ಕೊರಗಜ್ಜನ ತುಳು ಭಕ್ತಿಗೀತೆ 'ಕೇಪುಳ ಪ್ರಿಯೆ' ಮೊಗಪ್ಪೆ ಸಾನಿಧ್ಯದಲ್ಲಿ ಬಿಡುಗಡೆ

Upayuktha
0


ಮೊಗಪ್ಪೆ: ತುಳುನಾಡಿನ ಜನಪ್ರಿಯ ಭಕ್ತಿ ಪರಂಪರೆಯಲ್ಲಿ ಮತ್ತೊಂದು ಸಂಚಲನ ಸೃಷ್ಟಿಸಿರುವ ಕೇಪುಳ ಪ್ರಿಯೆ ಕೊರಗಜ್ಜನ ತುಳು ಭಕ್ತಿಗೀತೆ ಸಾನಿಧ್ಯದಲ್ಲಿ ವಿಜೃಂಭಣೆಯಿಂದ ಬಿಡುಗಡೆಯಾಯಿತು.


ಈ ಭಕ್ತಿಗೀತೆಯನ್ನು ಆರ್.ಪಿ. ಕ್ರಿಯೇಷನ್ ಗೌರವಪೂರ್ವಕವಾಗಿ ಅರ್ಪಿಸಿದ್ದು, ನಿರ್ದೇಶಕ ಹಾಗೂ ಗಾಯಕ ರವಿ ಪಾಂಬಾರ್ ಅವರ ಮಾರ್ಗದರ್ಶನದಲ್ಲಿ ಈ ಗೀತೆ ಮೂಡಿಬಂದಿದೆ. ಪ್ರಖ್ಯಾತ ಗಾಯಕಿ ಕುಸುಮ ವೈ.ಎಸ್. ಅವರ ಸಹಗಾಯನ, ಯುವ ಸಾಹಿತಿ ಪ್ರಿಯಾ ಸುಳ್ಯ ಅವರ ಸಾಹಿತ್ಯ ಹಾಗೂ ರೋಹಿತ್ ಕುರಿಕ್ಕಾರ್ ಅವರ ಹಿನ್ನಲೆ ಧ್ವನಿಯು ಈ ಗೀತೆಗೆ ವಿಶೇಷ ಭಾವನಾತ್ಮಕ ಮೂಡಿವೆ.


ಈ ಭಕ್ತಿಗೀತೆ ಬಿಡುಗಡೆ ಕಾರ್ಯಕ್ರಮ 2025 ಮಾರ್ಚ್ 6 ರಂದು ಮಂಗಳವಾರ, ಮೊಗಪ್ಪೆ ಕೊರಗಜ್ಜ ಸಾನಿಧ್ಯದಲ್ಲಿ ಅದ್ದೂರಿಯಾಗಿ ನಡೆಯಿತು. ಈ ಶುಭ ಸಂದರ್ಭದಲ್ಲಿ ಕಾರಣಿಕ ಕೊರಗತನಿಯ ಸಾನಿಧ್ಯದ ಧರ್ಮದರ್ಶಿಗಳಾದ ಶ್ರೀ ಶಾಂತಪ್ಪ ಪೂಜಾರಿ ಮೊಗಪ್ಪೆ ಅವರ ಅಮೃತ ಹಸ್ತದಿಂದ ಈ ಭಕ್ತಿಗೀತೆ ಬಿಡುಗಡೆಯಾಯಿತು.


ಈ ಕಾರ್ಯಕ್ರಮ ಯಶಸ್ವಿಯಾಗಿ ಬಿಡುಗಡೆಯಾಗಲು ಕಾರಣರಾದ ಉಮೇಶ್ ಕುಲಾಲ್ ಮೊಗಪ್ಪೆ, ಅಶೋಕ್ ಪೂಜಾರಿ ಮಾಣಿಮಜಲು, ಪ್ರವೀಣ್ ಪೂಜಾರಿ ಮಾಣಿಮಜಲು, ತನುಷ್ ಹಾಗೂ ತಂತ್ರಜ್ಞರು ಮತ್ತು ಮೊಗಪ್ಪೆ ಕೊರಗಜ್ಜ ಸಾನಿಧ್ಯದ ಸೇವಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top