗಿದೆ. ಟ್ಯಾಕ್ಸ್ ಸೇವಿಂಗ್ ಆಯ್ಕೆ: ತೆರಿಗೆ ಅನುಕೂಲವನ್ನು ಪಡೆಯುವ ಕನಿಷ್ಠ ಅವಧಿಯು ಐದು ವರ್ಷಗಳಾಗಿವೆ. ಆದರೆ, ಹೂಡಿಕೆಯ ಅವಧಿಯನ್ನು ಇನ್ನಷ್ಟು ಹೆಚ್ಚು ಕೂಡ ಮಾಡಬಹುದು. ಸ್ಥಿರ ಠೇವಣಿಯ ಮೇಲೆ ಗಳಿಸಿದ ಬಡ್ಡಿಗೆ ಮೂಲದಲ್ಲಿ ತೆರಿಗೆ ಕಡಿತ ಅಂದರೆ ಟಿಡಿಎಸ್ ಅನ್ವಯವಾಗುತ್ತದೆ. ಆದಾಯ ತೆರಿಗೆ 1961 ರ ಸೆಕ್ಷನ್ 80ಸಿ ಅಡಿಯಲ್ಲಿ, ಪ್ರತಿ ವರ್ಷ ರೂ. 1,50,000 ವರೆಗೆ ಆದಾಯ ತೆರಿಗೆ ಕಡಿತಕ್ಕೆ ಹೂಡಿಕೆದಾರರು ಅರ್ಹರಾಗಿರುತ್ತಾರೆ. ಸುಲಭ ಪ್ರಕ್ರಿಯೆ: ತೆರಿಗೆ ಉಳಿತಾಯ ಎಫ್‌ಡಿ ತೆರೆಯುವ ವಿಧಾನವು ಸರಳವಾಗಿದ್ದು, ಹೂಡಿಕೆದಾರರ ಬಳಿ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಪ್ರತಿ ಇದ್ದರೆ ಸಾಕು.
ಯಾಕೆ ಹೂಡಿಕೆ ಮಾಡಬೇಕು?
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಪ್ರತಿ ಗ್ರಾಹಕ ವಿಭಾಗಕ್ಕೂ ಹೊಂದಿಕೆಯಾಗುವ ವಿವಿಧ ಸೌಲಭ್ಯಗಳನ್ನು ಒದಗಿಸುತ್ತದೆ. ಇದರಲ್ಲಿನ ಟ್ಯಾಕ್ಸ್ ಸೇವರ್ ಫಿಕ್ಸೆಡ್ ಡೆಪಾಸಿಟ್ ಜನಪ್ರಿಯ ಹೂಡಿಕೆ ಆಯ್ಕೆಯಾಗಿದೆ. ತೆರಿಗೆ ಕಡಿಮೆ ಮಾಡಿಕೊಳ್ಳುವವರಿಗೆ ಹೆಚ್ಚು ಅನುಕೂಲಕರವಾಗಿದೆ ಮತ್ತು ಇತರ ಬ್ಯಾಂಕ್‌ಗಳಿಗೆ ಹೋಲಿಸಿದರೆ ಹೆಚ್ಚಿನ ಬಡ್ಡಿದರ ನೀಡುತ್ತದೆ. ಉಜ್ಜೀವನ್ ವಾರ್ಷಿಕ 7.2% ರಷ್ಟು ಅಧಿಕ ಬಡ್ಡಿ ದರವನ್ನು ಒದಗಿಸುತ್ತದೆ. ಆಕರ್ಷಕ ಬಡ್ಡಿ ದರ ಪಡೆಯಲು ಹೂಡಿಕೆದಾರರು ಐದು ವರ್ಷ ಹೂಡಿಕೆ ಮಾಡಬೇಕಿದೆ.
ಆಕರ್ಷಕ ಬಡ್ಡಿ ದರಗಳು, ಅವಲಂಬನೆ ಮತ್ತು ಸುರಕ್ಷತೆಯಿಂದಾಗಿ, ತೆರಿಗೆ ಕಡಿಮೆ ಮಾಡಿಕೊಳ್ಳಲು ಬಯಸುವವರಿಗೆ ಮತ್ತು ತಮ್ಮ ಹೂಡಿಕೆಯ ಮೇಲೆ ಉತ್ತಮ ರಿಟರ್ನ್ಸ್ ಪಡೆಯಲು ಬಯಸುವವರಿಗೆ ಇದು ಒಂದು ಉತ್ತಮ ಹೂಡಿಕೆ ಆಯ್ಕೆಯಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ