ಉಜಿರೆ: ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನ ಸ್ವಾಮಿ ವಿಷ್ಣುಪದ್ ಮತ್ತು ಅಗ್ನಿಹೋತ್ರಿ ಸೀತಾರಾಮ ಶಾಸ್ತ್ರೀ ಯವರು ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆಯವರಿಗೆ ವಿಶೇಷ ಶಿವಲಿಂಗದ ಬಗ್ಗೆ ಮಾಹಿತಿ ನೀಡಿದರು.
ವಿಶೇಷ ಶಿವಲಿಂಗದ ಹಿನ್ನೆಲೆ: ಮಹ್ಮದ್ ಘಝ್ನಿಯ ದಾಳಿ ಸಂದರ್ಭದಲ್ಲಿ ಭಗ್ನಗೊಂಡಿದ್ದ ಸೋಮವಾಥ ಲಿಂಗದ ಭಾಗವನ್ನು ಸೀತಾರಾಮ ಶಾಸ್ತ್ರೀ ಅವರ ಕುಟುಂಬದವರು ಸಂರಕ್ಷಿಸಿದ್ದರು. ಬಳಿಕ ಅದರಿಂದ ಸಣ್ಣ ಸಣ್ಣ ಶಿವಲಿಂಗವನ್ನು ನಿರ್ಮಿಸಿ ಇಟ್ಟುಕೊಂಡಿದ್ದರು. ಈ ಬಗ್ಗೆ ಪೂಜ್ಯ ಕಂಚಿ ಶಂಕರಾಚಾರ್ಯರನ್ನು ಭೇಟಿಯಾಗಿ ಮಾತನಾಡಿದಾಗ, ನೂರು ವರ್ಷಗಳ ಕಾಲ ಶಿವಲಿಂಗವನ್ನು ಹೊರತೆಗೆಯಬೇಡಿ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಳಿಕ ಬೆಂಗಳೂರಿನ ಶಿವಾರಾಧಕರಾದ ಸ್ವಾಮೀಜಿಯೋರ್ವರಿಗೆ ಲಿಂಗವನ್ನು ಒಪ್ಪಿಸುವಂತೆ ತಿಳಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ