ಪ್ರೇಕ್ಷಕರ ಕಣ್ಮನ ಸೆಳೆದ "ಶ್ರೀಕೃಷ್ಣ ಲೀಲಾ" ನೃತ್ಯ ಪ್ರದರ್ಶನ

Chandrashekhara Kulamarva
0


ಬೆಂಗಳೂರು
: ಪರಮಪೂಜ್ಯ ಶ್ರೀ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ನೆಲಮಂಗಲದ ಶ್ರೀ ಗಣೇಶ ನೃತ್ಯಾಲಯ ಸಂಗೀತ ಮತ್ತು ನೃತ್ಯ ಶಾಲೆಯ ಗುರುಗಳಾದ ವಿದುಷಿ ಭಾವನಾ ಗಣೇಶ್ ಮತ್ತು ವಿದ್ವಾನ್  ಎಂ.ಡಿ. ಗಣೇಶ್ ದಂಪತಿ ತಮ್ಮ  ನೃತ್ಯ ಶಾಲೆಯ ಸುಮಾರು 35 ವಿದ್ಯಾರ್ಥಿಗಳೊಂದಿಗೆ "ಶ್ರೀಕೃಷ್ಣ ಲೀಲಾ" ನೃತ್ಯ ಪ್ರದರ್ಶನ ನೀಡಿದರು,. ಈ ಪ್ರದರ್ಶನವು ಕಿಕ್ಕಿರಿದು ನೆರೆದಿದ್ದ ಭಕ್ತಾದಿಗಳ ಕಣ್ಮನ ಸೆಳೆಯಿತು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು.

إرسال تعليق

0 تعليقات
إرسال تعليق (0)
To Top