ಸಾಗರ: ದೇಶಿ ಸೇವಾ ಬ್ರಿಗೇಡ್ ಸಂಘಟನೆಯ ನಿಟ್ಟೂರು ಭಾಗದ ನೂತನ ಶಾಖೆಗೆ ಇಂದು ಯಶಸ್ವಿಯಾಗಿ ಚಾಲನೆ ನೀಡಲಾಯಿತು.
ಮಹಿಳಾ ಶಕ್ತಿಯು ಕುಟುಂಬದ ಶಕ್ತಿಯಾಗಿ, ಸಮಾಜದ ಶಕ್ತಿಯಾಗಿ ಸರಿಯಾಗಿ ಸದ್ಭಳಕೆಯಾದಾಗ ದೇಶದ ಶಕ್ತಿಯಾಗಿ ಪರಿವರ್ತಿತವಾಗುತ್ತದೆ ಎಂದು ಬ್ರಿಗೇಡ್ ನ ಹಿರಿಯ ಸಲಹೆಗಾರ ಡಾ.ರಾಜು ರವರು ಪ್ರಾಸ್ತಾವಿಕವಾಗಿ ತಿಳಿಸಿದರು.
ನಿಟ್ಟೂರು ಗ್ರಾಮ ಪಂ. ಸದಸ್ಯ ವಿಶ್ವನಾಥ ನಾಗೋಡಿಯವರು ದೇಶಿ ಬ್ರಿಗೇಡ್ ಸಂಘಟನೆಯ ಸಿದ್ಧಾಂತ ಮತ್ತು ಬದ್ಧತೆಯಿಂದ ಮಾಡುವ ಸಾಮಾಜಿಕ ಕಾಳಜಿಯ ಹೋರಾಟವು ರಾಜ್ಯ ಮಟ್ಟದಲ್ಲಿ ಗುರುತಿಸಿ, ಮೆಚ್ಚುಗೆ ಗಳಿಸಿದೆ. ಯಾವುದೇ ಅಂಜಿಕೆಯಿಲ್ಲದೆ ಎಲ್ಲರೂ ಬ್ರಿಗೇಡ್ ನ ಸದಸ್ಯರಾಗಿ ಸೇವೆ ಮತ್ತು ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದರು.
ದೇಶಿ ಸೇವಾ ಬ್ರಿಗೇಡ್ ನಿಟ್ಟೂರು ಶಾಖೆಯ ಅಧ್ಯಕ್ಷರಾಗಿ ಶ್ರೀಮತಿ ರೇಖಾ ಸಂತೋಷ್ ಜೋಗಿ, ಉಪಾಧ್ಯಕ್ಷರಾಗಿ ಶ್ರೀಮತಿ ಗಿರಿಜಾ ಎಂ, ಶ್ರೀಮತಿ ಸುಜಾತ, ಶ್ರೀಮತಿ ಸುಪ್ರೀತಾ ಶೆಟ್ಟಿ, ಶ್ರೀಮತಿ ವಾಣಿ.ಕೆ. ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀಮತಿ ರೇಖಾ ಕೆ ಕಾಮತ್, ವಿಜಯ್ ಸಹ ಕಾರ್ಯದರ್ಶಿಗಳಾಗಿ ಶ್ರೀಮತಿ ಜ್ಯೋತಿ ಪಿ, ಸರೋಜಾ, ಸಂಚಾಲಕರಾಗಿ ನಾಗರಾಜು ಮಣಿಕಂಠ ಇವರು ಸ್ಥಳೀಯರಿಂದಲೇ ಆಯ್ಕೆಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ದೇಶಿ ಬ್ರಿಗೇಡ್ ಅಧ್ಯಕ್ಷ ಎಂ.ಶ್ರೀಧರ ಮೂರ್ತಿ, ಶ್ರೀಪತಿ ಹೆಗಡೆ, ಶ್ರೀಕಾಂತ್ ನಾಯ್ಕ್, ರಾಘವೇಂದ್ರ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ