ಉಡುಪಿ: 2023-24ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಗಳಲ್ಲಿ ನಾಲ್ಕು ರ‍್ಯಾಂಕ್ ಗಳು ದೊರೆತಿವೆ. ಬಿ.ಸಿ.ಎ ಯ ಕು. ಪ್ರತೀಕ್ಷಾ ಹಾಗೂ ಕು. ರ‍್ಷಿಣಿ ಏಳನೇ ರ‍್ಯಾಂಕ್ . ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಎಂ.ಎಸ್ಸಿ. (ರಸಾಯನಶಾಸ್ತ್ರ) ದಲ್ಲಿ ಕು. ಮೆಲಿಷಾ ಡಿ ಸಾ ದ್ವಿತೀಯ ರ‍್ಯಾಂಕ್ , ಎಂ. ಕಾಂ. ನಲ್ಲಿ ಕು. ಶ್ರೇಯಾ ಏಳನೇ ರ‍್ಯಾಂಕ್ ಪಡೆದಿದ್ದಾರೆ.
ಎಂ.ಎಸ್ಸಿ ಗಣಿತಶಾಸ್ತ್ರ ದಲ್ಲಿ 2ನೇ ಸ್ಥಾನ ಪಡೆದ ಕು. ಅನುಷಾ ಇವರು ರಾಮಾನುಜನ್ ನಗದು ಪುರಸ್ಕಾರಕ್ಕೆ ಹಾಗೂ ಕು. ಅಪೇಕ್ಷಾ ಪೂಜಾರಿ ಇವರು ಎಂ.ಎ ರಾಜ್ಯಶಾಸ್ತ್ರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಸಿಪ್ರಿಯನ್ ಕರ‍್ಮೆಲ್ಲೋ ನಗದು ಬಹುಮಾನಕ್ಕೆ ಭಾಜನರಾಗಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಪ್ರಾಂಶುಪಾಲರಾದ ಡಾ. ಶ್ರೀಧರಪ್ರಸಾದ ಕೆ. ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ