ಮಂಜುನಾಥ ಪೈ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ ಸಂಭ್ರಮದ ಜಾನಪದ ಹಬ್ಬ

Upayuktha
0



ಕಾರ್ಕಳ: ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಭ್ರಮದ ಜಾನಪದ ಉತ್ಸವ ದಿನಾಂಕ 28-3-2025 ರಂದು ನಡೆಯಿತು. ಪ್ರಾಂಶುಪಾಲರಾದ ಡಾ.ಸುರೇಶ್ ರೈಯವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಖ್ಯಾತ ಸಾಹಿತಿ ಹಾಗೂ ನಿವ್ರತ್ತ ಅಧ್ಯಾಪಕರರಾದ ಮುನಿರಾಜ ರೆಂಜಾಳ ಅವರು ತುಳುವರು ಮೂಲತಃ ಮ್ರದು ಸ್ವಭಾವವನ್ನು ಹೊಂದಿದ್ದು ಎಲ್ಲಾ ಸಂಸ್ಕೃತಿಯ ಜನರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. 


ವಸಾಹತು ಶಾಹಿ ಆಧುನಿಕತೆಯ ಪ್ರಭಾವವನ್ನು ಸಮರ್ಥವಾಗಿ ತುಳುವರು ನಿಭಾಯಿಸಿ ಇಂದಿಗೂ ಕೂಡಾ ತನ್ನ ತನವನ್ನು ಉಳಿಸಿ ಕೊಂಡಿದ್ದಾರೆ. ತುಳುನಾಡಿನ ಸಂಸ್ಕೃತಿಗಳ ನ್ನು ಉಳಿಸಿ ಬೆಳಸುವುದು ನಮ್ಮ ತಲೆಮಾರಿನ ಅತ್ಯಂತ ಮುಖ್ಯ ಜವಾಬ್ದಾರಿ ಎಂದು ನುಡಿದರು. ಇಂದಿನ ಯುವ ತಲೆಮಾರು ಆಧುನಿಕ ಜೀವನ ಶೈಲಿ ಗೆ ಮಾರು ಹೋಗುತ್ತಿದೆ. ಅವರಿಗೆ ಇಂತಹ ಜಾನಪದ ಸಂಸ್ಕೃತಿಗಳ ಅನಾವರಣ ಮಾಡುವುದು ಅತ್ಯಂತ ಅಗತ್ಯ ಎಂದು ಪ್ರತಿಪಾದಿಸಿದರು. ಕಾರ್ಯಕ್ರಮ ದ ಗಂಭೀರವಾದ ಆಯೋಜನೆ ಹಾಗೂ ವಿದ್ಯಾರ್ಥಿಗಳ ಉತ್ಸಾಹದ ಭಾಗವಹಿಸುವಿಕೆಗೆ ಮುಕ್ತಕಂಠದಿಂದ ಪ್ರಶಂಸೆ ಸಲ್ಲಿಸಿದರು.


ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದ ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲರಾದ ವರ್ಮ ಅಜ್ರಿ ರವರು ಜಾನಪದ ನಮ್ಮ ಬದುಕಿನ ಅಂತ:ಸತ್ವ. ಈ ಸಂಸ್ಕೃತಿಯನ್ನು ಅತ್ಯಂತ ಜತನದಿಂದ ಕಾಪಾಡುವ ಜವಾಬ್ದಾರಿ ನಮ್ಮ ನಿಮ್ಮ ಲ್ಲರದು ಎಂದು ನುಡಿದರು. ಈ ಕಾಲೇಜು ಇಂತಹ ಕಾರ್ಯಗಳನ್ನು ಇನ್ನೂ ನಡೆಸಲಿ ಎಂದು ಹಾರೈಸುದರು. 


ಇನ್ನೊರ್ವ ಮುಖ್ಯ ಅತಿಥ ಹರೀಶ್ ಹೆಗ್ಡೆಯವರು ಕಾರ್ಯಕ್ರಮ ಕ್ಕೆ ಶುಭ ಹಾರಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಮಿತಿ, ಲಲಿತಕಲಾ ಸಂಘ ಹಾಗೂ ಐಕ್ಯೂ ಎಸಿ ಯ ಆಶ್ರಯದಲ್ಲಿ ನಡೆದ ಈ ಕಾರ್ಯ ಕ್ರಮದಲ್ಲಿ ವಿದ್ಯಾರ್ಥಿಗಳು 17 ಅಂಗಡಿಗಳಲ್ಲಿ ನಮ್ಮ ಹಿರಿಯರು ಉಪಯೋಗಿಸಿದ ಹಾಗೂ ತಿನ್ನುತ್ತಿದ್ದ ತಿಂಡಿ ತಿನಿಸುಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಿದರು. 


ಬೋಧಕರು ಕೂ ಜಾನಪದೀಯ ತಿಂಡಿಗಳನ್ನು ಪ್ರದರ್ಶನ ಮಾಡಿದ್ದರು. ಅಲ್ಲದೆ ನಮ್ಮ ಜನಪದರು ಬಳಸಿದ್ದ ವಸ್ತುಗಳನ್ನು ಪ್ರದರ್ಶನ ಮಾಡಲಾಯಿತು. ಜಾನಪದೀಯ ವಿಷಯಗಳ ಪುಸ್ತಕಗಳನ್ನು ಪ್ರದರ್ಶನ ಹಾಗೂ ಜಾನಪದ ಆಟಗಳನ್ನು,  ಜಾನಪದೀಯ ಧಾರ್ಮಿಕ ವಿಷಯಗಳ ಪ್ರಾತ್ಯಕ್ಷಿಕೆಯನ್ನು ಕೂಡಾ ನಡೆಸಲಾಯಿತು. ಅಲ್ಲದೆ ನಮ್ಮ ಹಿರಿಯರ ರೀತಿ ರಿವಾಜುಗಳನ್ನು ಎಲ್ಲಾ ವಿದ್ಯಾರ್ಥಿಗಳಿಗರ ಮನವರಿಕೆ ಮಾಡಿ ಕೊಡಲಾಯಿತು.


ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಸುರೇಶ್ ರೈ ವಹಿಸಿ ಕಾರ್ಯಕ್ರಮ ದ ಮಹತ್ವದ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ. ಚಂದ್ರಾವತಿ, ಐಕ್ಯೂ ಎಸಿ ಸಂಚಾಲಕಿ ಸುಷ್ಮಾ ರಾವ್ ಹಾಗೂ ಲಲಿತ ಕಲಾ ವಿಭಾಗದ ಸಂಚಾಲಕಿ ಶ್ರೀ ಮತಿ ಮೈತ್ರಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter     

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top