ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಯುವಕ ಯುವತಿಯರಿಗೆ ಸಿಲಂಬಮ್ ಕ್ರೀಡಾ ತರಬೇತಿ ಶಿಬಿರ

Upayuktha
0


 

ಬಳ್ಳಾರಿ:  ಜಿಲ್ಲಾ ಸಿಲಂಬಮ್ ಅಸೋಸಿಯೇಷನ್ (ರಿ)ಮತ್ತು ವಿಜಯನಗರ ಜಿಲ್ಲಾ ಸಿಲಂಬಮ್ ಅಸೋಸಿಯೇಷನ್ ಇವರ  ಸಂಯುಕ್ತ ಆಶ್ರಯದಲ್ಲಿ   ಬಳ್ಳಾರಿಯ ಗಾಂಧಿ ಭವನದಲ್ಲಿ ಸಿಲಂಬಮ್ ತರಬೇತಿಯನ್ನು ಆಯೋಜನೆ ಮಾಡಲಾಗಿತ್ತು, ಸದರಿ ತರಬೇತಿಯಲ್ಲಿ ಎರಡು ಜಿಲ್ಲೆಯಿಂದ ಸುಮಾರು 50 ಕ್ಕೂ ಯುವಕ-ಯುವತಿಯರು ಭಾಗವಹಿಸಿದ್ದರು.


ಸಿಲಂಬಮ್ ಒಂದು ಪುರಾತನ ಭಾರತೀಯ ಕಲೆಯಾಗಿದ್ದು,ಇದರ ತವರು ತಮಿಳುನಾಡು. ಸಿಲಂಬಮ್ ಕ್ರೀಡೆ ಎಲ್ಲಾ  ರಾಜ್ಯ, ಕೇಂದ್ರ ಪಠ್ಯಕ್ರಮದ ಕ್ರೀಡಾ ಕೂಟದಲ್ಲಿ ಸೇರಿದ್ದು, ಇದರಲ್ಲಿ  ರಾಜ್ಯ ಮತ್ತು ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ನೀಡುವ ಪ್ರಮಾಣ ಪತ್ರ ಅವರ ಮುಂದಿನ ವಿದ್ಯಾಭ್ಯಾಸ ಮತ್ತು ವೃತ್ತಿಜೀವನಕ್ಕೆ ಅನುಕೂಲಕರ. 


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬಳ್ಳಾರಿ ಜಿಲ್ಲಾ ಸಿಲಂಬಮ್ ಅಸೋಸಿಯೇಷನ್‌ನ  ಜಿಲ್ಲಾಧ್ಯಕ್ಷರು ಹಾಗೂ ಉದ್ಯಮಿಗಳಾದ  ಚಂದ್ರಶೇಖರ್ ರವರು ಮಾತಾನಾಡಿ ಸಿಲಂಬಮ್ ಕ್ರೀಡೆ ನಮ್ಮ  ದೇಶದ ತಮಿಳುನಾಡು ಪ್ರದೇಶದಲ್ಲಿ ಪ್ರಾರಂಭವಾಗಿದ್ದು ಚೋಳ ಮತ್ತು ಪಾಂಡ್ಯರ ಕಾಲದಲ್ಲಿ ಈ ಸಮರ  ಕಲೆಯನ್ನು ಅಭ್ಯಾಸ ಮಾಡಿದ ಉಲೇಖವಿದೆ ಹಾಗೂ  ಶ್ರೀಲಂಕಾ ಮತ್ತು ಮಲೇಷಿಯಾ ಹಾಗೂ ವಿಶ್ವದ ವಿವಿಧ  ದೇಶಗಳಿ ಈ ತರಬೇತಿ ನಡೆಯುತ್ತಿದ್ದು  ನಮ್ಮ ದೇಶದ ಹೆಮ್ಮೆಯ ವಿಷಯ ಮತ್ತು  ರಾಜ್ಯ ಮತ್ತು ಕೇಂದ್ರ ಸರ್ಕಾರವುಈ ಕ್ರೀಡೆಗೆ ಮಾನ್ಯತೆಯನ್ನು ನೀಡಿದೆ  ಎಂದು ತಿಳಿಸಿದರು ಮತ್ತು  ಈ ತರಬೇತಿ ಆಗಮಿಸಿದ ಎಲ್ಲಾ ತರಬೇತುದಾರರಿಗೆ ಶುಭಾಶಯ ಕೋರಿದರು.


ಈ ಸಿಲಂಬಮ್  ತರಬೇತಿಯನ್ನು  ಕಟ್ಟೇಸ್ವಾಮಿ, ಸುಭಾಷಚಂದ್ರ ಮತ್ತು ಪ್ರಸಾದ್  ತರಬೇತಿ  ನೀಡಿದರು .ಈ  ಕಾರ್ಯಕ್ರಮದಲ್ಲಿ  ತರಬೇತುದಾರರಾದ ಜಡೇಶಾ, ಹನುಮಂತ, ಹುಲುಗಣ್ಣ, ಯುವರಾಜ, ನಬಿಸಾಹೇಬ್, ಯಮನೂರಿ, ರಜತ್ ನಾಗರಾಜ, ಅನಂದ್ , ಕಾರ್ಯಕ್ರಮದಲ್ಲಿ ಭಾಗವಹಿಸದ್ದರು.ಕರ್ನಾಟಕ ರಾಜ್ಯ ಸಿಲಂಬಮ್ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಮಹಂತೇಶ್ ಬೆಳಗಿ ,ತರಬೇತಿ ಪಡೆದ ಯುವಕ-ಯುವತಿಯರಿಗೆ ಶುಭಕೋರಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top