ಬಳ್ಳಾರಿ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ “ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯದ ಕಲಬುರ್ಗಿ ವಲಯದ ಪುರುಷರ ಕ್ರಿಕೆಟ್ ಟೂರ್ನಮೆಂಟ್ ಯನ್ನು, ಪ್ರಾಂಶುಪಾಲರು- ಡಾ. ಟಿ.ಹನುಮಂತ ರೆಡ್ಡಿ, ಮಹಾವಿದ್ಯಾಲಯ ಧೈಹಿಕ ಶಿಕ್ಷಕ ನಿರ್ದೇಶಕ ವಿಜಯಮಹಂತೇಶ, ಇನ್ನಿತರರು ಕೆ.ಎಸ್.ಮಂಜುನಾಥ, ಸುನಿಲ್ ಕುಮಾರ್, ಪ್ರವೀಣ್, ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ “ಒಳ್ಳೆಯ ಮನೋಭಾವನೆಯಿಂದ ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಗೆಲುವಿಗಾಗಿ ಪ್ರಯತ್ನಿಸಬೇಕು. ಆಟದಲ್ಲಿ ಸೋಲು ಗೆಲುವು ಸಾಮಾನ್ಯ, ಆದರೆ, ಸೋಲೇ ಗೆಲುವಿಗೆ ಮುಖ್ಯ ಮೆಟ್ಟಿಲು ಎಂಬುದನ್ನು ಮರೆಯಬಾರದು.
ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯದ ಬೆಳಗಾವಿ ಅಧಿಕಾರಿಗಳಿಗೆ ಈ ಕ್ರಿಕೆಟ್ ಆರ್‌ವೈಎಂಇಸಿಯಲ್ಲಿ ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯದ ಕಲಬುರ್ಗಿ ವಲಯದ ಪುರುಷರ ಕ್ರಿಕೆಟ್ ಟೂರ್ನಮೆಂಟ್ ಗೆ ನಮ್ಮ ಮಹಾವಿದ್ಯಾಲಯವನು ಆಯ್ಕೆ ಮಾಡಿದುದ್ದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು.
ಆರಂಭದ ಮ್ಯಾಚು ಬಿಕೆ.ಐ.ಟಿ,ಭಾಲ್ಕಿ ಇಂಜಿನಿಯರಿಂಗ್ ಕಾಲೇಜು ಮತ್ತು ಪಿಡಿಐಟಿ ಕಾಲೇಜ್ ಆಫ್ ಇಂಜಿನಿಯರಿಂಗ್,ಹೊಸಪೇಟೆ, ನಡುವೆ ಜರುಗಿತು, ಭೋಧಕ, ಭೋಧಕೇತರರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿವೃಂದದವರೂ ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ