PM ಇಂಟರ್ನ್‌ಶಿಪ್ ಯೋಜನೆಗೆ ಅರ್ಜಿ ಸಲ್ಲಿಕೆಗೆ ಏಪ್ರಿಲ್ 15 ಕೊನೆ ದಿನ

Chandrashekhara Kulamarva
0




ನವದೆಹಲಿ: ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆಯಡಿ ಈಗಾಗಲೇ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 15 ಕೊನೆಯ ದಿನವಾಗಿರುತ್ತದೆ. 

21-24 ವರ್ಷದ ಕನಿಷ್ಠ ಹತ್ತನೇ ತರಗತಿ ಉತ್ತೀರ್ಣರಾದ ಮತ್ತು ವಾರ್ಷಿಕ 8 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇಂಟರ್ನ್‌ಶಿಪ್‌ಗೆ  ಪ್ರಮುಖ ಕಂಪನಿಗಳಲ್ಲಿ 12 ತಿಂಗಳ ಅವಕಾಶದೊಂದಿಗೆ ಮಾಸಿಕ ಸಹಾಯಧನ ಮತ್ತು ವಿಮಾ ಸೌಲಭ್ಯ ಸಿಗಲಿವೆ. 


ಈ ಯೋಜನೆಯನ್ನು, 2024 ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಯಿತು. ಮುಂದಿನ ಐದು ವರ್ಷಗಳಲ್ಲಿ ಯುವಕರಿಗೆ 1 ಕೋಟಿ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.


ಭಾರತದ ಪ್ರಮುಖ ಕಂಪನಿಗಳಲ್ಲಿ 12 ತಿಂಗಳ ಇಂಟರ್ನ್‌ಶಿಪ್ ಗೆ ಭಾರತ ಸರ್ಕಾರದಿಂದ ಮಾಸಿಕ 4500 ರೂ. ಮತ್ತು ಕಂಪನಿಯಿಂದ 500 ರೂ. ಸಹಾಯಧನ. ಆಕಸ್ಮಿಕ ವೆಚ್ಚಗಳಿಗಾಗಿ 6000 ರೂ.ಗಳ ಒಂದು  ಅನುದಾನ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಅಡಿಯಲ್ಲಿ ಪ್ರತಿ ಇಂಟರ್ನಿಗೆ ರಕ್ಷಣೆ ಇರುತ್ತದೆ. 


ಅಭ್ಯರ್ಥಿ ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು. ಪ್ರಮುಖ ಸಂಸ್ಥೆಗಳಿಂದ (ಐಐಟಿಗಳು ಮತ್ತು ಐಐಎಂಎಸ್) ಪದವಿ ಪಡೆದಿದ್ದು, ಪೂರ್ಣ ಸಮಯದ ಉದ್ಯೋಗದಲ್ಲಿರಬಾರದು. ಕುಟುಂಬದ ಆದಾಯವು ವಾರ್ಷಿಕ 8 ಲಕ್ಷ ರೂ. ಮೀರಬಾರದು. ಸರ್ಕಾರಿ ನೌಕರರ ಕುಟುಂಬಗಳು ಇದಕ್ಕೆ ಅರ್ಹರಾಗಿರುವುದಿಲ್ಲ.


إرسال تعليق

0 تعليقات
إرسال تعليق (0)
To Top