ಮೊರಾರ್ಜಿ ದೇಸಾಯಿ ವಸತಿ ಶಾಲೆಯ 30 ವಿದ್ಯಾರ್ಥಿಗಳಿಗೆ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಅಗ್ರಶ್ರೇಣಿ

Upayuktha
0


ವಿಜಯನಗರ:  2024-25 ನೇ ಸಾಲಿನ ಕರ್ನಾಟಕ ಸರ್ಕಾರ ಶಿಕ್ಷಣ ಇಲಾಖೆ ನಡೆಸುವ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 30 ವಿದ್ಯಾರ್ಥಿಗಳು ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ( ಕಾಳಘಟ್ಟ ) ಚಿತ್ರಕಲಾ ಶಿಕ್ಷಕಿ ರಂಜಾಬೀ ಅವರು ಪ್ರಕಟಣೆ ಮೂಲಕ ತಿಳಿಸಿದರು. 


ವಿಜಯ ನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಾಳಘಟ್ಟ (ಬಿಸಿ 520) ಯಲ್ಲಿ ಪೋಷಕರ ಸಭೆ ಮತ್ತು ಚಿತ್ರಕಲಾ ಪ್ರದರ್ಶನ ಮಕ್ಕಳ ಪೋಷಕರಿಂದ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವ ಮೂಲಕ  ಉದ್ಘಾಟಿಸಿದರು. 


ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾಷ ಸಂಗಜ್ಜ ಬಾರಿಕಿ ಮಾತನಾಡಿದ ಅವರು ಮಕ್ಕಳಲ್ಲಿ ಕಲಾ ಆಸಕ್ತಿಗಳು ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳಲ್ಲಿ ಕಲೆ ಅಡಗಿರುತ್ತದೆ ಹುಡುಕಿ ಮುಖ್ಯ ವೇದಿಕೆಗೆ ತರುವ ಕೆಲಸವನ್ನು ಚಿತ್ರಕಲಾ ಶಿಕ್ಷಕಿ ರಂಜಾನ್ ಬಿ ಅವರು ಮಾಡುತ್ತಿದ್ದಾರೆ. ವಸತಿ ಶಾಲೆ ಹಿಂದಿನ ವರ್ಷ ನೂರಕ್ಕೆ ನೂರು ಫಲಿತಾಂಶ ಹೊಂದಿದೆ, ಕ್ರೀಡೆಯಲ್ಲಿ ಕಬ್ಬಡ್ಡಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ, ಯೋಗದಲ್ಲಿ  ವಿಭಾಗ ಮಟ್ಟಕ್ಕೆ ಆಯ್ಕೆ ಆಗಿರುವುದು ಈ ವಸತಿ ಶಾಲೆಯ ಸಾಧನೆ ಎಂದರು.


ಅನೇಕ ಗಣ್ಯರ ಚಿತ್ರಗಳನ್ನು ಬಿಡಿಸಿದ ವಿದ್ಯಾರ್ಥಿಗಳು-ವಿದ್ಯಾರ್ಥಿಗಳು  ಅಂಬೇಡ್ಕರ್ ಮಹಾತ್ಮ ಗಾಂಧೀಜಿ, ಮದರ್ ತೆರೇಸಾ, ದ.ರಾ ಬೇಂದ್ರೆ, ಕುವೆಂಪು ಅವರ ಭಾವಚಿತ್ರಗಳು, ವಿಜ್ಞಾನ ಚಿತ್ರಗಳು, ಕಂಪ್ಯೂಟರ್  ನ ವಿವಿಧ ಭಾಗಗಳ , ಗಣಿತದ ಆಕಾರಗಳು, ಸ್ವಚ್ಛತೆಯ ಸೂಚನಾ ಫಲಕಗಳು, ಪ್ರದರ್ಶನದಲ್ಲಿ ಗಮನಸೆಳೆದವು. ವಸತಿ ಶಾಲೆ ಮಕ್ಕಳು ಚಿತ್ರಕಲೆ ಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದು ತಿಂಗಳ ಚಿತ್ರಕಲಾ ಪ್ರದರ್ಶನವನ್ನು ನಡೆಸುವುದು ವಿಶೇಷವಾಗಿದೆ. ಪೋಷಕರು ಮಕ್ಕಳಲ್ಲಿರುವ ಕಲೆಯನ್ನು ಗಮನಿಸಿ ಕಲೆ ಕಂಡು ಸಂತೋಷ ವ್ಯಕ್ತಪಡಿಸಿರುತ್ತಾರೆ.


ಈ ಸಮಯದಲ್ಲಿ ನಿಲಯ ಪಾಲಕರು ರವಿ,ಕೆ. ಶೀಲಾ ದೇವಿಕ ಜೋಗಿ, ಮಂಜುನಾಥ್ ಮಾಳಗಿ ಹನುಮಂತಪ್ಪ  ಶಿವರಾಜ್ ಮಿಮಿಕ್ರಿ ಆರ್ಟಿಸ್ಟ್ , ಹೆಚ್. ಜಯರಾಮ್  ನಲ್ಲಸ್ವಾಮಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top