ಬಳ್ಳಾರಿ: ಸಂಗೀತ ಪಿತಾಮಹರಂದೇ ಪ್ರಖ್ಯಾತರಾದ ಪುರಂದರ ದಾಸರ 461ನೇಯ ಆರಾಧನೆ ಅಂಗವಾಗಿ ಮಹಾರಾಷ್ಟ್ರದ ಕ್ಷೇತ್ರ ಪಂಢರಪುರದಲ್ಲಿ ಹರಿದಾಸ ಸೇವಾಸಂಘ ಪುಣೆ ಹಾಗೂ ಶ್ರೀಶದಾಸ ಭಜನೆ ಮಂಡಳಿ ಲಿಂಗಸಗೂರು ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಳ್ಳಾರಿ ರೇಡಿಯೋ ಪಾರ್ಕ ಶ್ರೀವ್ಯಾಸರಾಜ ಮಹಿಳಾ ಭಜನಾ ಮಂಡಳಿಯವರ ಅಭಿನಯಿಸಿದ" ಪಾಂಡುರಂಗ ತ್ವತ್ಪಾದ ಪಾಲಿಸಯ್ಯ" ಎಂಬ ನೃತ್ಯ ರೂಪಕ ಅಪಾರ ಭಕ್ತಾದಿಗಳ ಮನ ಸೂರೆ ಗೊಂಡಿತು.
ಪಾಂಡುರಂಗನ ಮಹಿಮೆ ಕುರಿತು ಯತಿವರೇಣ್ಯರು ಹಾಗೂ ದಾಸ ಶ್ರೇಷ್ಠರು ರಚಿಸಿದ ಕೃತಿಗಳಿಗೆ ಅಮೋಘ ನೃತ್ಯಪ್ರದರ್ಶನ ಮಾಡಿ ಸಾವಿರಾರು ಭಕ್ತಾಧಿಗಳ ಪ್ರಶಂಸೆಗೆ ಪಾತ್ರರಾದರು. ಕಾರ್ಯಕ್ರಮದಲ್ಲಿ ಎಲ್ಲಾ ವಯೋಮಾನದ ಚಿಕ್ಕ ಬಾಲಕರು ಪುರುಷರು ಹಾಗೂ ಮಹಿಳಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷ ವಾಗಿತ್ತು.
ಕಾರ್ಯಕ್ರಮದ ರೂವಾರಿಯಾದ ವಿಜಯಲಕ್ಷ್ಮಿ ಸತ್ಯನಾರಾಯಣ ಅವರನ್ನು ಕಾರ್ಯಕ್ರಮದ ಆಯೋಜಕರು ಫಲ ಮಂತ್ರಾಕ್ಷತೆ ನೀಡಿ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಫಲಮಂತ್ರಾಕ್ಷತೆ ನೀಡಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ