ಬೆಂಗಳೂರು: ಪಾರ್ಸೆಲ್ ವ್ಯವಹಾರದಲ್ಲಿ ನಿರಂತರ ಸುಧಾರಣೆ ಮತ್ತು ಕೈಗೆಟುಕುವ ದರದಲ್ಲಿ ಪಾರ್ಸೆಲ್ ಸಾಗಣೆಯ ಅಗತ್ಯವನ್ನು ಪೂರೈಸುವುದಕ್ಕಾಗಿ, ಕರ್ನಾಟಕ ಅಂಚೆ ವೃತ್ತವು ಬೆಂಗಳೂರು ಮತ್ತು ನವದೆಹಲಿ ನಡುವೆ ಪಾರ್ಸೆಲ್‌ಗಳ ಹೊಸ ರಸ್ತೆ ಮಾರ್ಗವನ್ನು ಪರಿಚಯಿಸಿದೆ. ಈ ಮಾರ್ಗವು ಹೈದರಾಬಾದ್‌ನಲ್ಲಿ ಒಂದೇ ಸಂಪರ್ಕ ಕೇಂದ್ರವನ್ನು ಹೊಂದಿರುತ್ತದೆ. ಹೊಸ ಮಾರ್ಗವು ಮಾ.19ರಿಂದ ಕಾರ್ಯಾರಂಭ ಮಾಡಿದೆ..
ಕರ್ನಾಟಕ ವೃತ್ತದ ಸಿಪಿಎಂಜಿ ರಾಜೇಂದ್ರ ಕುಮಾರ್ ಅವರು ಬುಧವಾರ ಬೆಂಗಳೂರಿನ ಬಾಗಲೂರಿನ ಪಿಎಲ್‌ಟಿಸಿಯಿಂದ ಮಾರ್ಗಕ್ಕೆ ಹಸಿರು ನಿಶಾನೆ ತೋರಿದರು.
ನೋಂದಾಯಿತ ಪಾರ್ಸೆಲ್‌ಗಳು ಮತ್ತು ವ್ಯಾಪಾರ ಪಾರ್ಸೆಲ್‌ಗಳನ್ನು ಈಗ ನವದೆಹಲಿ ಮತ್ತು ಅದರ ಪಕ್ಕದ ಪ್ರದೇಶಗಳಿಗೆ 3-4 ದಿನಗಳಲ್ಲಿ ತಲುಪಿಸಲಾಗುವುದು. ಹೈದರಾಬಾದ್‌ಗೆ ಪಾರ್ಸೆಲ್‌ಗಳನ್ನು 1-2 ದಿನಗಳಲ್ಲಿ ತಲುಪಿಸಲಾಗುವುದು.
ಸಾರ್ವಜನಿಕರು ಪಾರ್ಸೆಲ್ ಕಳುಹಿಸಲು ಈ ಸೇವೆಯನ್ನು ಬಳಸಿಕೊಳ್ಳುವಂತೆ ವಿನಂತಿಸಲಾಗಿದೆ. ಬೆಂಗಳೂರಿನ ಯಾವುದೇ ಅಂಚೆ ಕಚೇರಿಯಲ್ಲಿ ಪಾರ್ಸೆಲ್‌ಗಳನ್ನು ಬುಕ್ ಮಾಡಬಹುದು. ವ್ಯಾಪಾರ ಸಂಸ್ಥೆಗಳು ಈ ಸೇವೆಯನ್ನು ದೈನಂದಿನ ಆಧಾರದ ಮೇಲೆ ಪಾರ್ಸೆಲ್‌ಗಳ ಸಾಗಣೆಗೆ ಬಳಸಿಕೊಳ್ಳ ಬಹುದು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ