ರಾಜ್ಯದ ಟಾಪ್ 10 ರ‍್ಯಾಂಕ್‌ಗಳಲ್ಲಿ ಆಳ್ವಾಸ್‌ನ 45 ವಿದ್ಯಾರ್ಥಿಗಳು
ಮೂಡುಬಿದಿರೆ: ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಗಳಲ್ಲಿ ಒಟ್ಟು 45 ವಿದ್ಯಾರ್ಥಿಗಳು ರಾಜ್ಯದ ಪ್ರಥಮ 10 ರ‍್ಯಾಂಕ್‌ಗಳಲ್ಲಿ ಸ್ಥಾನವನ್ನು ಪಡೆಯುವ ಮೂಲಕ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಸಾರ್ವತ್ರಿಕ ದಾಖಲೆಯನ್ನು ನಿರ್ಮಿಸಿದೆ.
ವಿಜ್ಞಾನ ವಿಭಾಗದಲ್ಲಿ ಸಂಸ್ಥೆಯ ಬಿಂದು ನವಲೆ, ರಾಜ ಯದು ವಂಶಿ ಯಾದವ್ ಹಾಗೂ ವಿಜೇತ್ ಜಿ ಗೌಡ 598 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಅಕ್ಷಯ್ ಎಂ. ಹೆಗ್ಡೆ ಹಾಗೂ ಪ್ರೇಕ್ಷಾ ಎಂ. ಎಸ್. 597 ಅಂಕಗಳೊAದಿಗೆ ತೃತೀಯ ಸ್ಥಾನ, ಪದ್ಮಾವತಿ ಮಲ್ಲೇಶಪ್ಪ 596 ಅಂಕಗಳೊಂದಿಗೆ 4ನೇ ಸ್ಥಾನ, ದರ್ಶನ್ ಶೆಟ್ಟಿ 595 ಅಂಕಗಳೊಂದಿಗೆ 5ನೇ ಸ್ಥಾನ, ವೈಭವ್ ಎಂ, ಚೈತನ್ಯ, ಸ್ಪಂದನ 594 ಅಂಕಗಳೊಂದಿಗೆ 6ನೇ ಸ್ಥಾನ, ವರ್ಷಾ 593 ಅಂಕಗಳೊಂದಿಗೆ 7ನೇ ಸ್ಥಾನ, ನೇತ್ರಾ ಪಾಲ್, ಸೃಷ್ಟಿ, ಚಿನ್ಮಯಿ, ಪ್ರಣಾಮ್ ಶೆಟ್ಟಿ, ಸುಧಾಂಶು, ಸಂಪನ್ ನಾಯಕ್ 592 ಅಂಕಗಳೊಂದಿಗೆ 8ನೇ ಸ್ಥಾನ, ಆವೇಶ್ ಹಸನ್, ವೈಷ್ಣವಿ, ತರುಣ್ 591 ಅಂಕಗಳೊಂದಿಗೆ 9ನೇ ಸ್ಥಾನ, ಅಕ್ಷರ, ಜಶ್‌ವಂತ್, ಮೋಕ್ಷ, ಸಂಪದ ಜೆ. 590 ಅಂಕಗಳೊಂದಿಗೆ 10ನೇ ಸ್ಥಾನ ಗಳಿಸುವ ಮೂಲಕ 24 ವಿದ್ಯಾರ್ಥಿಗಳು ರಾಜ್ಯದ ಟಾಪ್ 10 ರ‍್ಯಾಂಕ್ ಗಳಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಪ್ರಣಯ್ ಹಾಗೂ ವೈಷ್ಣವಿ ಪ್ರಸಾದ್ ಭಟ್ 597 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ತೃತೀಯ ಸ್ಥಾನ, ಸನ್ನಿಧಿ, ಶಾರೆಲ್ ಲವಿಟ ರೋಡ್ರಿಗಸ್ ಹಾಗೂ ವಿಸ್ಮಯ ಭಟ್ 595 ಅಂಕಗಳನ್ನು ಗಳಿಸುವ ಮೂಲಕ 5ನೇ ಸ್ಥಾನ, ವೈಷ್ಣವಿ ಶೆಟ್ಟಿ 594 ಅಂಕಗಳೊಂದಿಗೆ 6ನೇ ಸ್ಥಾನ, ಚಿರಂತನ 593 ಅಂಕಗಳೊಂದಿಗೆ 7ನೇ ಸ್ಥಾನ, ಅವನಿ, ನಂದೀಶ್, ಅದಿತಿ,ನಬಿಹಾ ಸಯ್ಯದ್ 592 ಅಂಕಗಳೊಂದಿಗೆ 8ನೇ ಸ್ಥಾನ, ಶ್ರವಣ್, ವಚನ್, ಕೃಷ್ಣ ವರ್ಮಾ, ಜತಿನ್, ನಿಯತಿ, ತೃಪ್ತಿ 591 ಅಂಕಗಳೊಂದಿಗೆ 9ನೇ ಸ್ಥಾನ, ರೋಹಿತ್ ಪೂಜಾರಿ, ಹರ್ಷವರ್ಧನ 590 ಗಳಿಸುವ 10ನೇ ಸ್ಥಾನ ಗಳಿಸುವ ಮೂಲಕ 19 ವಿದ್ಯಾರ್ಥಿಗಳು ಟಾಪ್ 10 ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಕಲಾ ವಿಭಾಗದಲ್ಲಿ ಪ್ರಕೃತಿ ಎನ್ 591 ಅಂಕಗಳನ್ನು ಗಳಿಸಿ 7ನೇ ಸ್ಥಾನ ಹಾಗೂ ಬನಾವತ್ ಮಯೂಖ 589 ಅಂಕಗಳನ್ನು ಪಡೆಯುವ ಮೂಲಕ 9ನೇ ಸ್ಥಾನ ಗಳಿಸುವ ಮೂಲಕ 2 ವಿದ್ಯಾರ್ಥಿಗಳು ರಾಜ್ಯದ ಟಾಪ್ 10ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
590ಕ್ಕಿಂತಲೂ ಅಧಿಕ ಅಂಕಗಳನ್ನು 44 ವಿದ್ಯಾರ್ಥಿಗಳು, 588ಕ್ಕಿಂತಲೂ ಅಧಿಕ 93, 570ಕ್ಕಿಂತ ಅಧಿಕ 468, 540ಕ್ಕಿಂತ ಅಧಿಕ 1317, 510ಕ್ಕಿಂತ ಅಧಿಕ ಅಂಕಗಳನ್ನು 1948 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
5 ವಿಷಯಗಳಲ್ಲಿ 100ಕ್ಕೆ ನೂರು ಅಂಕಗಳನ್ನು 4 ವಿದ್ಯಾರ್ಥಿಗಳು, 4 ವಿಷಯಗಳಲ್ಲಿ 09, 3 ವಿಷಯಗಳಲ್ಲಿ 47, 2 ವಿಷಯಗಳಲ್ಲಿ 123, 1 ವಿಷಯದಲ್ಲಿ 343 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ಕನ್ನಡ ವಿಷಯದಲ್ಲಿ 117, ಸಂಸ್ಕೃತದಲ್ಲಿ 65, ರಸಾಯನ ಶಾಸ್ತ್ರದಲ್ಲಿ 26, ಗಣಿತದಲ್ಲಿ 124, ಜೀವಶಾಸ್ತ್ರದಲಿ 106, ಗಣಕ ವಿಜ್ಞಾನದಲ್ಲಿ 29, ಸಂಖ್ಯಾಶಾಸ್ತ್ರದಲ್ಲಿ 44, ಅರ್ಥಶಾಸ್ತ್ರದಲ್ಲಿ 25, ಬ್ಯುಸಿನೆಸ್ ಸ್ಟಡೀಸ್‌ನಲ್ಲಿ 36, ಅಕೌಂಟೆನ್ಸಿ-36, ಬೇಸಿಕ್ ಮ್ಯಾತ್ಸ್‌ನಲ್ಲಿ 22 ವಿದ್ಯಾರ್ಥಿಗಳು 100ಕ್ಕೆ ನೂರು ಅಂಕಗಳನ್ನು ಗಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲರಾದ ಪ್ರೊ. ಎಂ. ಸದಾಕತ್, ಕಾಮರ್ಸ್ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ, ಕಲಾ ವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ