ಮಂಗಳೂರು: ಬಹು ಓದು ಬಳಗ ಮತ್ತು ಆಕೃತಿ ಆಶಯ ಪಬ್ಲಿಕೇಶನ್ಸ್ ಮಂಗಳೂರು ಇದರ ಸಹಯೋಗದಲ್ಲಿ ಪ್ರಕಟಗೊಂಡ 'ತಾಯಿ ಬೇರು' ಕೃತಿ ಏಪ್ರಿಲ್ 14 ರಂದು, ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಬಲ್ಕತದ ಸಹೋದಯ ಸಭಾಂಗಣದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಸಮಾಜ ಶಾಸ್ತ್ರಜ್ಞ ಡಾ. ಲಕ್ಷ್ಮೀಪತಿ ಸಿ.ಜಿ. ಪುಸ್ತಕ ಬಿಡುಗಡೆ ಗೊಳಿಸಲಿದ್ದಾರೆ. ಚೇಳ್ಳಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ಜ್ಯೋತಿ ಚೇಳ್ಳಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಡಾ. ಸುಧಾರಾಣಿ ಪುಸ್ತಕ ವಿಮರ್ಶೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹಾಗೂ ಸಮಾಜ ಸೇವಕಿ ಮಲ್ಪೆ ಶಾರದಕ್ಕ ಭಾಗವಹಿಸಲಿದ್ದಾರೆ.
ಆಕೃತಿ ಆಶಯ ಪಬ್ಲಿಕೇಶನ್ಸ್‌ನ ಪ್ರಕಾಶಕರ ಕಲ್ಲೂರು ನಾಗೇಶ್ ಉಪಸ್ಥಿತರಿದ್ದು, ಡಾ. ಉಷಾಪ್ರಕಾಶ್ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.
ಬಹು ಓದು ಬಳಗದ ಆರನೇ ಕೃತಿ ಇದಾಗಿದ್ದು ಡಾ. ಪ್ರಕಾಶ್ ಪಿಂಟೊ ಹಾಗೂ ಡಾ. ಶ್ರೀನಿವಾಸ್ ಹೊಡೆಯಾಲ ಈ ಕೃತಿಗೆ ಪ್ರಧಾನ ಸಂಪಾದಕರಾಗಿದ್ದಾರೆ. ಈ ಕೃತಿಯಲ್ಲಿ 73 ಲೇಖನಗಳಗಳನ್ನೊಳಗೊಂಡಿದೆ.
ಡಾ. ಗಿರಿಯಪ್ಪ, ಡಾ. ಸಂತೋಷ್ ಪಿಂಟೋ, ಡಾ. ಆಶಾಲತಾ ಚೇವಾರ್, ಮತ್ತಾಡಿ ಕಾಯರ್‌ಪಲ್ಕೆ, ಡಾ. ಉಷಾ ಪ್ರಕಾಶ್, ಡಾ. ರಾಘವೇಂದ್ರ ಜಿಗಳೂರು, ಡಾ. ಜ್ಯೋತಿ ಪ್ರಿಯಾ, ಡಾ. ಲಕ್ಷ್ಮಣ ಕುಕ್ಕುಡೆ ಈ ಕೃತಿಗೆ ಸಂಪಾದಕರಾಗಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ