ವಿವೇಕಾನಂದ ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ 67ವಿದ್ಯಾರ್ಥಿಗಳು ಆಯ್ಕೆ

Upayuktha
0

 


ಪುತ್ತೂರು: ಬೆಂಗಳೂರಿನ ಟಾಟಾ ಇಲೆಕ್ಟ್ರಾನಿಕ್ಸ್ ಸಿಸ್ಟಂ ಸೊಲ್ಯೂಷನ್ ಇವರು ಪುತ್ತೂರಿನ ವಿವೇಕಾನಂದ ಕಲಾ,ವಾಣಿಜ್ಯ ಹಾಗೂ ವಿಜ್ಞಾನ (ಸ್ವಾಯತ್ತ) ಕಾಲೇಜು ಇಲ್ಲಿಯ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನವನ್ನು ನಡೆಸಿದ್ದು ಒಟ್ಟು 67 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳು ಲಿಖಿತ ಪರೀಕ್ಷೆ ಹಾಗೂ ಮೌಖಿಕ ಸಂದರ್ಶನದಲ್ಲಿ ಭಾಗವಹಿಸಿ ಹುದ್ದೆಗಳಿಗೆ ಆಯ್ಕೆಗೊಂಡಿರುತ್ತಾರೆ.


ವಿದ್ಯಾರ್ಥಿಗಳು ಪದವಿಯ ಅಂತಿಮ ಪರೀಕ್ಷೆಯನ್ನು ಪೂರ್ಣಗೊಳಿಸಿ ಜುಲೈ ತಿಂಗಳಿನಲ್ಲಿ ಹುದ್ದೆಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ ಹಾಗೂ ಉದ್ಯೋಗ ಹಾಗೂ ತರಬೇತಿ ಘಟಕದ ಸಂಯೋಜಕಿ ರೇಖಾ ಪಿ  ತಿಳಿಸಿದ್ದಾರೆ.



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top