ಆರೋಗ್ಯವೇ ನಿಜವಾದ ಸಂಪತ್ತು: ಡಾ ಸುರೇಶ ನೆಗಳಗುಳಿ
ಉಪ್ಪಳ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಉಪ್ಪಳ ಶಾಖೆಯ ಆಶ್ರಯದಲ್ಲಿ ಕಣಚೂರು ಆಯುರ್ವೇದ ಆಸ್ಪತ್ರೆ ವತಿಯಿಂದ ಶುಕ್ರವಾರ (ಏ.11) ಉಚಿತ ಚಿಕಿತ್ಸಾ ಶಿಬಿರವನ್ನು ನಡೆಸಲಾಯಿತು.
ಮುಂಜಾನೆ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ವೈದ್ಯಕೀಯ ನಿರ್ದೇಶಕ ಡಾ ಸುರೇಶ ನೆಗಳಗುಳಿಯವರು, ಆರೋಗ್ಯವೇ ನಿಜವಾದ ಸಂಪತ್ತು. ಇಂತಹ ಸಂಪತ್ತು ನೀಡುವ ಕಣಚೂರು ಆಯುರ್ವೇದ ಆಸ್ಪತ್ರೆಯಲ್ಲಿ ಪಂಚಕರ್ಮ, ಕ್ಷಾರ ಕರ್ಮ, ಯೋಗ, ಪಿಸಿಯೋಥೆರಪಿ ಸಹಿತ ಎಲ್ಲಾ ಕಾಯಿಲೆಗಳಿಗೂ ತಜ್ಞ ವೈದ್ಯರಿದ್ದು ಅಗತ್ಯವುಳ್ಳ ರೋಗಿಗಳಿಗೆ ಇದು ವರದಾನವಾಗಿದೆ ಎಂದರು.
ಚೇರ್ಮನ್ ಡಾ ಕಣಚೂರು ಹಾಜಿ ಮೋನು ಹಾಗೂ ನಿರ್ದೇಶಕ ಅಬ್ದುಲ್ ರೆಹಮಾನ್ ರವರ ಸೇವೆ ಅನನ್ಯ, ಹಾಗೆಯೇ ಸಮೀಪದಲ್ಲಿಯೇ ಇದೇ ಆಢಳಿತದ ಆಧುನಿಕ ವೈದ್ಯಕೀಯ ಕಾಲೇಜ್ ಆಸ್ಪತ್ರೆಯೂ ಇರುವುದು ಎಲ್ಲಾ ತರಹದ ಕಾಯಿಲೆಗೂ ಅನುಕೂಲ ಎಂದರು.
ವ್ಯಾಪಾರಿ ಭವನದ ಮುಖ್ಯಸ್ಥರಾದ ಜಬ್ಬಾರ್ ಮಂಡ ಅವರು ಮಾತನಾಡುತ್ತ ಕಣಚೂರು ಆಸ್ಪತ್ರೆ ನಮಗೆ ಚಿಕಿತ್ಸಾ ಸೌಲಭ್ಯ ನೀಡುವುದು ನಮ್ಮ ಊರ ಜನರ ಭಾಗ್ಯ ಹಾಗೂ ಇಲ್ಲಿ ಆಗಾಗ ಶಿಬಿರ ನಡೆಸುವ ಬಗ್ಗೆ ಆಹ್ವಾನ ನೀಡಿದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ಕಾರ್ತಿಕ್, ಪಂಚಕರ್ಮ ತಜ್ಞ ಡಾ ಜೈನುದ್ದೀನ್, ಡಾ ಆರ್ಯ, ಡಾ ಚರಣ್ ಎಲಿಯಾಣ, ಡಾ ಆನ್ ಮೇರಿ ಅವರು ರೋಗಿಗಳಿಗೆ ಚಿಕಿತ್ಸಾ ಸಲಹೆ ನೀಡಿದರು.
ದಾದಿಯರಾದ ರಕ್ಷಿತಾ ಸುಪ್ರಿಯಾ, ಎಂ ಆರ್ ಡಿ ಯ ಮೌಸೀತಾ ಫಾರ್ಮಸಿ ಯ ಶ್ರಾವ್ಯ, ಝೋಹ್ರ ಅವರು ಸಹಕರಿಸಿದರು. ಸಂಸ್ಥೆಯ ಪಿ ಆರ್ ಒ ಆಗೋಶ್ ಅವರು ಮೇಲುಸ್ತುವಾರಿ ವಹಿಸಿದ್ದರು. ನೂರಾರು ರೋಗಿಗಳು ಉಚಿತ ಚಿಕಿತ್ಸೆ ಪಡೆದರಲ್ಲದೆ ಅಗತ್ಯ ಉಳ್ಳವರಿಗೆ ಉಚಿತ ಒಳರೋಗಿ ಚಿಕಿತ್ಸೆ ನೀಡುವ ಕರೆ ನೀಡಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ