‘ಪ್ರವಾಸದ ಆ ದಿನಗಳು’ ಪ್ರವಾಸ ಕಥನ ಪುಸ್ತಕ ಲೋಕಾರ್ಪಣೆ

Upayuktha
0

ಕು. ವಿಹಾರಿಕಾ ಅಂಜನಾ ಹೊಸಕೇರಿ ಅವರು ಬರೆದಿರುವ ‘ಪ್ರವಾಸದ ಆ ದಿನಗಳು’ ಪ್ರವಾಸ ಕಥನ ಪುಸ್ತಕ ಲೋಕಾರ್ಪಣೆ ಸಮಾರಂಭ.


ಬೆಂಗಳೂರು: ಉದಯ ಪ್ರಕಾಶನ ಇವರ ಆಶ್ರಯದಲ್ಲಿ ಕು. ವಿಹಾರಿಕಾ ಅಂಜನಾ ಹೊಸಕೇರಿ ಅವರು ಬರೆದಿರುವ ‘ಪ್ರವಾಸದ ಆ ದಿನಗಳು’ ಪ್ರವಾಸ ಕಥನ ಪುಸ್ತಕ ಲೋಕಾರ್ಪಣೆ ಸಮಾರಂಭವನ್ನು ನಗರದ ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಕನ್ನಡ ಸಾಹಿತ್ಯ ಪರಿಷತ್ತಿನ “ಕುವೆಂಪು ಸಭಾಂಗಣ”ದಲ್ಲಿ ಆಯೋಜಿಸಲಾಗಿತ್ತು.


“ಪ್ರವಾಸದ ಆ ದಿನಗಳು” ಪ್ರವಾಸ ಕಥನ ಗ್ರಂಥವನ್ನು ಡಾ. ಎಚ್.ಎಲ್. ಪುಷ್ಪ, ಅಧ್ಯಕ್ಷರು, ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು ಇವರು ಲೋಕಾರ್ಪಣೆ ಮಾಡಿದರು. ಬೆಂಗಳೂರಿನ ಪ್ರೊ. ಸುಕನ್ಯಾ ಬಿ. ಮಾರುತಿ, ಖ್ಯಾತ ಕವಯಿತ್ರಿ ಮತ್ತು ನಿವೃತ್ತ ಕನ್ನಡ ಪ್ರಾಧ್ಯಾಪಕರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.


ಡಾ. ರವಿಶಂಕರ್ ಎ.ಕೆ., ಕನ್ನಡ ಸಹಾಯಕ ಪ್ರಾಧ್ಯಾಪಕರು, ಕ್ರಿಸ್ತು ಜಯಂತಿ ಕಾಲೇಜು ಬೆಂಗಳೂರು ಇವರು ಗ್ರಂಥವನ್ನು ಕುರಿತು ಮಾತನಾಡಿದರು. ನಂತರ ಲೇಖಕಿ ಕು. ವಿಹಾರಿಕಾ ಅಂಜನಾ ಹೊಸಕೇರಿ ಅವರು ಈ ಪ್ರವಾಸ ಕಥನ ಗ್ರಂಥವನ್ನು ಕುರಿತು ತಮ್ಮ ಅನುಭವವನ್ನು ಹಂಚಿಕೊಂಡರು. ಶಾಸ್ತ್ರಚೂಡಾಮಣಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ವಿಶ್ರಾಂತ ಕುಲಪತಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು ಇವರು ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter     


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top