ಉಡುಪಿ: ಮಂತ್ರಾಲಯದ ಶ್ರೀ ಶ್ರೀ ಸುಬುಧೇಂದ್ರ ಯತಿಗಳಿಂದ ಶ್ರೀ ಕೃಷ್ಣ ದರ್ಶನ

Upayuktha
0




ಉಡುಪಿ: ಪರ್ಯಾಯ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆಹ್ವಾನದ ಮೇರೆಗೆ ತಮ್ಮ ಪರ್ಯಾಯ ಕಾಲದಲ್ಲಿ ಪ್ರಥಮ ಬಾರಿಗೆ ಉಡುಪಿಗೆ ಆಗಮಿಸಿದ ಮಂತ್ರಾಲಯ ಶ್ರೀಪಾದರನ್ನು ಶ್ರೀಕೃಷ್ಣ ಮಠದಲ್ಲಿ ಸಾಂಪ್ರದಾಯಿಕ ಪೂರ್ಣಕುಂಭ ಸ್ವಾಗತ ದೊಂದಿಗೆ ಪುತ್ತಿಗೆ ಯತಿದ್ವಯರು ಆದರದಿಂದ ಬರಮಾಡಿಕೊಂಡರು.


ಬಳಿಕ ಶ್ರೀ ಕೃಷ್ಣ ಮುಖ್ಯಪ್ರಾಣರ ದರ್ಶನ ಪಡೆದ ಪೂಜ್ಯ ಶ್ರೀಪಾದರನ್ನು ಗಂಧಾದ್ಯುಪಚಾರಗಳಿಂದ ಸತ್ಕರಿಸಿದ ಪೂಜ್ಯ ಪರ್ಯಾಯ ಶ್ರೀಪಾದರು ತಮ್ಮ ಮಠಕ್ಕೂ ಮಂತ್ರಾಲಯ ಮಠಕ್ಕೂ ಇರುವ ಅವಿನಾಭಾವ ಮಧುರ ಸಂಬಂಧಗಳನ್ನು ಸ್ಮರಿಸಿ ಮುಂದೆಯೂ ಇದು ಶಾಶ್ವತವಾಗಿ ಮುಂದುವರೆಯಲಿ, ಎಂದು ಹಾರೈಸಿದರು.


ನಮ್ಮ ಮಂತ್ರಾಲಯರಾಘವೇಂದ್ರ  ಮಠದ ಪೀಠದಲ್ಲಿ ಬಂದ ಅನೇಕ ಯತಿಗಳ ಮತ್ತು ಉಡುಪಿ ಪುತ್ತಿಗೆ ಮಠದ ಪೀಠದಲ್ಲಿ ಬಂದ ಅನೇಕ ಯತಿಗಳ ಹೆಸರು ಒಂದೇ ಆಗಿದೆ ಎ0ದು ಉಲ್ಲೇಖಿಸಿದ ಸುಬುದೇ0ದ್ರ ತೀರ್ಥ ಶ್ರೀಪಾದರು ಸುಗುಣೇ 0ದ್ರ ತೀರ್ಥರು ಕೂಡಾ ನಮ್ಮ ಪೂರ್ವಿಕ ಯತಿಗಳಲ್ಲೊಬ್ಬರು ಎOದು ಸ್ಮರಿಸಿ ಈ ಪುತ್ತಿಗೆ ಮಠದ ಶ್ರೀಗಳು ನನಗೆ ಅಣ್ಣನ ಸಮಾನ ಇವರ ಚತುರ್ಥ ಪರ್ಯಾಯಕ್ಕೆ ತಮ್ಮನ ಶಾರ್ಟ್ ವಿಸಿಟ್ ಇದು. ಮತ್ತೆ ಸಂಸ್ಥಾನ ಸಮೇತ ಆಗಮಿಸುತ್ತೇವೆ ಎಂದರು.

 

ಈ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ರಾಜ್ಯಸಭಾ ಸದಸ್ಯ ಡಾಕ್ಟರ್ ವೀರೇಂದ್ರ ಹೆಗ್ಗಡೆಯವರೂ ಉಪಸ್ಥಿತರಿದ್ದು ದೇವರ ದರ್ಶನ ಪಡೆದರು. ಪೂಜ್ಯ ಪರ್ಯಾಯ ಶ್ರೀಪಾದರು ತಮ್ಮೆಲ್ಲರ ಹೆಸರಿನಲ್ಲಿಯೂ ಇಂದ್ರ ಪದ ಸೇರಿದ್ದು, ಉಡುಪಿ, ಧರ್ಮಸ್ಥಳ, ಮಂತ್ರಾಲಯಗಳ ಪ್ರತಿನಿಧಿಗಳು ಒಂದೆಡೆ ಇಂದು ಸೇರಿದ್ದು ತ್ರಿವೇಣಿ ಸಂಗಮ ಸದೃಶವಾಗಿ ಒಂದರ್ಥದಲ್ಲಿ ಮಹಾ ಕುಂಭ ನೆನೆಪಿಸುವಂತಿದೆ ಎಂದು ಪ್ರಶಂಸಿಸಿದರು.

ಆತ್ಮೀಯರಾದ ಹೆಗ್ಗಡೆಯವರನ್ನು ಉಭಯ ಶ್ರೀಪಾದರೂ ಗೌರವಿಸಿ ಆಶೀರ್ವದಿಸಿದರು.

 

ದಿವಾನರಾದ ನಾಗರಾಜಾಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರತೀಶ ತಂತ್ರಿ ಮತ್ತು ಮಠದ ವಿದ್ವಾಂಸರು ಅನೇಕ ಭಕ್ತರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top