ಹಿಂದೂ ಜನಜಾಗೃತಿ ಸಮಿತಿಯಿಂದ ನೆಲಮಂಗಲದಲ್ಲಿ ಹಿಂದೂ ರಾಷ್ಟ್ರ-ಜಾಗೃತಿ ಸಭೆ ಸಂಪನ್ನ
ಬೆಂಗಳೂರು : ಇಂದು ಲವ್ ಜಿಹಾದ್ ಮತ್ತು ಹಲಾಲ್ ಪ್ರಮಾಣ ಪತ್ರದ ಮೂಲಕ ಭಾರತವನ್ನು ಇಸ್ಲಾಮಿಕರಣ ಮಾಡುವ ಪ್ರಯತ್ನ ನಡೆಯುತ್ತಿದೆ, ಮತ್ತೊಂದೆಡೆ ಕ್ರಿಶ್ಚಿಯನ್ ಮಿಷಿನರಿಗಳು ಹೊಸ ಹೊಸ ತಂತ್ರಜ್ಞಾನದೊಂದಿಗೆ ಮತ್ತು ಅಮಾಯಕ ಹಿಂದೂಗಳಿಗೆ ಆಮಿಷಗಳನ್ನೊಡ್ಡಿ ಹಿಂದೂಗಳನ್ನು ಮತಾಂತರಿಸುತ್ತಿದ್ದಾರೆ.
ಹಿಂದೂ ಸಂಸ್ಕೃತಿಯ ಶೃದ್ಧಾಸ್ಥಾನವಾದ ದೇವಸ್ಥಾನಗಳನ್ನು ಸರಕಾರಿಕರಣಗೊಳಿಸಿ ಹಿಂದೂಗಳ ಆಚರಣೆ, ಸಂಪ್ರದಾಯವನ್ನು ನಾಶಗೊಳಿಸುವ ವ್ಯವಸ್ಥಿತವಾದ ಷಡ್ಯಂತ್ರ ನಡೆಯುತ್ತಿದೆ ಮತ್ತು ದೇವಸ್ಥಾನಗಳಲ್ಲಿ ಹಿಂದೂಗಳಿಗೆ ಧರ್ಮಶಿಕ್ಷಣ ಸಿಗದೆ ಅವರು ಪಾಶ್ಚಾತ್ಯ ಸಂಸ್ಕೃತಿಗೆ ಒಳಗಾಗುತ್ತಿದ್ದಾರೆ.
ನಮ್ಮ ಮುಂದಿನ ಪೀಳಿಗೆಯನ್ನು ಸುಸಂಸ್ಕೃತರನ್ನಾಗಿಸಲು, ಹಿಂದೂಗಳ ಅಸ್ತಿತ್ವವನ್ನು ಉಳಿಸಲು ಮತ್ತು ವಿಶ್ವದಲ್ಲಿ ಶಾಂತಿ ನೆಲೆಸಲು ಭಾರತವನ್ನು ಹಿಂದೂರಾಷ್ಟ್ರವೆಂದು ಘೋಷಿಸಲು ಸಂವಿಧಾನಾತ್ಮವಾಗಿ ಪ್ರಯತ್ನ ಮಾಡುವ ಅವಶ್ಯಕತೆ ಇದೆ‘ ಎಂದು ಹಿಂದೂ ಜನಜಾಗೃತಿ ಸಮಿತಿಯ ಬೆಂಗಳೂರು ಜಿಲ್ಲಾ ಸಮನ್ವಯಕರಾದ ಶರತ್ ಕುಮಾರ್ ಇವರು ಪ್ರತಿಪಾದಿಸಿದರು.
ಅವರು ನೆಲಮಂಗಲ ನಗರದ ಚಿಕ್ಕಯಲ್ಲಯ್ಯ ಸಮುದಾಯ ಭವನದಲ್ಲಿ ಆಯೋಜಿಸಲಾದ ಹಿಂದೂ ರಾಷ್ಟ್ರ-ಜಾಗೃತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಈ ವೇಳೆ ಪವಾಡ ಬಸವಣ್ಣ ದೇವರ ಮಠದ ಪೀಠಾಧಿಪತಿಗಳಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹಾಗೂ ಸನಾತನ ಸಂಸ್ಥೆಯ ಸೌ.ಅಶ್ವಿನಿ ನಾಗರಾಜ್, ಹಿಂದೂ ಮುಖಂಡರಾದ ರವಿ ಕುಮಾರ, ಶ್ರೀನಿವಾಸ್ ಸೇರಿದಂತೆ 1೦೦ ಕ್ಕೂ ಅಧಿಕ ಧರ್ಮಾಭಿಮಾನಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಶರತ್ ಕುಮಾರ್ ಅವರು ಮುಂದೆ ಮಾತನಾಡಿ, 2013ರಲ್ಲಿ ವಕ್ಫ್ ಬೋರ್ಡ್ ಗೆ ತಿದ್ದುಪಡಿಯ ನಂತರ 4 ಲಕ್ಷ ಎಕರೆ ಇದ್ದ ವಕ್ಫ್ ಆಸ್ತಿ ಕೇವಲ 10ವರ್ಷದಲ್ಲಿ 9 ಲಕ್ಷ ಎಕರೆ ಆಗಿದೆ. ದೇಶದಲ್ಲಿ ಸೈನ್ಯ, ರೈಲ್ವೆ ಇಲಾಖೆಯ ನಂತರದ ಅತಿದೊಡ್ಡ ಖಾಸಗಿ ಜಾಗದ ಮಾಲೀಕರು ಯಾರೆಂದರೆ ಅದು ವಕ್ಫ್ ಬೋರ್ಡ್. ಇಂದು ವಕ್ಫ್ ಬೋರ್ಡ್ ನಿಂದ ಅಮಾಯಕ ಹಿಂದೂಗಳ ಮತ್ತು ದೇವಸ್ಥಾನಗಳ ಸಾವಿರಾರು ಎಕರೆ ಜಾಗವನ್ನು ಅತಿಕ್ರಮಿಸುತ್ತಿರುವುದು ಕಾಣುತ್ತಿದ್ದೇವೆ.
ಕರ್ನಾಟಕದಲ್ಲಿ 34,500 ಕ್ಕೂ ಅಧಿಕ ದೇವಸ್ಥಾನಗಳು ಸರಕಾರ ವಶಪಡಿಸಿಕೊಂಡಿದೆ, ಈ ಸರಕಾರಿಕರಣಗೊಂಡ ದೇವಸ್ಥಾನದಲ್ಲಿ ಭ್ರಷ್ಟಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ದೇವಸ್ಥಾನದ ಹುಂಡಿಯ ಹಣವನ್ನು ಅನ್ಯಧರ್ಮಿಯರ ಉದ್ದಾರಕ್ಕಾಗಿ ಬಳಸಲಾಗುತ್ತಿದೆ. ಇಂದು ಭಾರತದಲ್ಲಿ ಹಿಂದೂಗಳ ಉತ್ಸವ, ಮೆರವಣಿಗೆಯ ಮೇಲೆ ಮತಾಂದರಿಂದ ಕಲ್ಲು ತೂರಾಟ ಮತ್ತು ಹಲ್ಲೆ ಮಾಡುವ ಪ್ರಕರಣಗಳು ಅವ್ಯಾಹತವಾಗಿದೆ ನಡೆಯುತ್ತಿದೆ.
ಇಂದು ಲವ್ ಜಿಹಾದ್ ನ ಮಾಧ್ಯಮದಿಂದ ಹಿಂದೂ ಹೆಣ್ಣುಮಕ್ಕಳನ್ನು ಮೋಸದ ಪ್ರೇಮ ಜಾಲಕ್ಕೆ ಬೀಳಿಸಲು ಶಾಹಿನ್ ಗ್ಯಾಂಗ್ ರೀತಿಯಲ್ಲಿ ಅನೇಕ ತಂಡಗಳು ಕಾರ್ಯನಿರತವಾಗಿವೆ. ಈ ಎಲ್ಲ ಷಡ್ಯಂತ್ರಗಳನ್ನು ವಿಫಲಗೊಳಿಸಲು ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಣೆ ಮಾಡುವುದೊಂದೇ ಪರ್ಯಾಯವಾಗಿದೆ‘ ಎಂದರು.
ಪವಾಡ ಬಸವಣ್ಣ ದೇವರ ಮಠದ ಪೀಠಾಧಿಪತಿಗಳಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಇವರು ಮಾತನಾಡಿ ಇಂದು ಮನೆಯಿಂದಲೇ ಧರ್ಮಾಚರಣೆಯನ್ನು ಕಲಿಸಿಕೊಡುವುದು ತಂದೆ ತಾಯಿಯರ ಮೊದಲ ಕರ್ತವ್ಯವಾಗಿದೆ. ನಮ್ಮ ಕುಟುಂಬದಲ್ಲಿನ ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳುವ ಕಾರ್ಯವಾಗಬೇಕಾಗಿದೆ ಎಂದರು.
ಸನಾತನ ಸಂಸ್ಥೆಯ ಸೌ. ಅಶ್ವಿನಿ ನಾಗರಾಜ್ ಇವರು ಮಾತನಾಡಿ, ಹಿಂದೂ ಎಂದರೆ ಯಾರು? ಹೀನಾನಿ ಗುಣಾನಿ ದೂಷಯತಿ ಇತಿ ಹಿಂದೂ’ ಯಾರು ಹೀನವಾಗಿರುವ ಕೆಟ್ಟ ದೋಷಗಳನ್ನು ಕಡಿಮೆ ಮಾಡಿ ಒಳ್ಳೆಯ ಗುಣವನ್ನು ಜೀವನದಲ್ಲಿ ಅಳವಡಿಸುತ್ತಾನೆಯೋ ಅವನು ಹಿಂದೂವಾಗಿರುತ್ತಾನೆ.
ಸನಾತನ ಹಿಂದೂ ಧರ್ಮವು ನಿತ್ಯ ನೂತನವಾಗಿದೆ. ಇದು ಲಕ್ಷಾಂತರ ವರ್ಷಗಳಿಂದ ಈ ಭೂಮಿಯ ಮೇಲೆ ಬೇರೂರಿದೆ. ಇಂತಹ ಸನಾತನ ಹಿಂದೂ ಧರ್ಮವನ್ನು ನಾಶಪಡಿಸಲು ಇಲ್ಲಸಲ್ಲದ ಆರೋಪಗಳನ್ನು ಇಂದಿನ ತಥಾಕಥಿತ ಬುದ್ದಿಜೀವಿಗಳು ಮಾಡುತ್ತಿದ್ದಾರೆ. ಆದರೆ ಈಶ್ವರನಿಂದ ನಿರ್ಮಿತವಾದ ಈ ಸನಾತನ ಹಿಂದೂ ಧರ್ಮವು ಶಾಶ್ವತವಾಗಿದೆ.
ಜೀವನದಲ್ಲಿ ಉನ್ನತಿಗಾಗಿ, ಮುಕ್ತಿಯ ಪಥದಲ್ಲಿ ಮುನ್ನಡೆಯಲು ಭಗವಂತನ ನಾಮಸಾಧನೆಯೇ ಅತ್ಯುತ್ತಮ ಸಾಧನವಾಗಿದೆ. ಆದ್ದರಿಂದ ಆಪತ್ಕಾಲದಿಂದ ಸ್ವಂತದ ಮತ್ತು ತಮ್ಮ ಪರಿವಾರದ ರಕ್ಷಣೆಗಾಗಿ ಭಗವಂತನ ನಾಮಜಪ ಇಂದಿನಿಂದಲೇ ಪ್ರಾರಂಭಿಸೋಣ‘ ಎಂದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ