ಮಂಗಳೂರು: ಕಾವೂರು ಶ್ರೀ ಮಹಾಲಿಂಗೇಶ್ವರ ದೇವರ ಪ್ರತಿಷ್ಠೆ ಪೀಠ ಪ್ರತಿಷ್ಠೆ ಅಷ್ಟಬಂಧ ಕ್ರಿಯೆ ಗುರುವಾರ ವೇದಮೂರ್ತಿ ಕೃಷ್ಣರಾಜ ತಂತ್ರಿ ಕುಡುಪು ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವೃಷಭ ಲಗ್ನದ ಸುಮುಹೂರ್ತದಲ್ಲಿ ಜರಗಿತು.
ಬೆಳಗ್ಗೆ 108 ನಾರಿಕೇಳ ಗಣಪತಿ ಹೋಮ, ಪ್ರತಿಷ್ಠೆ ಹೋಮ, ನಡೆದು ಕುಂಭೇಶ ನಿದ್ರಾ ಕುಂಭಾಭಿಷೇಕ ಜೀವಕಲಶಾಭಿಷೇಕ, ಪ್ರಾಣನ್ಯಾಸ ಪ್ರತಿಷ್ಠಾ ಬಲಿ ಮಹಾಪೂಜೆ ನಡೆದು ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.
ಸಂಜೆ ನಿತ್ಯ ನೈಮಿತ್ತಿಕ ನಿಶ್ಚಯ, ಭದ್ರದೀಪ ಸ್ಥಾಪನೆ ಗರ್ಭಗೃಹ ಕವಾಟ ಬಂಧನ, ಸೋಪಾನ ಪೂಜೆ, ಗಣಪತಿ ಶಾಸ್ತ್ರಾ ದೇವರಿಗೆ ಕಲಶಪೂರಣ ಅಧಿವಾಸ ಹೋಮಗಳು, ರಕೇಶ್ವರಿ ಪೀಠಾಧಿವಾಸ ನಡೆಯಿತು. ಸಹಸ್ರಾರು ಸಂಖ್ಯೆಯ ಭಕ್ತರು ದೇವರ ದರ್ಶನ ಪಡೆದು ಅನ್ನ ಪ್ರಸಾದ ಸ್ವೀಕರಿಸಿದರು.
ಇಂದು ಹೊರೆಕಾಣಿಕೆ ಸಮರ್ಪಣೆ: ಆಕಾಶಭವನ, ದೇರೆಬೈಲು, ಕೊಂಚಾಡಿ, ಮಾಲಾಡಿ ವ್ಯಾಪ್ತಿಯ ಹಸಿರುವಾಣಿ ಹೊರೆಕಾಣಿಕೆ ಮಾ.7ರಂದು ಸಂಜೆ 4.30ಕ್ಕೆ ಮಾಲಾಡಿ ಶ್ರೀ ಜಾರಂದಾಯ ದೈವಸ್ಥಾನ ವಠಾರದಿಂದ ಹೊರಡಲಿದೆ. ಶ್ರೀ ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಕೆ.ವೆಂಕಟರಮಣ ಆಸ್ರಣ್ಣ ಉದ್ಘಾಟಿಸುವರು.
ಸಾಂಸ್ಕೃತಿಕ ಕಾರ್ಯಕ್ರಮ: ಮಾ.7ರಂದು ಮಧ್ಯಾಹ್ನ 2ರಿಂದ ವಿವೇಕ ಜಾಗೃತ ಬಳಗ ಮಂಗಳೂರು ಅವರಿಂದ ಶ್ರೀರಾಮ ರಕ್ಷಾ ಸ್ತೋತ್ರ ಪಠಣ, ಸ್ನೇಹ ಬಳಗ ಕೊಂಚಾಡಿ ಪ್ರಿಯಾ ಅವರಿಂದ ಯಕ್ಷಗಾನ ತಾಳಮದ್ದಳೆ ಶಾಂಭವಿ ವಿಜಯ, ರಾತ್ರಿ 8.30ರಿಂದ ವಿಜಯ ಕುಮಾರ್ ಕೊಡಿಯಾಲಬೈಲು ನಿರ್ದೇಶನದ 'ಶಿವಾಜಿ' ನಾಟಕ ಪ್ರದರ್ಶನಗೊಳ್ಳಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ