ಧರ್ಮತ್ತಡ್ಕ: ನೆಕ್ರಾಜೆ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಯಕ್ಷಮಿತ್ರ ನೆಕ್ರಾಜೆಯ ಪ್ರಾಯೋಜಕತ್ವದಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಯಕ್ಷಗಾನ ತಂಡವು 'ನರಕಾಸುರ ಮೋಕ್ಷ' ಎಂಬ ಪುಣ್ಯ ಕಥಾ ಭಾಗದ ಪ್ರದರ್ಶನವನ್ನು ನೀಡಿತು.
ಭಾಗವತಿಕೆಯಲ್ಲಿ ಶೇಖರ ಶೆಟ್ಟಿ ಬಾಯಾರು, ಮದ್ದಳೆಯಲ್ಲಿ ಕುದ್ರೆಕೊಡ್ಲು ರಾಮಮೂರ್ತಿ, ಚೆಂಡೆಯಲ್ಲಿ ಪೃಥ್ವಿ ಚಂದ್ರ ಶರ್ಮಾ ಪೆರ್ವಾಡಿ, ಚಕ್ರತಾಳದಲ್ಲಿ ಸತೀಶ್ ಶೆಟ್ಟಿ ಕುಳ್ಯಾರು ಸಹಕರಿದರು.
ಪಾತ್ರವರ್ಗದಲ್ಲಿ ದೇವೇಂದ್ರನಾಗಿ ಸಂದೇಶ್ ಬಲ್ಲಾಳ್, ಅಗ್ನಿಯಾಗಿ ದರ್ಶಿಕ್ ಸುರೇಶ್ ಬಾಯಾರು, ವರುಣನಾಗಿ ಪ್ರಾರ್ಥನಾ ನಾಯ್ಕ್, ವಾಯುವಾಗಿ ಧನ್ಯ ಆರ್ ಪಿ, ನರಕಾಸುರನಾಗಿ ಕೌಶಿಕ್ ಸುರೇಶ್, ದುರ್ಜಯಾಸುರನಾಗಿ ಜೀವನ್, ವಾತಾಸುರನಾಗಿ ಆತ್ಮಿಕ್ ಕಾಟುಕುಕ್ಕೆ, ಪ್ರಳಂಬಾಸುರನಾಗಿ ಸರ್ವಾಣಿ ಬಲ್ಲಾಳ್, ದೇವದೂತನಾಗಿ ಲಿಖಿತ್ ವಿ ಪೂಜಾರಿ, ಕೃಷ್ಣನಾಗಿ ಸ್ಕಂದಪ್ರಸಾದ್, ಸತ್ಯಭಾಮೆಯಾಗಿ ವೈಷ್ಣವಿ ಮಾಣಿಪಾಡಿ ಹಾಗೂ ಮುರಾಸನಾಗಿ ಧನಿಷ್ ಪಾತ್ರಗಳಿಗೆ ಜೀವ ತುಂಬಿದರು.
ಇದೇ ತಂಡವು ಮಂಜೇಶ್ವರ ಉಪಜಿಲ್ಲೆ ಹಾಗೂ ಜಿಲ್ಲಾ ಕಲೋತ್ಸವಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಪ್ರಶಂಸೆಗೆ ಪಾತ್ರವಾಗಿತ್ತು. ಗುರುಗಳಾದ ಶೇಖರ ಶೆಟ್ಟಿ ಬಾಯಾರು ನಿರ್ದೇಶಿಸಿದರು. ಸುರೇಶ್ ಮಣಿಯಾಣಿ ಬಾಯಾರು, ರಾಜಕುಮಾರ ಕಾಟುಕುಕ್ಕೆ ಹಾಗೂ ಶಾಲಾ ಅಧ್ಯಾಪಕ ವೃಂದದವರು ಸಹಕರಿಸಿದರು. ಮಲ್ಲ ಶ್ರೀ ದುರ್ಗಾಂಬಾ ವೇಷಭೂಷಣದಲ್ಲಿ ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ