ಭಾರತದ ಮೊದಲ ಪಾಲಿಮರ್ ಎಸ್ಎಲ್ಎಸ್ 3ಡಿ ಪ್ರಿಂಟರ್ ಅನಾವರಣ

Upayuktha
0

  • ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಂದ ಅನಾವರಣ
  • ಎಫ್ಎಸ್ಐಡಿ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನ




ಬೆಂಗಳೂರು: ಎಫ್ಎಸ್ಐಡಿ- ಇಂಡಿಯನ್ ಇನ್‌ ಸ್ಟಿಟ್ಯೂಟ್ ಆಫ್ ಸೈನ್ಸ್ ಸ್ಥಳೀಯವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ ಭಾರತದ ಮೊದಲ ಪಾಲಿಮರ್ ಸೆಲೆಕ್ಟಿವ್ ಲೇಸರ್ ಸಿಂಟರಿಂಗ್ (ಎಸ್ಎಲ್ಎಸ್) 3ಡಿ ಪ್ರಿಂಟರ್ ಅಪೋಲೋ 350 ಎಸ್ಎಲ್ಎಸ್ ಅನ್ನು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ.


ಭಾರತದ ಅತಿದೊಡ್ಡ ಮೆಷಿನ್ ಟೂಲ್ ಎಕ್ಸ್ ಪೋ ಐಎಂಟೆಇಎಕ್ಸ್ 2025ರಲ್ಲಿ ಈ ಉತ್ಪನ್ನವನ್ನು ಅನಾವರಣಗೊಳಿಸಲಾಗಿದ್ದು, ಈ ಪ್ರಿಂಟರ್ ಅನ್ನು ಎಂಎಚ್ಐ ಹಂತ-IIರ ಕ್ಯಾಪಿಟಲ್ ಗೂಡ್ಸ್ ಸ್ಕೀಮ್ ಅಡಿಯಲ್ಲಿ ಫ್ರಾಕ್ಟಲ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. 


ಈ ಸಂದರ್ಭದಲ್ಲಿ ಮಾತನಾಡಿದ ಎಫ್‌ಎಸ್‌ಐಡಿ-ಐಐಎಸ್‌ಸಿಯ ಕೋರ್ ಲ್ಯಾಬ್ಸ್‌ ನ ಮುಖ್ಯ ಕಾರ್ಯನಿರ್ವಾಹಕ ಓಂಪ್ರಕಾಶ್ ಸುಬ್ಬರಾವ್ ಅವರು, "ಎಂಎಚ್‌ಐ ಕ್ಯಾಪಿಟಲ್ ಗೂಡ್ಸ್ ಸ್ಕೀಮ್ ಅಡಿಯಲ್ಲಿ ಎಫ್‌ಎಸ್‌ಐಡಿ-ಐಐಎಸ್‌ಸಿ ಘಟಕದಲ್ಲಿ ಕೈಗಾರಿಕಾ ದರ್ಜೆಯ ಪಾಲಿಮರ್ ಪ್ರಿಂಟರ್ ಅನ್ನು ಅಭಿವೃದ್ಧಿಪಡಿಸಿದ್ದಕ್ಕೆ ನಮಗೆ ಅಪಾರ ಹೆಮ್ಮೆ ಇದೆ. ನಾವು ಇಲ್ಲಿಯೇ ಈ ಪ್ರಿಂಟರ್ ಅನ್ನು ವಿನ್ಯಾಸಗೊಳಿಸಿ, ಅಭಿವೃದ್ಧಿ ಪಡಿಸಿ, ತಯಾರಿಸಿದ್ದೇವೆ. ಈ ಸಾಧನೆಯು ಸಂಕೀರ್ಣ ತಂತ್ರಜ್ಞಾನವನ್ನು ತಯಾರಿಸುವ ನಮ್ಮ ಶಕ್ತಿ ಸಾಮರ್ಥ್ಯದ ಪ್ರದರ್ಶನ ಎಂದರೂ ತಪ್ಪಿಲ್ಲ. ಈ ಮೂಲಕ ಭಾರತದ ಉತ್ಪಾದನಾ ಕ್ಷೇತ್ರದ ಸಾಮರ್ಥ್ಯವನ್ನು ಆಧುನಿಕಗೊಳಿಸಲು ನಾವು ಸಂತೋಷ ಪಡುತ್ತೇವೆ" ಎಂದು ಹೇಳಿದರು.


ಫೌಂಡೇಶನ್ ಫಾರ್ ಸೈನ್ಸ್, ಇನ್ನೋವೇಶನ್ ಮತ್ತು ಡೆವಲಪ್‌ಮೆಂಟ್ (ಎಫ್‌ಎಸ್‌ಐಡಿ) ಕೋರ್ ಲ್ಯಾಬ್ಸ್‌ ಮತ್ತು ಫ್ರ್ಯಾಕ್ಟಲ್ ವರ್ಕ್ಸ್‌ ನ ಉದ್ಯಮ ಪರಿಣತಿಯು ಈ ಉತ್ಪನ್ನವನ್ನು ತಯಾರಿಸಲು ನೆರವಾಗಿದೆ. ಅಪೋಲೋ 350 ಎಸ್ಎಲ್ಎಸ್ ಪ್ರಿಂಟರ್ ಉನ್ನತ ಸ್ಥಿರತೆಯ ಸಿಓ₂ ಲೇಸರ್‌ ಗಳು, ನಿಖರವಾದ ಸ್ಕ್ಯಾನಿಂಗ್ ವ್ಯವಸ್ಥೆ ಮತ್ತು ಅತ್ಯಾಧುನಿಕ ಪ್ರೀಹೀಟಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಈ ಅತ್ಯಾಧುನಿಕ ಉತ್ಪನ್ನವು ಬಾರತದ ಅಡಿಟಿವ್ ಉತ್ಪಾದನಾ ಕ್ಷೇತ್ರದಲ್ಲಿ ಹೊಸ ಮಾನದಂಡವನ್ನು ಹಾಕಿಕೊಡಲಿದೆ. ಈ ಉತ್ಪನ್ನವನ್ನು ಕೇವಲ ಎರಡು ವರ್ಷಗಳ ಅವಧಿಯಲ್ಲಿ ಐಐಎಸ್ಸಿಯಲ್ಲಿ ಅಭಿವೃದ್ಧಿಪಡಿಸಿರುವುದು ವಿಶೇಷವಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top