ಪಡುಬಿದ್ರೆ: ಕಾಪು ಹೊಸ ಮಾರಿಗುಡಿ ಮಾರಿಯಮ್ಮ ಪ್ರತಿಷ್ಟಾ ಬ್ರಹ್ಮ ಕಳಶೋತ್ಸವ ದ ಸಂದರ್ಭದಲ್ಲಿ ಕದ್ರಿ ನವನೀತ ಶೆಟ್ಟಿ ರಚಿಸಿದ "ಮಾರಿಯಮ್ಮ" ಕಥನ -ಸಂಕಥನ ಗ್ರಂಥ ವನ್ನು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜರ್ಷಿ ವಾಸುದೇವ ಶೆಟ್ಟಿ ಅವರು ಬಿಡುಗಡೆ ಮಾಡಿದರು.
ಈ ಕೃತಿಯು ಗ್ರಾಮ ದೇವತೆ ಮಾರಿಯಮ್ಮ ಚರಿತ್ರೆ, ಕರಾವಳಿಯ ಶಕ್ತಿ ದೇವತೆಗಳು, ಭೂತರಾಧನೆ, ಮಾರಿ ಅಮ್ಮನ ಪುರಾಣ ಕಥೆಗಳು, ಮಾರಿ ಆರಾಧನಾ ಕ್ಷೇತ್ರ ವಿಶೇಷ, ಕಾಪು ಮಾರಿ ಅಮ್ಮ.. ಮೊದಲಾದ ಮಾರಿ ದೇವತೆ ಆರಾಧನಾ ವಿಶೇಷತೆಗಳ ಮಾಹಿತಿಯನ್ನು ಹೊಂದಿದೆ.
ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯರ ಮುನ್ನುಡಿ, ಇತಿಹಾಸ ತಜ್ಞ ಡಾ.ಪುಂಡಿಕಾಯ್ ಗಣಪಯ್ಯ ಭಟ್ಟರ ಬೆನ್ನುಡಿ ಇದೆ.
ಕೊರಂಗ್ರಪಾಡಿ ಕುಮಾರ ಗುರು ತಂತ್ರಿಗಳು ಶುಭ ಹಾರೈಸಿದರು. ಅರ್ಚಕ ಕಲ್ಯ ಶ್ರೀನಿವಾಸ ತಂತ್ರಿ,ಬ್ರಹ್ಮ ಕಲಶ ಸಮಿತಿ ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ, ಶಾಸಕ ಗುರ್ಮೆ ಸುರೇಶ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಉಪೇಂದ್ರ ಶೆಟ್ಟಿ ಬೆಂಗಳೂರು, ಡಾ. ದೇವಿ ಪ್ರಸಾದ ಶೆಟ್ಟಿ ಬೆಳಪು, ಪೂನಾದ ಸಂತೋಷ್ ಶೆಟ್ಟಿ ಇನ್ನ ಬಾಳಿಕೆ, ಡಾ. ಬಿ. ನಿಶಾಕಾಂತ ಶೆಟ್ಟಿ, ಕಾರ್ಯದರ್ಶಿ ರಮೇಶ್ ಹೆಗ್ಡೆ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ