ಬಳ್ಳಾರಿ : ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏ.19 ರಂದು “ಮಂದಾರ-2025” ವಾರ್ಷಿಕೋತ್ಸವ ಸಮಾರಂಭ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.
ದಿನಾಂಕ 19.04.2025 ಶನಿವಾರ ಸಂಜೆ 06.00ಕ್ಕೆ ಜರುಗುವ ಶೈಕ್ಷಣಿಕ ಹಾಗೂ ಕ್ರೀಡಾ ಪುರಸ್ಕಾರ – 2025 ಸಮಾರಂಭಕ್ಕೆ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಕಣೇಕಲ್ ಮಹಾಂತೇಶ್, ಉಪಾಧ್ಯಕ್ಷರು, ವೀ.ವಿ.ಸಂಘ, ಬಳ್ಳಾರಿ. ಹಾಗೂ ಆರ್.ವೈ.ಎಂ.ಇ.ಸಿ. ಅಧ್ಯಕ್ಷರಾದ ಜಾನೇಕುಂಟೆ ಬಸವರಾಜ, ವೀ.ವಿ.ಸಂಘದ ಕಾರ್ಯದರ್ಶಿಗಳು, ಡಾ. ಅರವಿಂದ ಪಟೇಲ್ ಸಹ ಕಾರ್ಯದರ್ಶಿಗಳು ಯಾಳ್ಪಿ ಮೇಟಿ ಪಂಪನಗೌಡ, ಕೋಶಾಧಿಕಾರಿಗಳು ಬೈಲುವದ್ದಿಗೇರಿ ರ‍್ರಿಸ್ವಾಮಿ, ಆರ್.ವೈ.ಎಂ.ಇ.ಸಿ - ಆಡಳಿತ ಮಂಡಳಿ ಸದಸ್ಯರು ಪ್ರಭು ಸ್ವಾಮಿ.ಎಸ್.ಎಂ, ಬಾಡದ ಪ್ರಕಾಶ್ ಘನ ಉಪಸ್ಥಿತಿಯಲ್ಲಿ ಉದ್ಘಾಟನೆ ಸಮಾರಂಭ ಜರುಗುವುದು.
ಮುಖ್ಯ ಅತಿಥಿಗಳಾಗಿ ಬಳ್ಳಾರಿ-ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ , ಹಾಗೂ ಡಾ.ಎ.ಚನ್ನಪ್ಪ ಕುಲ ಸಚಿವರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ಹಾಗೂ ಶ್ರೀನಿವಾಸ ರಾಮಾನುಜಮ್ ಕಂದುರಿ ಮುಖ್ಯ ಕಾರ್ಯಪಡೆ ವ್ಯವಾಸ್ಥಾಪಕ, ಟಿ.ಸಿ.ಎಸ್, ಬೆಂಗಳೂರು ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಆಜೀವ ಸದಸ್ಯರು, ಇವರುಗಳ ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಜರುಗುವುದು, ವಿದ್ಯಾರ್ಥಿಗಳಿಗೆ ಮುಂದಿನ ಜೀವನದ ಭವಿಷ್ಯತ್ತಿಗಾಗಿ ಕೆಲವು ಸೂಕ್ತ ಸಲಹೆಗಳನ್ನು ನೀಡುವರು.
ಅಲ್ಲದೇ ಬಹುಮಾನ ವಿತರಣಾ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಹಾಗೂ ಶಿಕ್ಷಕವೃಂದ, ವಿದ್ಯಾರ್ಥಿವೃಂದದವರು, ಭಾಗವಹಿಸಲಿದ್ದಾರೆ ಎಂದು ಡಾ|| ಟಿ.ಹನುಮಂತರೆಡ್ಡಿ ಪ್ರಾಂಶುಪಾಲರು, ಆರ್.ವೈ.ಎಂ.ಇ.ಸಿ, ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ