ದೋಣಿಮಲೆ ತರಗತಿ ಕೊಠಡಿ ನಿರ್ಮಾಣಕ್ಕೆ ಎನ್‌ಎಂಡಿಸಿ ರೂ. 52.14 ಲಕ್ಷ ಕೊಡುಗೆ

Upayuktha
0




ಬಳ್ಳಾರಿ: ಜಿಲ್ಲೆಯಲ್ಲಿ ಅತ್ಯುತ್ತಮ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸಬಲೀಕರಣ ಗೊಳಿಸಲು ಬದ್ಧವಾಗಿರುವ ಎನ್‌ಎಂಡಿಸಿ ಲಿಮಿಟೆಡ್ ಸಂಸ್ಥೆಯು ತನ್ನ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಯೋಜನೆಯ ಮೂಲಕ ದೋಣಿಮಲೆ ನರಸಿಂಗಪುರ ಗ್ರಾಮದ ಆಕಾಶ್ ನಗರ ಕ್ಯಾಂಪ್‌ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಜೀವನದಲ್ಲಿ ದೊಡ್ಡ ಬದಲಾವಣೆ ತಂದಿದೆ.

ಶಾಲೆಯಲ್ಲಿ ಹೊಸ ತರಗತಿ ಕೊಠಡಿಗಳ ನಿರ್ಮಾಣಕ್ಕೆ 52.14 ಲಕ್ಷಗಳಷ್ಟು ಹೂಡಿಕೆ ಮಾಡಿರುವ ಎನ್‌ಎಂಡಿಸಿ, ಮೂರು ಆಧುನಿಕ ತರಗತಿ ಕೊಠಡಿಗಳ ಕಟ್ಟಡ, ಕಾಂಕ್ರೀಟ್ ರಸ್ತೆ ಮತ್ತು ಮಕ್ಕಳಿಗೆ ಆಟಕ್ಕೆ, ಪ್ರಾರ್ಥನೆಗೆ ಸುಲಭವಾಗಲು ವಿಶಾಲವಾದ ಕಾಂಕ್ರೀಟ್‌ ನೆಲಹಾಸು ನಿರ್ಮಾಣ ಮಾಡಿದೆ. ಈ ಮೂಲಕ ಇಲ್ಲಿನ ಆರ್ಥಿಕವಾಗಿ ಹಿಂದುಳಿದ ವರ್ಗದ ಸಮುದಾಯದ ಶಿಕ್ಷಣದ ಚಿತ್ರಣವನ್ನೇ ಬದಲಾಯಿಸಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.


ಶಾಲೆಯ ತುರ್ತು ಅಗತ್ಯವನ್ನು ಗುರುತಿಸಿದ ಎನ್‌ಎಂಡಿಸಿ ಸಂಸ್ಥೆಯು ಒಂದು ದೂರದೃಷ್ಟಿಯ ಯೋಜನೆಯೊಂದಿಗೆ ಮೂಲಸೌಕರ್ಯ ಮತ್ತು ಶಿಕ್ಷಣದ ವಾತಾವರಣ ಎರಡನ್ನೂ ಗಮನಾರ್ಹವಾಗಿ ಸುಧಾರಿಸಿದೆ. ಜತೆಗೆ 35 ಮೀಟರ್ ಉದ್ದ ಮತ್ತು 15 ಮೀಟರ್ ಅಗಲದ ಹೊಸದಾಗಿ ನಿರ್ಮಿಸಿರುವ ಕಾಂಕ್ರಿಟ್ ನೆಲಹಾಸು ಈಗ ಪ್ರಾರ್ಥನಾ ಕಾರ್ಯಕ್ರಮ ನಡೆಸಲು, ಮನರಂಜನೆ ಮತ್ತು ಆಟಕ್ಕೆ ಸೂಕ್ತ ಸ್ಥಳವಾಗಿ ರೂಪುಗೊಂಡಿದೆ ಮತ್ತು ಪಠ್ಯೇತರ ಚಟುವಟಿಕೆಗಳನ್ನು ನಡೆಸಲು ಅನುವು ಮಾಡಿಕೊಡುತ್ತದೆ ಎಂದು ಮುಖ್ಯ ಶಿಕ್ಷಕರಾದ ಸುರೇಶ್ ಹೇಳಿದರು.


ಎನ್‌ಎಂಡಿಸಿಯ ಈ ಉತ್ತಮ ಪ್ರಯತ್ನಗಳ ಪರಿಣಾಮ ಈಗಾಗಲೇ ಕಂಡುಬಂದಿದೆ. ವಿದ್ಯಾರ್ಥಿಗಳ ಹಾಜರಾತಿ ಮತ್ತು ಒಟ್ಟಾರೆ ಶೈಕ್ಷಣಿಕ ಆಸಕ್ತಿಯಲ್ಲಿ ಗಣನೀಯ ಸುಧಾರಣೆಯಾಗಿದೆ. ಪೋಷಕರು ಈಗ ಅತ್ಯಾಧುನಿಕ ಸ್ಥಳೀಯ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಲು ಪ್ರೋತ್ಸಾಹ ತೋರಿಸುತ್ತಿದ್ದಾರೆ ಮತ್ತು ಉತ್ಸಾಹಿತರಾಗಿದ್ದಾರೆ. ಈ ಹಿಂದೆ ದೂರದ ಖಾಸಗಿ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಮಾತ್ರವೇ ಲಭ್ಯವಿದ್ದ ಇಂತಹ ಸೌಲಭ್ಯಗಳು, ಇದೀಗ ಹತ್ತಿರದ ಶಾಲೆಗಳಲ್ಲಿಯೂ ದೊರೆಯುತ್ತಿರುವುದು ಅವರ ಸಂತಸಕ್ಕೆ ಕಾರಣಾಗಿದೆ ಎಂದು ಪಂಚಾಯತ್ ಸದಸ್ಯ  ಶಿವಕುಮಾರ್ ವಿವರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top