ವಿದ್ಯಾರ್ಥಿಗಳು ಯೋಧರಂತೆ ಗುರಿ ಸಾಧಿಸುವ ಉತ್ಸಾಹದಲ್ಲಿರಬೇಕು: ಸುಬ್ರಮಣ್ಯ ನಟ್ಟೋಜ

Upayuktha
0



ಪುತ್ತೂರು: ಸಾಧನಾ ಪಥದಲ್ಲಿ ಗುರಿ ಮುಟ್ಟಲು ವಿದ್ಯಾರ್ಥಿಗಳು ಶಸ್ತ್ರ ಸನ್ನದ್ಧರಾದ ಯೋಧರಂತೆ ಜಾಗೃತರಾಗಿರಬೇಕು. ನಮ್ಮ ನಮ್ಮ ಕರ್ತವ್ಯಗಳನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಬೇಕಾದದ್ದು ನಮ್ಮ ಧರ್ಮ. ವಿದ್ಯಾರ್ಥಿಗಳು ವಿದ್ಯಾರ್ಜನೆಯನ್ನು ಸರಿಯಾದ ರೀತಿಯಲ್ಲಿ ಮಾಡಬೇಕು. ಅಂದಂದು ಮಾಡಬೇಕಾದ ಕೆಲಸ ಕಾರ್ಯಗಳನ್ನು ಅಂದಂದೇ ಮಾಡುವ ಅಭ್ಯಾಸವನ್ನು ವಿದ್ಯಾರ್ಥಿಗಳು ಜಾರಿಗೊಳಿಸಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ವಿದ್ಯಾಥಿಗಳಿಗಾಗಿ ಆರಂಭಿಸಿದ ರಜಾದಿನಗಳ ತರಗತಿಗಳನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ ಸಿಇಟಿ, ನೀಟ್, ತರಗತಿ ಪರೀಕ್ಷೆ, ಸಮಯ ಪಾಲನೆ ಇವುಗಳ ಮಾಹಿತಿ ಹಾಗೂ ಸಲಹೆಗಳನ್ನು ನೀಡಿ ಶುಭ ಹಾರೈಸಿದರು. ತದನಂತರ ನಡೆದ ಒರಿಯಂಟೇಶನ್ ತರಗತಿಯಲ್ಲಿ ಸಿಇಟಿ ಕೋಚಿಂಗ್ ಸಂಯೋಜಕರಾದ ಕಿಶೋರ್ ಭಟ್ ಮಾತನಾಡಿ, ಹೇಗೆ ಓದಬೇಕು? ಯಾವುದನ್ನು ಓದಬೇಕು? ಎಷ್ಟು ಓದಬೇಕು? ಸಮಯದ ಮಹತ್ವ ಮುಂತಾದ ವಿಷಯಗಳ ಬಗ್ಗೆ ತಿಳಿಸಿದರು. ಸಂಸ್ಥೆಯ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. 


ವಿದ್ಯಾರ್ಥಿನಿಯರಾದ ಧರಣಿ ಮತ್ತು ಸುಮೇಧಾ ಪ್ರಾರ್ಥಿಸಿದರು. ಗಣಿತ ಉಪನ್ಯಾಸಕಿ ಜ್ಯೋತಿ ವಿ ಕಾರ್ಯಕ್ರಮ ನಿರೂಪಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top