ಬಾರ್ ತೆರವುಗೊಳಿಸಿ: ಸಾಗರದ ವಿಜಯನಗರ ಬಡಾವಣೆ ನಾಗರಿಕರಿಂದ ಮನವಿ

Upayuktha
0


ಸಾಗರ: ಸಾಗರದ ವಿಜಯನಗರ ಬಡಾವಣೆಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ವೈನ್ ಶಾಪ್ ಅನ್ನು ತೆರವುಗೊಳಿಸುವಂತೆ ಸ್ಥಳೀಯ ನಾಗರಿಕರು ಸಾಗರ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.


ನಗರ ಸಭಾ ವ್ಯಾಪ್ತಿಯ ವಿಜಯನಗರ ಬಡಾವಣೆಯ ಸಾಗರ-ಭೀಮನಕೋಣೆ ರಸ್ತೆಯ ಬಲಭಾಗದ ವಿನಯ್ ಕುಮಾರ್ ಎಣ್ಣೆ ಬಿನ್ ಮಲ್ಲಿಕಾರ್ಜುನ ಎಣ್ಣೆ ಸಾಗರ ಇವರಿಗೆ ಸೇರಿದ ಹಾಲೀ ಪೇಂಟ್ ಅಂಗಡಿ ಇರುವ ಕಟ್ಟಡದಲ್ಲಿ ಗುಂಡಪ್ಪ ಗೌಡ ಬಿನ್ ತಿಮ್ಮಪ್ಪ ಎಂಬುವರು ಕಾನೂನು ಬಾಹಿರವಾಗಿ ವೈನ್ ಶಾಪ್ ನಡೆಸುತ್ತಿದ್ದಾರೆ. ಈ ವಿಚಾರದಲ್ಲಿ ಯಾರಿಗೂ ಇಂತಹ ಬಾರ್ ನಡೆಸಲು ಅವಕಾಶ ನೀಡಬಾರದೆಂದು ಉಲ್ಲೇಖದ ರೀತ್ಯ ತಮಗೆ ಹಿಂದೆಯೇ ಮನವಿ ಸಲ್ಲಿಸಿದ್ದೆವು. ಆದರೂ ಈ ವರೆಗೆ ಕ್ರಮ ಜರುಗಿಸಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.


ಈ ಸ್ಥಳವು ವಿಜಯ ನಗರ ಬಡಾವಣೆಯ ವ್ಯಾಪ್ತಿಯಲ್ಲಿದ್ದು ಈ ಬಡಾವಣೆ ಸಂಪೂರ್ಣ ವಸತಿ ಉದ್ದೇಶಕ್ಕೆ ಮಾತ್ರ ಭೂ ಪರಿವರ್ತನೆಯಾಗಿದೆ. ಸಮೀಪ ಮಾನ್ಯ ನ್ಯಾಯಾದೀಶರುಗಳ ವಸತಿ ಸಂಕೀರ್ಣ, ಹಾಗೂ ಮಾನ್ಯ ಉಪ ವಿಭಾಗಾಧಿಕಾರಿಗಳ ವಸತಿ ಗೃಹವಿದೆ. ಹತ್ತಿರದಲ್ಲಿ ಉರ್ದು ಶಾಲೆ ಶ್ರೀ ಗಣಪತಿ ದೇವಸ್ಥಾನ ಹಾಗೂ ಗಾಂಧಿನಗರದ ಮಸೀದಿ ಕಟ್ಟಡವಿದೆ. ಅಲ್ಲದೇ ಸಾಗರ ಭೀಮನಕೋಣೆ ರಸ್ತೆಯು ಹೊಸನಗರ ತಾಲ್ಲೂಕು ಬಟ್ಟೆಮಲ್ಲಪ್ಪ ಗ್ರಾಮದವರೆಗೆ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಿ ಸರ್ಕಾರ ಪ್ರಕಟಿಸಿದೆ. ರಾಷ್ಟ್ರೀಯ ಹೆದ್ದಾರಿ ರಸ್ತೆಯ ಬದಿಯಲ್ಲಿ ವೈನ್ ಷಾಪ್ ನಡೆಸಲು ಅನುಮತಿಸಬಾರದೆಂದು ಸರ್ಕಾರದ ನಿರ್ದೇಶನವೇ ಇದೆ.


ಈ ರಸ್ತೆಯು ಮಹಿಳೆಯರು ಮತ್ತು ಶಾಲಾ ಮಕ್ಕಳು ಸದಾ ಓಡಾಡುವ ರಸ್ತೆಯಾಗಿದ್ದು ಇಲ್ಲಿ ವೈನ್ ಶಾಪ್‌ ನಿರ್ಮಾಣದಿಂದ ಅಹಿತಕರ ಘಟನೆಗಳು ಸಂಭವಿಸುತ್ತದೆ. ಈ ಬಡಾವಣೆಯು ಪೂರ್ಣ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆಯಾದ ಸ್ಥಳವಾಗಿದ್ದು ಇದರಲ್ಲಿ ವಾಣಿಜ್ಯ ಉದ್ದೇಶಕ್ಕೆ ಎಂದರೆ ವೈನ್ ಶಾಪ್ ನಡೆಸಲು ಯಾವ ರೀತಿಯಿಂದಲೂ ಅನುಮತಿ ನೀಡಬಾರದೆಂದೂ ಈಗಾಗಲೇ ಅನುಮತಿ ನೀಡಿದ್ದಲ್ಲಿ ಅದನ್ನು ರದ್ದುಗೊಳಿಸುವಂತೆಯೂ ಕೂಡಲೇ ವೈನ್ ಶಾಪ್ ತೆರವುಗೊಳಿಸುವಂತೆ ಸಾಗರ ಉಪವಿಭಾಗಾಧಿಕಾರಿಗಳಿಗೆ ವಿಜಯನಗರ ಬಡಾವಣೆಯ ನಾಗರಿಕರು ಕೋರಿದ್ದಾರೆ.


ಈ ಸಂದರ್ಭದಲ್ಲಿ ಸಾಗರ ನಗರಸಭಾ ಸದಸ್ಯರಾದ ಗಣಪತಿ ಮಂಡಗಳಲೆ, ಸೈಯ್ಯದ್ ಜಾಕೀರ್, ಮಧುಮಾಲತಿ ಕಲ್ಲಪ್ಪ, ರವಿ ಲಿಂಗನಮಕ್ಕಿ, ಅರವಿಂದ ರಾಯ್ಕರ್ ಸತ್ಯನಾರಾಯಣ ಹಾಗೂ ಆ ಭಾಗದ ನಿವಾಸಿಗಳು ಹಾಜರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top