ವಿಜ್ಞಾನ, ಶಿಕ್ಷಣ, ಆರೋಗ್ಯ, ಆಡಳಿತ ಮುಂತಾದ ಕ್ಷೇತ್ರದ ಗಣ್ಯರಿಂದ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಕಾರ್ಯದ ಶ್ಲಾಘನೆ
ಪ್ರಯಾಗರಾಜ: ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ಕುಂಭಕ್ಷೇತ್ರದ ಸೆಕ್ಟರ್ 7 ರಲ್ಲಿ ಪ್ರದರ್ಶನಿ ಏರ್ಪಡಿಸಲಾಗಿದೆ. ಈ ಪ್ರದರ್ಶಿನಿಗೆ ಭಕ್ತರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು ಫೆಬ್ರವರಿ 11 ರ ವರೆಗೆ 10 ಸಾವಿರಗಿಂತಲೂ ಹೆಚ್ಚಿನ ಭಕ್ತರು ಭೇಟಿ ನೀಡಿದ್ದಾರೆ.
ಸಾಧು ಸಂತರ ಸಹಿತ ವೈದ್ಯಕೀಯ, ಶಿಕ್ಷಣ, ವಿಜ್ಞಾನ, ಆಡಳಿತ ಮುಂತಾದ ಕ್ಷೇತ್ರದಲ್ಲಿ ಕಾರ್ಯ ಮಾಡುವ ಉನ್ನತ ಸ್ಥಾನದಲ್ಲಿರುವ ಗಣ್ಯರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಕಾರ್ಯವನ್ನು ಶ್ಲಾಘಿಸಿದ್ದಾರೆ. ಈ ಸಮಯದಲ್ಲಿ 'ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ಸ್ ಸೈನ್ಸ್' ನ ಕೆ.ಕೆ. ಸಿಂಹ, 'ಇಸ್ರೋ'ದ ನಿವೃತ್ತ ವಿಜ್ಞಾನಿ ಡಾ. ನಳಿನಿ ಸತೀಶ, ಉತ್ತರ ಮಧ್ಯ ರೈಲ್ವೆ ಮಹಾವ್ಯವಸ್ಥಾಪಕ ಶರತ ಚಂದ್ರಯನ್ ಇವರ ಜೊತೆಗೆ ಅನೇಕ ಗಣ್ಯರು ಸಂಪೂರ್ಣ ಪ್ರದರ್ಶನ ವೀಕ್ಷಿಸಿದರು ಮತ್ತು ಉತ್ಸಾಹಮಯ ಪ್ರತಿಕ್ರಿಯೆ ನೀಡಿದರು.
'ರಾಷ್ಟ್ರೀಯ ವಿದ್ಯಾರ್ಥಿ ಸೇನೆ'ಯ ಭಾಗವಾಗಿರುವ ಉತ್ತರ ಪ್ರದೇಶದಲ್ಲಿನ 'ಭಾರತ ಸ್ಕೌಟ್ ಅಂಡ್ ಗೈಡ್'ನ ವಿದ್ಯಾರ್ಥಿಗಳು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ನೀಡಲಾಗುವ 'ವ್ಯಕ್ತಿತ್ವ ವಿಕಾಸ ಮತ್ತು ಒತ್ತಡ ನಿಯಂತ್ರಣ', ಈ ವಿಷಯದ ಕುರಿತಾದ ಮಾರ್ಗದರ್ಶನದ ಲಾಭ ಪಡೆದರು.
ಉತ್ತರಪ್ರದೇಶ, ಹರಿಯಾಣ, ರಾಜಸ್ಥಾನ್, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರಾಂಚಲ ಹೀಗೆ ಅನೇಕ ರಾಜ್ಯದಿಂದ, ಹಾಗೂ ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಯುರೋಪ ಇಂತಹ ಅನೇಕ ದೇಶದಿಂದ ಬಂದಿರುವ ಭಕ್ತರು ಕೂಡ ಆಧ್ಯಾತ್ಮ ವಿಷಯದ ವೈಜ್ಞಾನಿಕ ಪರೀಕ್ಷಣೆಯ ಬಗ್ಗೆ ಮಾಹಿತಿ ಜಿಜ್ಞಾಸೆಯಿಂದ ತಿಳಿದುಕೊಂಡರು.
ಅನೇಕ ಜಿಜ್ಞಾಸುಗಳು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ಆಯೋಜಿಸಲಾಗುವ 5 ದಿನದ ಕಾರ್ಯಶಾಲೆಯಲ್ಲಿ ಸಹಭಾಗಿ ಆಗುವ ಇಚ್ಛೆ ವ್ಯಕ್ತಪಡಿಸಿದರು. ಈ ಪ್ರದರ್ಶನಿಯಲ್ಲಿ ನೀಡಲಾಗುವ ಅಧ್ಯಾತ್ಮ ಶಾಸ್ತ್ರಿಯ ಮಾಹಿತಿ ಮತ್ತು ಅದರ ಜೊತೆಗೆ ವೈಜ್ಞಾನಿಕ ಆಧಾರ ಜನರಿಗೆ ಹಿಡಿಸಿತು. ಅನೇಕ ಭಕ್ತರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಕಾರ್ಯದ ಜೊತೆಗೆ ಜೋಡಣೆ ಆಗಲು ಇಚ್ಚಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ