ಮುಳಿಯ ಪ್ರಾಪರ್ಟಿ- ಕಲ್ಲಡ್ಕ ಸಮೀಪದಲ್ಲಿ ಫಾರ್ಮ್ ಲ್ಯಾಂಡ್ಸ್ ಪ್ರೊಜೆಕ್ಟ್ ಉದ್ಘಾಟನೆ

Upayuktha
0


ಪುತ್ತೂರು: ಬಂಟ್ವಾಳದ ಕಲ್ಲಡ್ಕ ಸಮೀಪದ ಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯಲ್ಲಿ ಮುಳಿಯ ಪ್ರಾಪರ್ಟೀಸ್‌ನವರ 7.5 ಸೆಂಟ್ಸ್ ಮೇಲ್ಪಟ್ಟ ಸುಮಾರು 44 ಪ್ಲಾಟ್‌ಗಳು ಇರುವ "ಸದಾಶಿವ ಭಾಗ್" ಫಾರ್ಮ್‌ ಲ್ಯಾಂಡ್ ಪ್ರೊಜೆಕ್ಟ್ಸ್‌ ಉದ್ಘಾಟನೆಗೊಂಡಿತು.


ಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ, "ಪ್ರಕೃತಿದತ್ತ ವಸತಿ ವ್ಯವಸ್ಥೆಯೊಂದಿಗೆ ಇಲ್ಲಿ ಗೋಶಾಲೆ ಕೂಡ ಮಾಡುತ್ತಿರುವುದು ಮುಳಿಯ ಮನೆತನದ ಸಾಮಾಜಿಕ -ಧಾರ್ಮಿಕ ಅಭಿರುಚಿಯ ಉನ್ನತೆ ಮತ್ತು ಜವಾಬ್ದಾರಿಯನ್ನು ತಿಳಿಸುತ್ತದೆ" ಎಂದರು.


ಡಾ. ಕಲ್ಲಡ್ಕ ಪ್ರಭಾಕರ ಭಟ್ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಾ, "ಸನಾತನ ಧರ್ಮದ ಪ್ರಜ್ಞೆಯೊಂದಿಗೆ ಪ್ರಕೃತಿಯೊಂದಿಗೆ ಬದುಕು" ಎನ್ನುತ್ತಿರುವ ಈ ಪ್ರಾಜೆಕ್ಟ್ ನಮ್ಮ ಕಲ್ಲಡ್ಕ ಶಾಲೆಯ ಹತ್ತಿರ ಬಂದಿರುವುದು ಸಂತಸದ ವಿಚಾರ ಎಂದರು.


ಹತ್ತು ಎಕರೆ ಭೂಮಿಯಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಪ್ರಕೃತಿದತ್ತವಾದ ಫಾರ್ಮುಲಾಂಡ್ಸ್ ಗಳ ಮತ್ತು ಫಾರಂ ಹೌಸ್‌ಗಳ ಯೋಜನೆ ಇದಾಗಿದೆ" ಪೇಟೆಯ ಗೊಂದಲದಿಂದ ಸಮಾಧಾನದತ್ತ, ಹಳ್ಳಿಯಲ್ಲಿ ಸಣ್ಣ ಮನೆ ಒಂದರಲ್ಲಿ ತಾವೇ ಬೆಳೆಸಿದ ತರಕಾರಿ, ಹೂವು, ಹಣ್ಣು, ಇಬ್ಬನಿ, ಮರ, ನೀರು, ಗಾಳಿ ಮುಂತಾದವುಗಳನ್ನು ಅನುಭವಿಸುವ ಫಾರ್ಮ್ ಹೌಸ್ ಇತ್ತೀಚೆಗೆ ಜನರ ಬಹುದೊಡ್ಡ ಬೇಡಿಕೆಯಾಗಿದೆ" ಎಂದು ಮುಳಿಯ ಪ್ರಾಪರ್ಟೀಸ್ ಮಾಲಕ ಕೇಶವ ಪ್ರಸಾದ್ ಮುಳಿಯ ಈ ಪ್ರೊಜೆಕ್ಟಿನ ಕಾನ್ಸೆಪ್ಟನ್ನು ವಿವರಿಸಿದರು.


ಸಮಾರಂಭದಲ್ಲಿ ಕೃಷ್ಣವೇಣಿ ಪ್ರಸಾದ್ ಮುಳಿಯ, ಕೃಷ್ಣನಾರಾಯಣ ಮುಳಿಯ, ಅಶ್ವಿನಿ ಕೃಷ್ಣ ಮುಳಿಯ, ಮುಕುಂದ ಶ್ಯಾಮ, ಮುರುಳಿ ಕೃಷ್ಣ ಹಸಂತಡ್ಕ,  ಕಂಟಿಕ ಗೋಪಾಲಕೃಷ್ಣ ಶಣೈ, ವೇಣು ಶರ್ಮ, ಉತ್ತಮ ರೈ, ಕೆ ಗೋಪಾಲಕೃಷ್ಣ ಪ್ರಭು, ಪ್ರಕಾಶ್ ಶಣೈ, ಎಂಜಿನಿಯರ್ ಅಜಯ್ ಕೃಷ್ಣ, ಅರ್ಕಿಟೆಕ್ಟ್ ಸುದರ್ಶನ್ ಹಾರಕರೆ, ಗಿರಿಶಂಕರ್ ಕೈಲಾರ್ ಮುಂತಾದವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top