ಬೆಂಗಳೂರು: ಜ್ಞಾನದಿಂದ ಅಮೃತತ್ವ ಎಂಬ ಧ್ಯೇಯೋದ್ದೇಶದೊಂದಿಗೆ, ಮಹಿಳಾ ಹರಿದಾಸರನ್ನು ಪ್ರಕಾಶಗೊಳಿಸಿ, ಅವರ ಕೃತಿಗಳನ್ನು ಪ್ರಚಾರ ಹಾಗೂ ಪ್ರಸಾರಗೊಳಿಸಿ, ಮಹಿಳಾ ಹರಿದಾಸ ಸಾಹಿತ್ಯವನ್ನು ಪ್ರಕಟಗೊಳಿಸುವ ಸದುದ್ದೇಶದಿಂದ ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ (ರಿ) ರಚಿಸಲಾಗಿದ್ದು, ಮಂಗಳವಾರ (ಮಾ.4) ಕಾರ್ಯಾರಂಭ ಮಾಡಿದೆ.
ಹಿರಿಯ ಮಹಿಳಾ ಹರಿದಾಸರ ಅನುಗ್ರಹದಿಂದ, ಡಾ. ಜಯಲಕ್ಷ್ಮಿ ಮಂಗಳಮೂರ್ತಿ ಇವರ ಮಾರ್ಗದರ್ಶನದೊಂದಿಗೆ ಈ ಟ್ರಸ್ಟ್ ಪ್ರಾರಂಭಿಸಲಾಗಿದೆ.
ಡಾ. ಸುಧಾ ದೇಶಪಾಂಡೆ ಇವರು ಟ್ರಸ್ಟ್‌ನ ಮೊದಲ ಅಧ್ಯಕ್ಷರಾಗಿ, ಡಾ.ಶಾಂತಾ ರಘೂತ್ತಮ ಇವರು ಉಪಾಧ್ಯಕ್ಷರಾಗಿ, ಡಾ. ವಿದ್ಯಾಶ್ರೀ ಕುಲ್ಕರ್ಣಿ ಇವರು ಕೋಶಾಧ್ಯಕ್ಷರಾಗಿ, ಡಾ. ವೃಂದಾ ಸಂಗಮ್ ಇವರು ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸುತ್ತಾರೆ. ಸಹ ಕಾರ್ಯದರ್ಶಿಗಳಾಗಿ ಡಾ.ವಿದ್ಯಾ ಕಸ್ಬೆ, ಡಾ. ಶೀಲಾ ದಾಸ್, ಶ್ರೀಮತಿ ಮಾನಸ ಜಯರಾಜ್ ಕುಲಕರ್ಣಿ ಕಾರ್ಯ ನಿರ್ವಹಿಸಲಿದ್ದಾರೆ. ವಕೀಲರಾದ ಶ್ರೀಮತಿ ಗೌರಿ ಜಡೆ ಅವರು ರಿಜಿಸ್ಟ್ರೇಶನ್ ಕಾರ್ಯಕ್ಕೆ ಸಹಕರಿಸಿದ್ದಾರೆ.
ಮಹಿಳಾ ಹರಿದಾಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಗೊಳಿಸುವುದು, ಅವರ ಕೃತಿಗಳನ್ನು ಪ್ರಕಟಿಸುವುದು, ರಾಗ ಸಂಯೋಜಿಸಿ ಹಾಡುವ ಮೂಲಕ ವೆಬ್ ಸೈಟ್, ಯೂಟ್ಯೂಬ್, ಪತ್ರಿಕೆಗಳು ಮುಂತಾದ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದು, ಅನ್ಯ ಭಾಷೆಗಳಿಗೆ ಅನುವಾದಿಸುವುದು, ವಿಚಾರ ಸಂಕಿರಣಗಳನ್ನು ಏರ್ಪಡಿಸುವುದು, ಹಿರಿಯ ಹರಿದಾಸರನ್ನು ಗುರುತಿಸಿ ಗೌರವಿಸುವುದು, ವಾರ್ಷಿಕ ಪ್ರಶಸ್ತಿಗಳನ್ನು ನೀಡುವುದು ಮುಂತಾದ ಸಮಾಜ ಸೇವೆಯ ಕಾರ್ಯಗಳ ಗುರಿಯೊಂದಿಗೆ, ಟ್ರಸ್ಟ್ ಶುಭಾರಂಭ ಮಾಡಿದೆ.
Maitreyitrust.org ಎಂಬ ವೆಬ್ ಸೈಟ್ ಹಾಗೂ https://mytreyi-kmh-trustblogspot.com ಎಂಬ ಬ್ಲಾಗ್ ಹಾಗೂ https://youtube.com/@maitreyi ಎಂಬ ಮಾಧ್ಯಮಗಳಲ್ಲಿ ಮೈತ್ರೇಯಿ ಮಹಿಳಾ ಹರಿದಾಸ ಟ್ರಸ್ಟ್ ನ್ನು ಸಂಪರ್ಕಿಸಬಹುದಾಗಿದೆ ಎಂದು ಕಾರ್ಯಕಾರಿ ಮಂಡಲಿಯವರು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ