ಹುನಗುಂದ: ಸ್ಥಳೀಯ ಹೊನ್ನ ಕುಸುಮ ಸಾಹಿತ್ಯ ವೇದಿಕೆಯಿಂದ ತಿಂಗಳು ಬೆಳಕು ಕಾರ್ಯಕ್ರಮದಡಿಯಲ್ಲಿ ಕತೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿಯವರ ಹವೇಲಿಯ ದೊರೆಸಾನಿ ಕಥಾ ಸಂಕಲನದ ವಿಮರ್ಶೆ ಮಾ.16ರಂದು ವಿಜಯ ಮಹಾಂತೇಶ ಪ.ಪೂ ಕಾಲೇಜಿನಲ್ಲಿ ನೆರವೇರಿತು.
ಅಧ್ಯಕ್ಷತೆ ವಹಿಸಿದ ಎಸ್.ಎಸ್. ಮುಡಪಲದಿನ್ನಿಯವರು ಮಾತನಾಡಿ, ಈ ಭಾಗದ ಮಣ್ಣಿನ ವಾಸನೆ ಈ ಕತೆಗಳಲ್ಲಿವೆ ಓದುಗರ ಮನಸ್ಸನ್ನು ಹಿಡಿದಿಡುವಲ್ಲಿ ಕತೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿಯವರು ಯಶಸ್ವಿಯಾಗಿದ್ದಾರೆಂದು ಅಭಿಪ್ರಾಯಪಟ್ಟರು.
ಕಥಾಸಂಕಲನದ ವಿಮರ್ಶಕರಾಗಿ ಶಿವಶಂಕರ ಮುತ್ತಗಿಯವರು ಮಾತನಾಡಿ, ಹವೇರಿ ದೊರೆಸಾನಿ ಕಥಾ ಸಂಕಲನದಲ್ಲಿ 8 ಕತೆಗಳಿವೆ. ಬುದ್ದನ ಅಷ್ಟಾಂಗ ಯೋಗದಂತೆ ಮಾನವನಿಗೆ ಉನ್ನತ ಸಂದೇಶಗಳನ್ನು ನೀಡುವ ಉತ್ತಮ ಕತೆಗಳಾಗಿವೆ. ಸಮಾಜಮುಖಿ ಚಿಂತನೆಗಳು ಈ ಕತೆಗಳುದ್ದಕ್ಕೂ ಕಾಣಬಹುದು. ಜನಸಮಾನ್ಯರು ಓದಿ ಅರ್ಥೈಸಿಕೊಳ್ಳುವ ಕತೆಗಳಿರುವುದು ವಿಶೇಷ. ಹವೇಲಿ ದೊರೆಸಾನಿ ಕಥಾ ಕ್ಷೇತ್ರದಲ್ಲಿ ಗಮನಿಸುವಂತ ಕೃತಿಯಾಗಲು ಮಲ್ಲಿಕಾರ್ಜುನ ಶೆಲ್ಲಿಕೇರಿಯವರು ಯಶಸ್ವಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಿಎಸ್ ಚೌಡಾಪೂರವರು ಮಾತನಾಡಿ, ಹವೇಲಿ ದೊರೆಸಾನಿ ಕತೆಗಳು ಮಾನವನ ಬದುಕನ್ನು ಉನ್ನತ ಮಟ್ಟಕ್ಕೆರಿಸುವ ಶಕ್ತಿಯನ್ನು ಹೊಂದಿವೆ. ಇದೊಂದು ಉತ್ತಮ ಕೃತಿ ಎಂದು ವಿವರಿಸಿದರು.
ಕತೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿ ಮಾತನಾಡಿ, ಕನ್ನಡ ಕಥಾ ಪ್ರಚಾರಕ್ಕೆ 125 ವರ್ಷಗಳಾಗಿವೆ. ಕತೆಗಳನ್ನು ರಚಿಸುವ ಪ್ರಕ್ರಿಮೆಯಲ್ಲಿ ತೊಡಗಿರುವುದು ನನಗೆ ಹೆಮ್ಮೆ ಎನಿಸುತ್ತದೆ. ವಾಸ್ತವಿಕತೆಯ ಜೋತೆಗೆ ಕಲ್ಪನೆಗಳು ಕತೆಗಾರರಿಗೆ ಬಹಳ ಅವಶ್ಯಕ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ನಂತರ ನಡೆದ ಸಂವಾದದಲ್ಲಿ ಹುನಗುಂದದ ಹಿರಿಯ ಸಾಹಿತಿ ಜಿ ವಿ ದೇಶಪಾಂಡೆ, ಬಾಗಲಕೋಟೆಯ ಸಾಹಿತಿ ಎಸ್.ಎಸ್ ಹಳ್ಳೂರ ಶಿಕ್ಷಕಿ ಗೀತಾ ತಾರಿವಾಳ, ಭಾಗವಹಿಸಿ ಅಭಿಪ್ರಾಯ ಹಂಚಿಕೊಂಡರು. ಗೀತಾ ತಾರಿವಾಳ, ಪ್ರಾರ್ಥಿಸಿದರು. ಶಿಕ್ಷಕ ಮುತ್ತು ವಡ್ಡರ ನಿರೂಪಿಸಿದರು. ಮಹಿಬೂಬ ಚಿತ್ತರಗಿ ವ೦ದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ