ಬಳ್ಳಾರಿ: ನಗರದಲ್ಲಿ ಇತ್ತೀಚೆಗೆ ನಡೆದ ವೈದ್ಯ ಸುನಿಲ್ ಕುಮಾರ್ ಅಪಹರಣ ಪ್ರಕರಣವನ್ನು ಅತ್ಯಂತ ಶೀಘ್ರಗತಿಯಲ್ಲಿ ಬೇಧಿಸಿದ ಪೋಲಿಸ್ ಇಲಾಖೆಯ ಕ್ರಮವನ್ನು ಶ್ಲಾಘಿಸಿ ನಗರದ ಸರ್ವ ಜನಾಂಗದ ನಾಗರಿಕರು ಸೇರಿ ಎಸ್‌ಪಿ ಶೋಭಾರಣಿ ವಿ ಜೆ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಎಸ್ ಪಿ ಶೋಭಾ ರಾಣಿ ಅವರು ಮಾತನಾಡಿ, ನನಗೆ ಕಳೆದ ಎರಡು ಮೂರು ದಿನಗಳಿಂದ ನಿಮ್ಮನ್ನು ಸನ್ಮಾನ ಮಾಡಲು ಬರುವುದಾಗಿ ಹಲವರು ಫೋನ್ ಕರೆ ಮಾಡಿ ತಿಳಿಸುತ್ತಿದ್ದರು, ಆದರೆ ಇಂದು ನೋಡಿದಾಗ ನನಗೆ ಬಹಳ ಸಂತೋಷವಾಯಿತು, ಇಷ್ಟು ಮಟ್ಟದಲ್ಲಿ ಜನರು ಬಂದು ನನ್ನನ್ನು ಸತ್ಕರಿಸಲಿದ್ದಾರೆ ಎಂದು ನನಗೆ ಅನಿಸಿಲ್ಲ, ನನಗೆ ನಿಮ್ಮ ಸನ್ಮಾನ ಮತ್ತು ಅಭಿನಂದನೆಯನ್ನು ಸ್ವೀಕರಿಸಿ ಬಹಳ ಸಂತಸಗೊಂಡಿದ್ದೇನೆ ಎಂದು ಭಾವುಕರಾಗಿ ಮಾತನಾಡಿದರು.
ನಾವು ಇಲಾಖೆಯ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಿದ್ದೇವೆ ಇದು ನಮ್ಮ ಕರ್ತವ್ಯ ನನ್ನ ಮೇಲೆ ಮತ್ತು ನಮ್ಮ ಇಲಾಖೆಯ ಮೇಲೆ ಬಳ್ಳಾರಿ ಜನತೆ ಇಟ್ಟುಕೊಂಡ ವಿಶ್ವಾಸವನ್ನು ಉಳಿಸಿಕೊಂಡು ನಿಮ್ಮ ಅಭಿಪ್ರಾಯದಂತೆ ಕೆಲಸ ಮಾಡುತ್ತೇವೆ, ಮುಂದಿನ ದಿನಗಳಲ್ಲಿ ನೀವು ನಮ್ಮ ಇಲಾಖೆ ಮೇಲೆ ನಂಬಿಕೆ ಇಟ್ಟುಕೊಂಡ ವಿಶ್ವಾಸವನ್ನು ಹುಸಿಗೊಳಿಸದೆ ಯಾವುದೇ ಸಂದರ್ಭದಲ್ಲಿ ನಿಮ್ಮ ಸಹಾಯಕ್ಕೆ ಬರಲಿದ್ದೇವೆ ಎಂದು ಎಸ್ ಪಿ ಶೋಭಾರಾಣಿ ವಿ. ಜೆ ತಿಳಿಸಿದರು.
ಈ ಸಂದರ್ಭದಲ್ಲಿ ಆರ್ಯವೈಶ್ಯ ಸಂಘ, ರೆಡ್ಡಿ ಜನ ಸಂಘ ಮತ್ತು ಕಮ್ಮ ಜನ ಸಂಘ ತಲಾ ಒಂದು ಲಕ್ಷ ರೂಪಾಯಿಗಳನ್ನು ಪೊಲೀಸ್ ವೆಲ್ಫರ್ ನಿಧಿಗೆ ನೀಡಿದರು. ಈ ಸಂದರ್ಭದಲ್ಲಿ ಲಿಕ್ಕರ್ ವೇಣು, ನಾರಾ ಪ್ರತಾಪ್ ರೆಡ್ಡಿ ಪೋಲಾ ರಾಧಾಕೃಷ್ಣ, ಆರ್ಯವೈಶ್ಯ ಸಂಘದ ಡಾಕ್ಟರ್ ರಮೇಶ್ ಗೋಪಾಲ್, ರಾಮಕೃಷ್ಣ ರೇಣಿಗುಂಟ್ಲ, ಕಮ್ಮ ಜನಾಂಗದ ಅನೂಪ್ ಕುಮಾರ್,ಸೊಂತ ಗಿರಿಧರ್, ಎಲ್ಲಾ ಜನಾಂಗದ ಮುಖಂಡರು ಮತ್ತು ಸಾರ್ವಜನಿಕರು ಸೇರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ