ಬಳ್ಳಾರಿ: ವಿಶ್ವ ಕಲ್ಯಾಣಕ್ಕಾಗಿ ಎಲ್ಲರೂ ಸೇರಿ ನವಕಾರ ಮಹಾಮಂತ್ರ ಜಪ ಮಾಡಬೇಕೆಂದು ಸಮಸ್ತ ಜೈನ್ ಸಮಾಜ ಕರೆ ನೀಡಿದಂತೆ ಜೀತೋ ನೇತೃತ್ವದಲ್ಲಿ ಕಮ್ಮಭವನದಲ್ಲಿ ಮತ್ತು ಬಳ್ಳಾರಿ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಬಿಐಟಿಎಂ ಕಾಲೇಜಿನಲ್ಲಿ ಬುಧವಾರ ಬೆಳಿಗ್ಗೆ ನಡೆಯಿತು.
ಒಂದು ಜಪ ಶಾಂತಿಗಾಗಿ ನಾವೆಲ್ಲರೂ ಸೇರಿ ಈ ವಿಶ್ವ ನವಕಾರ್ ಮಹಾಮಂತ್ರ ದಿವಸವನ್ನು ಆಚರಣೆ ಮಾಡಬೇಕಾಗಿ ಕರೆ ನೀಡಲಾಗಿತ್ತು. 108 ದೇಶಗಳು ಮತ್ತು 6 ಸಾವಿರಕ್ಕೂ ಹೆಚ್ಚಿನ ಸ್ಥಳಗಳನ್ನು ಒಗ್ಗೂಡಿಸುವ ಆಧ್ಯಾತ್ಮಿಕ ಕಾರ್ಯಕ್ರಮ ಇದಾಗಿದೆ .
ನೀಲೇಶ್ ಜೈನ್ ಜಿತೋ ಅಧ್ಯಕ್ಷರು ಬಳ್ಳಾರಿ, ರಾಕೇಶ್ ಜೈನ್ ಮುಖ್ಯ ಕಾರ್ಯದರ್ಶಿಗಳು, ಅಲ್ಪೇಶ್ ಜೈನ್, ವಿಕ್ರಂ ಜೈನ್, ಜೀತೋ ಯೂತ್ ವಿಂಗ್‌ನಲ್ಲಿ ಜಿನೇಶ್ ಜೈನ್, ಪ್ರತಿಷ್ಠ ಜೈನ್, ಅಭಿಶೇಕ್ ಜೈನ್, ತರುಣ್ ಜೈನ್, ಲೇಡಿಸ್ ವಿಂಗ್‌ನಲ್ಲಿ ಅರ್ಚನ ಜೈನ್, ಇಂದು ಜೈನ್, ಮಮತ ಜೈನ್, ಸೀಮಾ ಜೈನ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ