ಹೇಮರೆಡ್ಡಿ ಮಲ್ಲಮ್ಮನವರ ನೂತನ ಮೂರ್ತಿ ಮೆರವಣಿಗೆ: ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಚಾಲನೆ

Upayuktha
0


ಹುನಗುಂದ: ಇಲಕಲ್ ತಾಲೂಕಿನ ಗೋನಾಳ ಎಸ್ ಟಿ ಗ್ರಾಮದಲ್ಲಿ ಫೆಬ್ರವರಿ 3ನೇ ತಾರೀಕಿಗೆ ಲೋಕಾರ್ಪಣೆಗೊಳಲ್ಲಿರುವ ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಮೂರ್ತಿ ಮೆರವಣಿಗೆ ಇಲಕಲ್ ನಗರದಲ್ಲಿ ಗುರುವಾರ ಮುಂಜಾನೆ 11 ಗಂಟೆಗೆ 101 ಕುಂಭಮೆರವಣಿಗೆ ಮುಖಾಂತರ ಮಹಾಸಾಧ್ವಿ ಶ್ರೀ ಹೇಮರೆಡ್ಡಿ ಮಲ್ಲಮ್ಮನ ಮೂರ್ತಿ ಇಳಕಲ್ ನಗರದ ಹೇಮರೆಡ್ಡಿ ಮಲ್ಲಮ್ಮ ಸರ್ಕಲ್‌ನಿಂದ ನಡೆಯಿತು.


ವಿವಿಧ ವಾದ್ಯ ಮೇಳಗಳೊಂದಿಗೆ ಕುಂಭಮೇಳ, ಕಲಾತಂಡಗಳು ಹಾಗೂ ಡಿಜೆ ಯೊಂದಿಗೆ ಇಳಕಲ್ ನಗರದ ಬಸವೇಶ್ವರ ಸರ್ಕಲ್ ಮಾರ್ಗವಾಗಿ ಎಸ್ ಆರ್ ಕಂಠಿ ವೃತ್ತ, ವಾಲ್ಮೀಕಿ ದೇವಸ್ಥಾನ ಮುಂಭಾಗದಿಂದ, ತಹಶೀಲ್ದಾರ್ ಕಾರ್ಯಾಲಯ ಮಾರ್ಗವಾಗಿ ದರ್ಗಾ ವರಿಗೆ ಮೆರವಣಿಗೆ ಸಾಗಿತು.             


ಹೇಮರೆಡ್ಡಿ ಮಲ್ಲಮ್ಮನವರ ಮೂರ್ತಿಯ ಭವ್ಯ ಮೆರವಣಿಗೆಗೆ ಮಾಜಿ ಶಾಸಕ ದೊಡ್ಡನಗೌಡ ಜಿ ಪಾಟೀಲ್ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ, ಟ್ರ್ಯಾಕ್ಟರ್ ಓಡಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.


ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಭವ್ಯ ಮೆರವಣಿಗೆಯಲ್ಲಿ ಕಲಾತಂಡಗಳ ನೃತ್ಯ ನೋಡುಗರ ಗಮನ ಸೆಳೆಯಿತು. ಸ್ವತ ಮಾಜಿ ಶಾಸಕ ದೊಡ್ಡನಗೌಡ ಜಿ ಪಾಟೀಲ್ ಅಭಿಮಾನಿಗಳೊಂದಿಗೆ ಡೊಳ್ಳು ಬಾರಿಸಿ ಯುವಕರನ್ನು ಉರಿದುಂಬಿಸಿದರು.


ಮಹಿಳೆಯರು ಕುಂಭಗಳನ್ನು ಒತ್ತು ದಾರಿ ಇದ್ದಕ್ಕೂ ಸಮಾಧಾನದಿಂದ ತಾಯಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನಂತೆ ಹಲವಾರು ತಾಸುಗಳ ಕಾಲ ಮೆರವಣಿಗೆ ಯುದ್ದಕ್ಕೂ ಸಾಗಿದರು.


ದಾರಿ ಉದ್ದಕ್ಕೂ ಡಿಜೆ ಹಾಡಿಗೆ ಯುವಕರು ನೃತ್ಯ ಮಾಡಿದರು. ಇಲ್ಕಲ್ ನಗರದಿಂದ ತಾಲೂಕಿನ ಗೋನಾಳ ಎಸ್ ಟಿ ಗ್ರಾಮದವರೆಗೆ ಭವ್ಯ ಮೆರವಣಿಗೆ ಸಕಲ ವಾದ್ಯ ಮೇಳಗಳೊಂದಿಗೆ ಸಾಗಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top