ಉಡುಪಿ: ಪೂಜ್ಯ ಪುತ್ತಿಗೆ ಶ್ರೀಪಾದರು ತಮ್ಮ ಈ ಚತುರ್ಥ ಪರ್ಯಾಯದಲ್ಲಿ ಹಮ್ಮಿಕೊಂಡ ಬೃಹತ್ ಗೀತೋತ್ಸವದ ಅಂಗವಾಗಿ ನಡೆದ ವಿಶ್ವ ಗೀತಾ ರಸಪ್ರಶ್ನೆ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ. ವಿಶ್ವಾದ್ಯಂತ ಸುಮಾರು 2000ಕ್ಕೂ ಮಿಕ್ಕಿ ಅಭ್ಯರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
ಮೂರು ಹಂತದ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ಕ್ಲಿಷ್ಟಕರವಾದ ಎರಡು ಹಂತಗಳನ್ನು ದಾಟಿ ಮೂರನೇ ಹಂತಕ್ಕೆ 30 ಜನರು ಆಯ್ಕೆಗೊಂಡರು. ಆಯ್ದ ಸ್ಪರ್ಧಾಳುಗಳನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ವಿದ್ವಾಂಸರು ಪರೀಕ್ಷೆಯನ್ನು ಮಾಡಿದರು. ಆಯ್ದ ಸ್ಪರ್ಧಾಳುಗಳನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ವಿದ್ವಾಂಸರು ಪರೀಕ್ಷೆಯನ್ನು ಮಾಡಿದರು. ಪೂಜ್ಯ ಯತಿದ್ವಯರು ವೀಡಿಯೊ ಸಂವಾದದ ಮೂಲಕ ಮಾತನಾಡಿ ಸರ್ವ ಪ್ರಥಮ ಬಂದವರ ವಿವರಗಳನ್ನು ಘೋಷಿಸಿ ಎಲ್ಲರನ್ನೂ ಆಶೀರ್ವದಿಸಿದರು.
ವಿಶೇಷ ಪರೀಕ್ಷೆಯನ್ನು ಅಮೆರಿಕಾದ ವಿದ್ವಾಂಸರಾದ ಶ್ರೀ ಕೇಶವ ತಾಡಿಪತ್ರಿ ಮತ್ತು ವಿದ್ವಾನ್ ಗೋಪಾಲಾಚಾರ್ಯ, ವಿದ್ವಾನ್ ಪ್ರಸನ್ನಾಚಾರ್ಯ, ವಿದ್ವಾನ್ ಡಾ ಷಣ್ಮುಖ ಹೆಬ್ಬಾರ್ ನಡೆಸಿಕೊಟ್ಟು ಆಯ್ಕೆ ಮಾಡಿದರು.
ತಾಂತ್ರಿಕ ತಂಡದಲ್ಲಿ ಶ್ರೀ ಪ್ರಮೋದ್ ಸಾಗರ್, ಚೊಕ್ಕಾಡಿ ವಾದಿರಾಜ ಭಟ್,ರಾಮಪ್ರಿಯ, ಡಾ ಸುದರ್ಶನ್ ಮತ್ತಿತರು ಸಹಕರಿಸಿದ್ದರು.
ಇದೇ ತಿಂಗಳ 21 ನೇ ತಾರೀಖಿನಂದು ರಾಜಾಂಗಣದಲ್ಲಿ ನಡೆಯುವ ಸಭೆಯಲ್ಲಿ ಆಯ್ದ ವಿಜೇತರಿಗೆ ಪಾರಿತೋಷಕ ಮತ್ತು ಸಂಭಾವನೆಯನ್ನು ಶ್ರೀಪಾದರು ನೀಡಲಿದ್ದಾರೆ.
ಪ್ರಥಮ ದ್ವಿತೀಯ ತೃತೀಯ ಶ್ರೇಣಿಗಳಲ್ಲಿ ವಿಜೇತರು ಕ್ರಮವಾಗಿ ಒಂದು ಲಕ್ಷ, 75 ಸಾವಿರ, 50 ಸಾವಿರ, 25 ಸಾವಿರ ನಗದು ಹಾಗೂ ಪಾರಿತೋಷಿಕ ಗಳನ್ನು ಪಡೆಯಲಿದ್ದಾರೆ ಹಾಗೂ ಆಯ್ಕೆಗೊಂಡವರೆಲ್ಲ ಸಮಾಧಾನಕರ ಬಹುಮಾನಗಳನ್ನು ಪೂಜ್ಯ ಪರ್ಯಾಯ ಶ್ರೀಪಾದರಿಂದ ಫೆಬ್ರವರಿ 21 ರಂದು ರಾಜಾಂಗಣದಲ್ಲಿ ನಡೆಯುವ ಸಭೆಯಲ್ಲಿ ಪಡೆಯಲಿದ್ದಾರೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠದ ಪ್ರಕಟಣೆ ತಿಳಿಸಿದೆ.
ಜೂನಿಯರ್ ಮತ್ತು ಸೀನಿಯರ್ ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಉತ್ಕೃಷ್ಟ ಶ್ರೇಣಿಯಲ್ಲಿ ವಿಜೇತರಾದವರ ವಿವರಗಳು ಚಿತ್ರದಲ್ಲಿವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ