ಮಂಗಳೂರು: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರತಿಷ್ಠಿತ, ಅದ್ಭುತ ಪವರ್ ಮತ್ತು ರಗಡ್ ಸಾಮರ್ಥ್ಯ ಹೊಂದಿರುವ ಐತಿಹಾಸಿಕ ಎಸ್‌ಯುವಿ ಲ್ಯಾಂಡ್ ಕ್ರೂಸರ್ 300ನ ಬುಕಿಂಗ್ ಅನ್ನು ಪ್ರಾರಂಭಿಸಿದೆ.
70 ವರ್ಷಗಳ ಪರಂಪರೆಯನ್ನು ಹೊಂದಿರುವ ಲ್ಯಾಂಡ್ ಕ್ರೂಸರ್ 300 ಟೊಯೋಟಾದ ಎಂಜಿನಿಯರಿಂಗ್ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತದೆ. ಈ ವಾಹನವನ್ನು ಐಷಾರಾಮಿತನ ಮತ್ತು ಆಫ್ ರೋಡ್ ಸಾಮರ್ಥ್ಯವನ್ನು ಬಯಸುವ ಡ್ರೈವಿಂಗ್ ಉತ್ಸಾಹಿಗಳ ನಿರೀಕ್ಷೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ.
ಲ್ಯಾಂಡ್ ಕ್ರೂಸರ್ 300 ಟೊಯೋಟಾದ ಜಾಗತಿಕ ಶ್ರೇಣಿಯ ಪ್ರಮುಖ ಎಸ್‌ಯುವಿ ಆಗಿದೆ. ಇದೀಗ ಬಂದಿರುವ ಹೊಸ ಅಪ್ ಡೇಟೆಡ್ ವರ್ಷನ್ ಹೊಸ ಪ್ಲಾಟ್ ಫಾರ್ಮ್, ಸುಧಾರಿತ ಪವರ್ ಟ್ರೇನ್, ಅತ್ಯಾಧುನಿಕ ಸುರಕ್ಷತಾ ಫೀಚರ್ ಗಳು ಮತ್ತು ಶ್ರೀಮಂತ ಇಂಟೀರಿಯರ್ ನ ಸೊಗಸಾದ ಮಿಶ್ರಣವಾಗಿದೆ. ಐಷಾರಾಮಿತನ, ಪವರ್ ಮತ್ತು ಅದ್ಭುತ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿದೆ.
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನ ಸೇಲ್ಸ್ ಸರ್ವೀಸ್ ಯೂಸ್ಡ್ ಕಾರ್ ಬಿಸಿನೆಸ್ ವಿಭಾಗದ ಉಪಾಧ್ಯಕ್ಷ ಶ್ರೀ ವರೀಂದರ್ ವಾಧ್ವಾ ಅವರು ಮಾತನಾಡುತ್ತಾ, "ಲ್ಯಾಂಡ್ ಕ್ರೂಸರ್ 300 ಅದ್ಭುತ ಪವರ್, ಅತ್ಯಾಧುನಿಕತೆ ಮತ್ತು ಆಫ್-ರೋಡ್ ಸಾಮರ್ಥ್ಯದ ಅದ್ಭುತ ಪ್ರತಿರೂಪವಾಗಿದೆ. ಟೊಯೋಟಾದ ಟಿ ಎನ್ ಜಿ ಎ -ಎಫ್ ಪ್ಲಾಟ್ ಫಾರ್ಮ್ ನಲ್ಲಿ ನಿರ್ಮಿಸಲಾಗಿರುವ ಈ ಮಾದರಿಯು ಶಕ್ತಿಯುತವಾದ ಟ್ವಿನ್ ಟರ್ಬೋ ವಿ7 ಎಂಜಿನ್ ಅನ್ನು ಹೊಂದಿದ್ದು, ಅದ್ಭುತ ಚಾಲನಾ ಅನುಭವ ಒದಗಿಸುತ್ತದೆ. ಅತ್ಯಾಧುನಿಕ ಸುರಕ್ಷತಾ ಫೀಚರ್ ಗಳು ಮತ್ತು ಐಷಾರಾಮಿತನವನ್ನು ಹೊಂದಿದ್ದರೂ ರಗಡ್ ವಿನ್ಯಾಸವನ್ನು ಹೊಂದಿದೆ. ಲ್ಯಾಂಡ್ ಕ್ರೂಸರ್ 300 ನಮ್ಮ ಗ್ರಾಹಕರ ನಿರೀಕ್ಷೆಗಳನ್ನು ಪೂರೈಸುತ್ತದೆ ಎಂಬ ನಾವು ನಂಬಿಕೆಯನ್ನು ನಾವು ಹೊಂದಿದ್ದೇವೆ. ಇದು ಪರಂಪರೆ ಮತ್ತು ಹೊಸತನದ ಪರಿಪೂರ್ಣ ಸಮತೋಲನವಾಗಿದ್ದು, ಪ್ರೀಮಿಯಂ ಎಸ್‌ಯುವಿ ವಿಭಾಗದ ನಿಜವಾದ ಐಕಾನ್ ಆಗಿದೆ" ಎಂದು ಹೇಳಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ