ದೊಡ್ಡಬಳ್ಳಾಪುರ : ಇಂದು ಭಾರತದಲ್ಲಿ ಮಹಿಳೆಯರನ್ನು ಒಂದಲ್ಲೊಂದು ಮಾಧ್ಯಮದಿಂದ ಶೋಷಿಸಲಾಗುತ್ತಿದೆ. ಲವ್ ಜಿಹಾದ್ ನ ಮಾಧ್ಯಮದಿಂದ ಮುಗ್ಧ ಹೆಣ್ಣುಮಕ್ಕಳನ್ನು ವಂಚಿಸಿ ಅನ್ಯ ಧರ್ಮಕ್ಕೆ ಮತಾಂತರ, ನೌಕರಿಯ ನೆಪದಲ್ಲಿ ಮತಾಂತರವಾಗಲು ಕಿರುಕುಳ ಮತ್ತು ಸ್ತ್ರೀಯರ ಅತ್ಯಾಚಾರದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಮಹಿಳೆಯರಲ್ಲಿ ಶೌರ್ಯ ಜಾಗೃತಿಗೊಳಿಸಿ, ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಲು ಮತ್ತು ಮಹಿಳೆಯರನ್ನು ಸಂಘಟಿಸಲು ಇಂದು ದೊಡ್ಡಬಳ್ಳಾಪುರದ ರಾಜಾನುಕುಂಟೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮಹಿಳಾ ರಣರಾಗಿಣಿ ಶಾಖೆಯನ್ನು ಉದ್ಘಾಟಿಸಲಾಯಿತು. ಇದರಲ್ಲಿ ರಣರಾಗಿಣಿ ಶಾಖೆಯ ರಾಜ್ಯ ಸಮನ್ವಯಕರಾದ ಸೌ. ಭವ್ಯ ಗೌಡ ಇವರು ಉದ್ಘಾಟಿಸಿದರು, ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಆನಂದಪ್ಪ ಮತ್ತು ಸ್ಥಳೀಯ ಹಲವು ಸ್ತ್ರೀಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಆನಂದಪ್ಪ ಇವರು ಮಾತನಾಡಿ ದೇಶದ ಎಲ್ಲಾ ಕಡೆಯಿಂದಲೂ ಮಹಿಳೆಯರು ಜಾಗೃತರಾಗಬೇಕಾಗಿದೆ, ಸ್ವ ಸಂರಕ್ಷಣೆಗೆ ತಯಾರಾಗಬೇಕು, ನಮ್ಮ ಮನೆ, ಸಂಸಾರವನ್ನು ರಕ್ಷಣೆ ಮಾಡುವುದರ ಜೊತೆಗೆ ನಮ್ಮ ಸಮಾಜವನ್ನು ರಕ್ಷಣೆ ಮಾಡಬೇಕು. ಹೆಣ್ಣು ಮಕ್ಕಳು ಸದೃಢವಾದರೆ ಭಾರತ ಖಂಡಿತ ರಾಮರಾಜ್ಯವಾಗುತ್ತದೆ ಎಂದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ