ಸ್ಫೂರ್ತಿ ಸೆಲೆ: ಬದುಕಿನಲ್ಲಿ ಆಶಾವಾದಿಗಳಾಗಿರಿ

Upayuktha
0





ಮ್ಮ ಬದುಕು ಎರಡು ತೀರಗಳ ನಡುವಿನ ಪಯಣ. ಒಂದು ತೀರ ಹುಟ್ಟಿನಿಂದ ಶುರುವಾಗಿ ಸಾವಿನಲ್ಲಿ ಕೊನೆಗೊಳ್ಳುತ್ತದೆ. ಇವೆರಡರ ನಡುವಿನ ಪಯಣ ಭರವಸೆ ಅಥವಾ ಆಶಾವಾದಿತ್ವವನ್ನು ಹೊಂದಿರುತ್ತದೆ.


ಬದುಕಿನಲ್ಲಿ ಆಶಾವಾದಿಯಾಗುವುದೆಂದರೆ ಕೇವಲ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಾ ಗಾಳಿಗೋಪುರ ಕಟ್ಟುವುದಲ್ಲ, ಅದು ಒಂದು ಸಕಾರಾತ್ಮಕ ಸಿದ್ಧತೆ. ನಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಗುರಿಯತ್ತ ಭರವಸೆಯೊಂದಿಗೆ ಸಾಗುವುದು ಆಗಿದೆ. ದೇವರು ಒಂಬತ್ತು ಬಾಗಿಲುಗಳನ್ನು ಮುಚ್ಚಿದರೂ, ಕಿಟಕಿ ಯೊಂದನ್ನು ತೆರೆದಿರುತ್ತಾನೆ. ಕಿಟಕಿಯನ್ನು ಹುಡುಕಾಡಿ ಮುಂದಿನ ಗುರಿಯತ್ತ ಸಾಗುವುದು ಆಶಾವಾದಿತ್ವ ಆಗಿದೆ.


ಸಾಲು ಸಾಲಾಗಿ ಚಿತ್ರಗಳು ಪ್ಲಾಪ್ ಆದರೂ ಮುಂದಿನ ಚಿತ್ರದತ್ತ ಸಿನಿಮಾ ನಟರು  ಹೆಜ್ಜೆ ಹಾಕುವುದು, ಕ್ರಿಕೆಟ್ ಟೀಮ್ ನಿಂದ ಹೊರ ಬಿದ್ದರೂ, ದೇಶೀಯ ಟೂರ್ನಿಯಲ್ಲಿ ಆಡಿ, ಮತ್ತೆ ಕಮ್ ಬ್ಯಾಕ್ ಮಾಡಲು ಆಟಗಾರರು ಯತ್ನಿಸುವುದು ಇವೆಲ್ಲವೂ ಮುಂದೆ ಒಂದಲ್ಲಾ ಒಂದು ದಿನ ಕಾಲ. ಬರುತ್ತದೆ ಎಂಬ ಆಶಾವಾದಿ ಗುಣವನ್ನು ಅಳವಡಿಸಿ ಕೊಂಡಿದ್ದಕ್ಕೆ ಎಂದು ಹೇಳಬಹುದು.


ಆಶಾವಾದಿ ಎಂಬ ಗುಣ ತಾಳ್ಮೆ, ಸಹನೆ, ರಿಸ್ಕ್ ತೆಗೆದುಕೊಳ್ಳುವುದು, ತಪ್ಪುಗಳನ್ನು ತಿದ್ದಿ ಕೊಳ್ಳುವುದು, ಮುಂತಾದ ಗುಣಗಳನ್ನು ಕಲಿಸುತ್ತದೆ, ಕಷ್ಟ ಎಂಬ ಕಾರ್ಮೋಡ ಇದ್ದಾಗ ಆಶಾವಾದಿ ಎಂಬ ನಕ್ಷತ್ರ ನಮ್ಮ ಜೀವನದಲ್ಲಿ ಹೊಸ ಚೇತನವನ್ನು ಮೂಡಿಸುತ್ತದೆ.


ಆಶಾವಾದಿ ಎಂಬ ಸದ್ಗುಣ ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಪ್ರತಿಯೊಂದು ಸಾರಿ ಬಿದ್ದಾಗಲೂ ನಮ್ಮನ್ನು ಎಬ್ಬಿಸುವುದು, ಆಶಾವಾದಿ ಎಂಬ ಕ್ವಾಲಿಟಿ ಮಾತ್ರ. ಸೋಲೇ ಗೆಲುವಿನ ಸೋಪಾನ ಸೋಪಾನ ಎಂಬುದನ್ನು ಕಲಿಸುವುದೇ ಆಶಾವಾದಿ  ಎಂಬ ಕ್ವಾಲಿಟಿ.


ಒಂದು ಗ್ಲಾಸಿನಲ್ಲಿ ಅರ್ಧದಷ್ಟು ನೀರು ಇದ್ದರೆ ಇಷ್ಟಾದರೂ ಇದೆಯಲ್ಲ ಎಂಬ ಪಾಲಿಗೆ ಬಂದಿದ್ದೇ ಪಂಚಾಮೃತ ಎಂಬುದನ್ನು ಕಲಿಸುವ ಸಂತೃಪ್ತಿಯ ಆಶಾವಾದಿ ಕ್ವಾಲಿಟಿಯನ್ನು ಬೆಳೆಸಿಕೊಳ್ಳಬೇಕು ಎಂದು ತೋರಿಸೋಣ.


Every dog has its own Sunday ಎನ್ನುವ ಹಾಗೆ ನಮಗೂ ಒಳ್ಳೆಯ ಕಾಲ ಬರುತ್ತೆ ಎಂಬುದನ್ನು ಕಲಿಸುವ ಆಶಾವಾದಿ ಕ್ವಾಲಿಟಿಯನ್ನು ಅಳವಡಿಸಿ ತೋರಿಸೋಣ. ಮತ್ತೆ ಭೇಟಿಯಾಗೋಣ. ಏನಂತೀರಾ?


- ಗಾಯತ್ರಿ ಸುಂಕದ, ಬದಾಮಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top