ಏ.14: ಕಲ್ಕೂರ ಪ್ರತಿಷ್ಠಾನದಿಂದ ಯುಗಾದಿ, ಬಿಸುಕಣಿ ಪಂಚಾಂಗ ಶ್ರವಣ

Upayuktha
0

 



ಮಂಗಳೂರು: ಹರಿಪಾದಗೈದಿರುವ ವಿಶ್ವೇಶತೀರ್ಥ ಶ್ರೀಪಾದರ ಸಂಸ್ಮರಣೆಯೊಂದಿಗೆ ಹಾಗೂ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ಪರಮಾನುಗ್ರಹದೊಂದಿಗೆ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಯುಗಾದಿ ಮಹೋತ್ಸವ, ವಿಷು ಕಣಿ (ಫಲ, ಪುಷ್ಪಗಳ ಅಲಂಕಾರ ಹಾಗೂ ಪ್ರದರ್ಶನ ದೊಂದಿಗೆ), ಪಂಚಾಂಗ ಶ್ರವಣ ಕಾರ್ಯಕ್ರಮ ಎಪ್ರಿಲ್ 14ರಂದು ಸೋಮವಾರ ಬೆಳಿಗ್ಗೆ ಗಂಟೆ 8.00ರಿಂದ 9.30ರ ತನಕ ಜರಗಲಿರುವುದು.


ಕದ್ರಿ ಕಂಬಳ ರಸ್ತೆಯ ಮಂಜುಪ್ರಾಸಾದ ನಿಲಯದ ವಾದಿರಾಜ ಮಂಟಪದ ವಿಶ್ವೇಶತೀರ್ಥ ವೇದಿಕೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ವೇ। ಮೂ। ಡಾ। ಪ್ರಭಾಕರ ಅಡಿಗ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಜರಗಲಿದೆ. ವೇ|ಮೂ ರವಿ ಅಡಿಗ ಕದ್ರಿ ಇವರು ಪಂಚಾಂಗ ಶ್ರವಣ ನಡೆಸಿ ಯುಗಾದಿ ಸಂದೇಶ ನೀಡಲಿರುವರು.


ರುದ್ರ ಪಾರಾಯಣ ಬಳಗ, ಲ್ಯಾಂಡ್‌ಲಿಂಕ್ಸ್ ದೇರೆಬೈಲ್ ಇವರಿಂದ ರುದ್ರ ಪಾರಾಯಣ ಮತ್ತು ವಿಷ್ಣು ಸಹಸ್ರನಾಮ ಪಠನ ಹಾಗೂ ಶ್ರೀಮತಿ ಪೂರ್ಣಿಮಾ ರಾವ್ ಪೇಜಾವರ ಮತ್ತು ಶ್ರೀಮತಿ ಶಶಿಪ್ರಭಾ ಐತಾಳ್ ಇವರ ಆಯೋಜಕತ್ವದಲ್ಲಿ ಭಜನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಹೊಸ ವರ್ಷದ ಉಡುಪಿಯ ಶಾಸ್ತೋಕ್ತ ಪಂಚಾಂಗ ವಿತರಣೆ ಮಾಡಲಾಗುವುದು. ಆಸಕ್ತರು ಭಾಗವಹಿಸುವಂತೆ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top