ತೋಟಬೆಂಗ್ರೆ ರಸ್ತೆ ಕಾಮಗಾರಿಗೆ ಶಾಸಕ ಕಾಮತ್ ಗುದ್ದಲಿ ಪೂಜೆ

Chandrashekhara Kulamarva
0



ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 11ನೇ ಪಣಂಬೂರು ವಾರ್ಡಿನ ತಣ್ಣೀರುಬಾವಿ ತೋಟ ಬೆಂಗ್ರೆ ಮುಖ್ಯ ರಸ್ತೆಯಿಂದ ಬೆಂಗ್ರೆ ಫೆರ್ರಿ ಜೆಟ್ಟಿವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ವೇದವ್ಯಾಸ ಕಾಮತ್ ರವರು ನೆರವೇರಿಸಿದರು.


ನಂತರ ಮಾತನಾಡಿದ ಶಾಸಕರು, ಇಲ್ಲಿನ ರಸ್ತೆ ಅಭಿವೃದ್ಧಿಯ ಅಗತ್ಯದ ಬಗ್ಗೆ ಸ್ಥಳೀಯರ ಬೇಡಿಕೆಯ ಅನುಸಾರವಾಗಿ ನಿಕಟ ಪೂರ್ವ ಪಾಲಿಕೆ ಸದಸ್ಯೆ ಸುನೀತಾ ಅವರು ನಿರಂತರವಾಗಿ ನನ್ನ ಗಮನಕ್ಕೆ ತಂದಿದ್ದರು. ಮುಂದುವರಿದು ಇದೀಗ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಈ ರಸ್ತೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಆಶಿಸಿದರು.


ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷ ವರದರಾಜ್ ಬೆಂಗ್ರೆ, ಮಂದಿರದ ಅಧ್ಯಕ್ಷರುಗಳಾದ ಸುಧಾಕರ ಸಾಲಿಯಾನ್, ಪ್ರಕಾಶ್ ಪುತ್ರನ್, ನವೀನ್ ಕುದ್ರೋಳಿ, ವಿಕ್ರಾಂತ್ ಕುದ್ರೋಳಿ, ಶ್ರೀಕಾಂತ್ ಬೆಂಗ್ರೆ, ಸೆಲೀಂ ಕಸಬಾ, ಸತ್ತಾರ್, ಹಸನಬ್ಬ, ಸೆಮೀರ್, ರಿಯಾಜ್, ಶಾಫಿ, ಮುತ್ತಮ್ಮ, ದಾಕ್ಷಾಯಿಣಿ, ಹೊನ್ನಮ್ಮ, ರಾಧಾ, ಕವಿತಾ ಹಾಗೂ ಪಕ್ಷದ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top