ಇದು 2002 ರಲ್ಲಿ ಬ್ಯಾಂಕುಗಳು ಹಣಕಾಸು ಸಂಸ್ಥೆಗಳ ಸಂರಕ್ಷಣೆಗಾಗಿ ಹುಟ್ಟಿಕೊಂಡ ವಿಶೇಷ ಕಾನೂನು. ಈ ಕಾನೂನಿನ ಸಂಪೂರ್ಣ ಅರ್ಥವೆಂದರೆ "The securitization & reconstruction of Financial Assets & Enforcement of Security Intrest" Act2002.
ಈ ಕಾನೂನಿನ ಮುಖ್ಯ ಉದ್ದೇಶ ಹಣ ಕಾಸು ಸಂಸ್ಥೆಗಳು ನೀಡಿದ ಅಡಮಾನಗಳ ಸಾಲದ ಮೇಲೆ ಸಂಪೂರ್ಣ ಹಕ್ಕು ಹೊಂದಿದ್ದು ಒಂದು ವೇಳೆ ಈ ಸಾಲಗಾರ ದಿವಾಳಿಯಾಗಿ ಸಾಲ ತೀರಿಸುವ ಪರಿಸ್ಥಿತಿಯಲ್ಲಿ ಇಲ್ಲದಾಗ ಆ ಅಡಮಾನದ ಕಟ್ಟಡ ಸ್ಥಳವನ್ನು ಯಾವುದೇ ಕೇೂರ್ಟಿಗೆ ಹೇೂಗದೆ ತನ್ನ ಸ್ವಾಧೀನಕ್ಕೆ ಪಡೆದುಕೊಳ್ಳುವ ಅವಕಾಶ ಮಾಡಿಕೊಡುತ್ತದೆ.
ಈ ಕಾನೂನು ಖಂಡಿತವಾಗಿಯೂ ಹಣಕಾಸು ಸಂಸ್ಥೆಗಳ ಹಿತದೃಷ್ಟಿಯಿಂದ ಅಗತ್ಯ ಅನ್ನುವುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕು. ಆದರೆ ಈ ಹಣಕಾಸು ಸಂಸ್ಥೆ ಕೊಟ್ಟ ಸಾಲದ ಪರಿಣಾಮವಾಗಿ ಈ ಹಣಕಾಸು ಸಂಸ್ಥೆಯಿಂದ ಸಾಲ ಪಡೆದು ಕಮರ್ಷಿಯಲ್ ಕಟ್ಟಡ ಕಟ್ಟಿ ಸಾಮಾನ್ಯ ಜನರಿಗೆ ಮೇೂಸ ಮಾಡಿ ವ್ಯವಹರಿಸಿದಾಗ ಈ ಮೇಲಿನ ಕಾನೂನು ವಿವರಿಸುವುದು ಕೇವಲ ಸಾಲ ನೀಡಿದ ಬ್ಯಾಂಕ್ಗಳ ಹಿತ ರಕ್ಷಣೆ ಮಾಡುತ್ತದೆ ಬಿಟ್ಟರೆ ಈ ಸಾಲ ಪಡೆದು ಮೇೂಸ ಮಾಡಿದವನ ಬಗ್ಗೆ ಆಗಲಿ ಇದಕ್ಕೆ ಮುಂದಿನ ಪರಿಹಾರವೇನು ಅನ್ನುವುದರ ಬಗ್ಗೆಯಾಗಲಿ ವಿವರಣೆ ನೀಡುವುದಿಲ್ಲ.
ನ್ಯಾಯಾಂಗಗಳು ಕೂಡಾ ಇದೇ ಕಾನೂನಿನ ಅಡಿಯಲ್ಲಿ ತೀರ್ಪು ನೀಡಿ ಹಣಕಾಸು ಸಂಸ್ಥೆಗಳ ಹಿತ ರಕ್ಷಣೆ ಮಾಡುತ್ತದೆ ಹೊರತು ಈ ಬಿಲ್ಡರ್ ಗಳು ಹಣಪಡೆದು ಮೇೂಸ ಮಾಡಿದವರಿಗೆ ಮುಂದಿನ ಕ್ರಮವೇನು ಅನ್ನುವುದನ್ನು ವ್ಯಾಖ್ಯಾನ ಮಾಡುವುದಿಲ್ಲ. ಇದರಿಂದಾಗಿ ಸಾಮಾನ್ಯ ಒಬ್ಬ ಬಡ ಗ್ರಾಹಕ ಇಂತಹ ಬಿಲ್ಡರ್ ಗಳಿಂದ ಮೇೂಸವಾಗುವುದನ್ನು ತಡೆಯಲು ಈ ಕಾನೂನಾಗಲಿ ನ್ಯಾಯಾಂಗವಾಗಲಿ ದೃಷ್ಟಿ ಹರಿಸದೇ ಇರುವುದು. ಇಂದು ಚರ್ಚೆಗೆ ಗ್ರಾಸವಾದ ಅಧ್ಯಯನದ ವಿಷಯಯೂ ಹೌದು.
ಕೇಸ್ ಸ್ಟಡಿ:
ಉದಾ: A ಅನ್ನುವ ಒಬ್ಬ ಬಿಲ್ಡರ್ B ಅನ್ನುವ ವ್ಯಕ್ತಿಯಿಂದ ಜಾಗ ಖರೀದಿಸಿ C ಅನ್ನುವ ಹಣಕಾಸು ಸಂಸ್ಥೆಯಿಂದ ಸಾಲ ಪಡೆದು ಪ್ಲ್ಯಾಟೊ, ಕಮರ್ಶಿಯಲ್ ಕಾಂಪ್ಲೆಕ್ಸೋ ಕಟ್ಟಲು ಶುರುಮಾಡುತ್ತಾನೆ. ಈ ನಡುವೆ D ಅನ್ನುವ ಬಡ ಗ್ರಾಹಕ A ಅನ್ನುವ ಬಿಲ್ಡರ್ ನಿಂದ ಮನೆಯನ್ನೊ ಅಥವಾ ಕಮರ್ಶಿಯಲ್ ಕೊಠಡಿಯನ್ನು ಪಡೆಯಲು ಕರಾರಿನ ಮೂಲಕ ಸ್ವಲ್ಪ ಹಣವನ್ನು ನಗದು ರೂಪದಲ್ಲಿಯೊ/ ಬ್ಯಾಂಕ್ ನ ಸಾಲದ ಮೂಲಕವೊ ಹಣವನ್ನು ಬಿಲ್ಡರ್ ಗೆ ನೀಡಿ ಒಪ್ಪಂದ ಮಾಡಿಕೊಂಡಿರುತ್ತಾನೆ.
ಈ ಮಧ್ಯದಲ್ಲಿ ಈ ಬಿಲ್ಡರ್ಸ್ ಸಾಲಕ್ಕೊ ಶೂಲಕ್ಕೊ ಒಳಗಾಗಿ ಕೈ ಚೆಲ್ಲಿ ನಿಂತು ಬಿಡುತ್ತಾನೆ. ಈ ಮೇಲಿನ ಕಾನೂನಿನ ಪ್ರಕಾರ ಬ್ಯಾಂಕಿನವರು ಈ ಬಿಲ್ಡರ್ಸ್ ನ ಜಾಗವನ್ನೊ ಅರ್ಧ ಕಟ್ಟಿದ ಕಟ್ಟಡದ ಆವರಣವನ್ನು ಮುಟ್ಟುಗೇೂಲು ಹಾಕಿಕೊಳ್ಳುತ್ತಾರೆ. ಇದು ಸರಿ, ಆದರೆ ಗ್ರಹಚಾರ ಕೆಟ್ಟ ಒಬ್ಬ ಗ್ರಾಹಕ ಈ ಕಟ್ಟಡ ಒಳಗೆ ಖರೀದಿಸಲು ಮಾಡಿಕೊಂಡ ಮನೆಯಾಗಲಿ, ಕೊಠಡಿಯಾಗಲಿ ಅಥವಾ ಮುಂಗಡವಾಗಿ ಕೊಟ್ಟ ಹಣಕ್ಕಾಗಲಿ ಯಾರು ಹೊಣೆ ಅನ್ನುವುದನ್ನು ಈ ಕಾನೂನು ಆಗಲಿ ಅಥವಾ ನ್ಯಾಯಾಂಗ ವಾಗಲಿ ಯಾವ ರೀತಿಯಲ್ಲಿ ಪರಿಗಣಿಸಬೇಕು ಅನ್ನುವುದು ಇಂದು ನಮ್ಮ ಮುಂದಿರುವ ಅತಿ ದೊಡ್ಡ ಪ್ರಶ್ನೆ. ಇದರಿಂದಾಗಿ ಹತ್ತು ಹಲವು ಪ್ರಶ್ನೆಗಳು ನಮ್ಮ ಮುಂದೆ ಹುಟ್ಟಿಕೊಳ್ಳುತ್ತವೆ.
1. ಈ ರೀತಿಯಲ್ಲಿ ಬ್ಯಾಂಕ್ ಗಳಿಂದ ಸಾಲ ಪಡೆದು ಕಟ್ಟಿದ ಕಟ್ಟಡಗಳನ್ನು ಯಾರೂ ಕೂಡಾ ಖರೀದಿಸಬಾರದು.
2. ಖರೀದಿಸುವಾಗ ಕೂಡಾ ಬ್ಯಾಂಕ್‌ಗಳಿಂದ ಸಂಪೂರ್ಣವಾಗಿ ಸಾಲ ಪಡೆದು ಖರೀದಿಸಬೇಕು. ಯಾಕೆಂದರೆ ಅಲ್ಲಿ ಕೂಡಾ ಈ ಮೇಲಿನ ಬ್ಯಾಂಕ್ ಹಿತ ರಕ್ಷಣಾ ಕಾಯಿದೆ ನಿಮಗೆ ರಕ್ಷಣೆ ನೀಡಬಹುದು ಅನ್ನುವ ಕಾರಣಕ್ಕೆ.
3. ಇಂದು ಅದೆಷ್ಟೊ ಮಂದಿ ಪ್ಲ್ಯಾಟ್ ಕಮರ್ಶಿಯಲ್ ರೂಂಗಳನ್ನು ಖರೀದಿಸಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಆದರೆ ಈ ಬಿಲ್ಡರ್ಸ್ ಬಿಲ್ಡಿಂಗ್ ನ ಪೂರ್ವಾಪರ ಏನು ಅನ್ನುವುದು ತಿಳಿದಿರುವುದಿಲ್ಲ. ಇದಕ್ಕೆ ಮಾಹಿತಿ ನೀಡಿ ಎಚ್ಚರಿಕೆ ನೀಡಬೇಕಾದದ್ದು ಸರ್ಕಾರದ ಕಾನೂನು ತಜ್ಞರ, ಕಾನೂನು ಮಾಹಿತಿ ಪ್ರಾಧಿಕಾರದ ಜವಾಬ್ದಾರಿಯೂ ಹೌದು. ಈ ಕುರಿತಾಗಿ ಹೆಚ್ಚು ಅಧ್ಯಯನ ಚರ್ಚೆ ನಡೆಯಲಿ ಅನ್ನುವ ಸಾರ್ವಜನಿಕ ಹಿತದೃಷ್ಟಿಯಿಂದ ತಮ್ಮ ಮುಂದಿಟ್ಟಿದ್ದೇನೆ.
- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ