ಬಳ್ಳಾರಿ: ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರು ಸೋಮವಾರ ನಗರದ ವಿವಿಧ ವಾರ್ಡ್'ಗಳಲ್ಲಿ ಏರ್ಪಡಿಸಿದ್ದ ಭೂಮಿ ಪೂಜೆಗಳಲ್ಲಿ ಭಾಗವಹಿಸಿ ಒಂದೇ ದಿನದಲ್ಲಿ ಅಂದಾಜು 7 ಕೋಟಿ ರೂ.ಗಳ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ಸೋಮವಾರ ಬೆಳಿಗ್ಗೆ ನಗರದ ವಾಲ್ಮೀಕಿ ವೃತ್ತ (ಎಸ್ಪಿ ಸರ್ಕಲ್)ದ ಉನ್ನತೀಕರಣಕ್ಕಾಗಿ ಅಂದಾಜು ವೆಚ್ಚ 4 ಕೋಟಿ ರೂ.ಗಳ ಕಾಮಗಾರಿಗೆ ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.
ತದನಂತರ ವಾರ್ಡ್ ಸಂಖ್ಯೆ 21ರ ವ್ಯಾಪ್ತಿಯ ಗಾಂಧಿನಗರದ ಎಎಸ್ಎಂ ಮಹಿಳಾ ಕಾಲೇಜು ರಸ್ತೆಯ ಅಭಿವೃದ್ಧಿಗಾಗಿ ಅಂದಾಜು 1 ಕೋಟಿ 40 ಲಕ್ಷ ರೂ.ಗಳ ಕಾಮಗಾರಿಗಾಗಿ ಏರ್ಪಡಿಸಿದ್ದ ಭೂಮಿ ಪೂಜೆಯಲ್ಲಿ ಭಾಗವಹಿಸಿ ಕಾಮಗಾರಿಗೆ ಚಾಲನೆ ನೀಡಿದರು.
ವಾರ್ಡ್ ಸಂಖ್ಯೆ 22ರ ವ್ಯಾಪ್ತಿಯ ಗಾಂಧಿನಗರದ ರಸ್ತೆ ಅಭಿವೃದ್ಧಿಗಾಗಿ (ಬಗೀಚಾ ಹೊಟೇಲ್ ಪಕ್ಕದ ರಸ್ತೆ) ಅಂದಾಜು ವೆಚ್ಚ 13 ಲಕ್ಷ ರೂ.ಗಳ ಕಾಮಗಾರಿಗೆ ಏರ್ಪಡಿಸಿದ್ದ ಭೂಮಿ ಪೂಜೆಯಲ್ಲಿ ಭಾಗವಹಿಸಿ ಕಾಮಗಾರಿಗೆ ಚಾಲನೆ ನೀಡಿದರು. ಅದೇ ರೀತಿ 22ನೇ ವಾರ್ಡಿನ ಆಕುಲ ಚಲಮಯ್ಯ ಕಾಲೋನಿಯಲ್ಲಿ ಒಳ ಚರಂಡಿ ಪೈಪ್ ಬದಲಾವಣೆಗಾಗಿ ಅಂದಾಜು ವೆಚ್ಚ 37 ಲಕ್ಷ ರೂ.ಗಳ ಕಾಮಗಾರಿಗೆ ಏರ್ಪಡಿಸಿದ್ದ ಭೂಮಿ ಪೂಜೆಯಲ್ಲಿ ಭಾಗವಹಿಸಿದರು. ವಾರ್ಡ್ ನಂ.21ರ ನೆಹರೂ ಕಾಲೋನಿಯ ರಸ್ತೆ ಅಭಿವೃದ್ಧಿಯ ಅಂದಾಜು ಮೊತ್ತ 39 ಲಕ್ಷ ರೂ.ಗಳ ಕಾಮಗಾರಿಯ ಭೂಮಿ ಪೂಜೆಯಲ್ಲಿ ಭಾಗವಹಿಸಿ ಚಾಲನೆ ನೀಡಿದರು.
ತದನಂತರ ವಾರ್ಡ್ ನಂ.19ರ ವ್ಯಾಪ್ತಿಯ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸ್ವಾಯತ್ತ ಕಾಲೇಜಿನ ಆವರಣದಲ್ಲಿ ಪೇವರ್ಸ್ ಅಳವಡಿಕೆಗಾಗಿ ಅಂದಾಜು ವೆಚ್ಚ 1 ಕೋಟಿ ರೂ.ಗಳ ಅನುದಾನದ ಕಾಮಗಾರಿಗೆ ಚಾಲನೆ ನೀಡಲಾಯಿತು.ಮಧ್ಯಾಹ್ನದ ಊಟದ ವಿರಾಮದ ನಂತರ ವಾರ್ಡ್ ನಂ.16ರ ವ್ಯಾಪ್ತಿಯ ಶ್ರೀರಾಂಪುರ ಕಾಲೋನಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕಾಗಿ ಅಂದಾಜು ವೆಚ್ಚ 50 ಲಕ್ಷ ರೂ.ಗಳ ಅನುದಾನದ ಕಾಮಗಾರಿಗಾಗಿ ಏರ್ಪಡಿಸಿದ್ದ ಭೂಮಿ ಪೂಜೆಯಲ್ಲಿ ಭಾಗವಹಿಸಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ವಾರ್ಡ್ ನಂ.12ರ ವ್ಯಾಪ್ತಿಯ ರವೀಂದ್ರ ಅವರ ಮನೆಯಿಂದ ತಾಯಮ್ಮ ದೇವಸ್ಥಾನದವರೆಗೆ, ರೋಶನ್ ಅವರ ಮನೆಯಿಂದ ಅಬ್ದುಲ್ ನಬಿಯವರ ಮನೆಯವರೆಗೆ ಸಿಸಿ ರಸ್ತೆ ನಿರ್ಮಾಣಕ್ಕಾಗಿ ಅಂದಾಜು ವೆಚ್ಚ 23 ಲಕ್ಷ ರೂ.ಗಳ ಕಾಮಗಾರಿಗೆ ಚಾಲನೆ ನೀಡಲಾಯಿತು.
ವಾರ್ಡ್ ನಂ.8ರ ವ್ಯಾಪ್ತಿಯ ಅಂದ್ರಾಳನಲ್ಲಿ ರಸ್ತೆ ಮತ್ತು ಒಳ ಚರಂಡಿ ನಿರ್ಮಾಣಕ್ಕಾಗಿ ಅಂದಾಜು ವೆಚ್ಚ 54 ಲಕ್ಷ ರ.ಗಳ ಅನುದಾನದ ಕಾಮಗಾರಿಗೆ ಚಾಲನೆ ನೀಡಲಾಯಿತು. ವಾರ್ಡ್ ನಂ.5ರ ವ್ಯಾಪ್ತಿಯ ಹನುಮಾನ ನಗರದಲ್ಲಿ ರಸ್ತೆ ಅಭಿವೃದ್ಧಿಗಾಗಿ ಅಂದಾಜು ವೆಚ್ಚ 83 ಲಕ್ಷ ರೂ.ಗಳ ಕಾಮಗಾರಿಗೆ ಏರ್ಪಡಿಸಿದ್ದ ಭೂಮಿ ಪೂಜೆಯಲ್ಲಿ ಭಾಗವಹಿಸಿ ಚಾಲನೆ ನೀಡಲಾಯಿತು.
ಈ ಸಂದರ್ಭ ಮಹಾನಗರ ಪಾಲಿಕೆಯ ಮೇಯರ್ ಮೃಲ್ಲಂಗಿ ನಂದೀಶ್, ಉಪಮೇಯರ್ ಡಿ.ಸುಕುಂ, ಪಾಲಿಕೆಯ ಸದಸ್ಯರಾದ ವಿ.ಕುಬೇರಾ, ಮಾಲನಬಿ, ಜಬ್ಬಾರ್, ರಾಮಾಂಜನೇಯ, ಗುಡಿಗಂಟಿ ಹನುಮಂತ, ಹನುಮಂತ, ಮಾಜಿ ಮೇಯರ್ ಎಂ.ರಾಜೇಶ್ವರಿ, ಎಂ.ಪ್ರಭ ಜನಕುಮಾರ್, ಬಿಜೆಪಿ ಮುಖಂಡ ಮಲ್ಲನಗೌಡ, ಕಾಂಗ್ರೆಸ್ ಮುಖಂಡರಾದ ಮಹಮ್ಮದ್ ಭಾಯ್, ಶಿವರಾಜ್, ಸುಬ್ಬರಾಯುಡು, ಪಿ.ಜಗನ್ನಾಥ್, ಪರಶುರಾಮ, ಬಜ್ಜಪ್ಪ, ಮೋಹನ್, ಬಾಲರಾಜು, ಸರಳಾದೇವಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಧರ್ಮಶ್ರೀ, ಅನೂಪ್, ವಿಶ್ವನಾಥ್ ಚವ್ಹಾಣ್, ಸಲ್ಮಾ ಎಸ್.ಕೆ, ಅಖಿಲಾ ಮೊದಲಾದವರು ಹಾಜರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ