ಇಂಟರ್ನೆಟ್ ಬಳಕೆದಾರರು ಎಚ್ಚರದಿಂದಿರಿ: ನವೀನ್ ಭಂಡಾರಿ

Upayuktha
0

ಪುತ್ತೂರು: ಜಗತ್ತು ಇಂಟರ್ನೆಟ್ ಎಂಬ ಜಾಲದಲ್ಲಿ ಮುಳುಗಿದ್ದು ಪ್ರಸ್ತುತ ವಿವಿಧ ರೀತಿಯಲ್ಲಿ ವಂಚಿಸುವ ಜಾಲವೇ ಸಮಾಜವನ್ನು ಕಾಡುತ್ತಿದೆ. ಆದ್ದರಿಂದ ಇಂಟರ್ನೆಟ್ ಬಳಕೆದಾರರು ಎಚ್ಚರಿಕೆಯಿಂದ ಇರಬೇಕು ಎಂದು ಪುತ್ತೂರು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅಭಿಪ್ರಾಯಪಟ್ಟರು.


ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು‌ ಮಾಹಿತಿ ತಂತ್ರಜ್ಞಾನ ಇಲಾಖೆ, ತಾಲೂಕು ಪಂಚಾಯತ್ ಪುತ್ತೂರು ವತಿಯಿಂದ ವಿಶ್ವ ಸುರಕ್ಷತಾ ಅಂತರ್ಜಾಲ ದಿನದಲ್ಲಿ ಮಾತನಾಡಿದರು.


ಮೊಬೈಲ್ ನಲ್ಲಿ ಹಲವು ಆನ್ ಲೈನ್ ವ್ಯವಹಾರವನ್ನು ಮಾಡುತ್ತಿದ್ದೇವೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡು ಹಲವು ವಂಚಕರು ದುರುಪಯೋಗಪಡಿಸಿಕೊಳ್ಳುವ ಕಾರ್ಯವನ್ನು ಮಾಡುತ್ತಿದ್ದಾರೆ ಹಾಗಾಗಿ ಒಟಿಪಿ ಇನ್ನಿತರ ಕೋಡ್ ಗಳನ್ನು ಅನ್ಯರಿಗೆ ನೀಡದೆ ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳಬೇಕಾಗಿ ತಿಳಿಸಿದರು.


ಪುತ್ತೂರು ನಗರ ಠಾಣೆ ಉಪನಿರೀಕ್ಷಕ ಆಂಜನೇಯ ರೆಡ್ಡಿ ಅವರು ಮಾತನಾಡಿ, ಹಿಂದೆ ವಂಚನೆಗಳು ಧರೋಡೆ, ಕಳ್ಳತನ ಇಂತಹ ವಂಚನೆಗಳಾಗುತ್ತಿತ್ತು. ಆದರೆ ಈಗ ಆನ್ ಲೈನ್ ಮೂಲಕ ಉದ್ಯೋಗಾವಕಾಶ, ಹಣಕಾಸು, ವೈಯಕ್ತಿಕ ಮಾಹಿತಿ, ದಾರಿತಪ್ಪಿಸುವ, ಸುಳ್ಳು, ಟ್ರೋಲ್, ಬೆದರಿಕೆ, ಕಿರುಕುಳ, ಅನಿಯಂತ್ರಿತ ವೆಚ್ಚಗಳು, ಸ್ಕ್ಯಾಮ್ ಹೀಗೆ ಹಲವು ರೀತಿಯ ಅಪರಾಧಗಳು ನಡೆಯುತ್ತಿದೆ. ಹಾಗೂ ಯಾವುದೇ ಆನ್ ಲೈನ್ ಅಥವಾ ಸೈಬರ್ ಅಪರಾಧಗಳಾದಾಗ 1930 ಗೆ ಕರೆಮಾಡಿ ದೂರು ದಾಖಲಿಸಬಹುದು ಎಂದರು.

 

ಯಾವುದೇ ಬ್ಯಾಂಕ ಗಳು ಕರೆ ಮಾಡಿ ಓಟಿಪಿಯನ್ನು ಕೇಳುವುದಿಲ್ಲ. ಅಂತಹ ಕೆಲಸವನ್ನು ಮಾಡಬೇಡಿ. ಸೈಬರ್ ಅಪರಾಧದ ಕುರಿತ ಹೆಚ್ಚು ಹೆಚ್ಚು ಕಾರ್ಯಾಗಾರಗಳಿಗೆ ಭಾಗವಹಿಸಿ ವಂಚನೆಗಳಿಗೆ ಒಳಗಾಗದಂತೆ  ಎಚ್ಚರದಿಂದಿರಬೇಕು ಎಂದರು. ತಾ.ಪಂ. ವ್ಯವಸ್ಥಾಪಕ ಜಯಪ್ರಕಾಶ್ ಸ್ವಾಗತಿಸಿದರು. ತಾ.ಪಂ.ಐಇಸಿ ಸಂಯೋಜಕ ಭರತ್ ರಾಜ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top