ಮಂಗಳೂರು: ನಗರದ ಬಾವುಟಗುಡ್ಡೆಯಲ್ಲಿರುವ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ 145ನೇ ವಾರ್ಷಿಕೋತ್ಸವವು ʼʼನಮ್ಮ ಸಂವಿಧಾನ, ನಮ್ಮ ಹೆಮ್ಮೆʼʼ - ಭಾರತ ಸಂವಿಧಾನದ 75 ವರ್ಷದ ಸಂಭ್ರಮದಲ್ಲಿ ಎಂಬ ಧ್ಯೇಯದೊಂದಿಗೆ ಗುರುವಾರ 19ನೇ ಏಪ್ರಿಲ್ 2025ರಂದು ವಿಶ್ವವಿದ್ಯಾನಿಲಯ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸಾಮಾಜಿಕ ಉದ್ಯಮಿ ಓಶ್ನಿ ಫೆರ್ನಾಂಡಿಸ್ ಸಲ್ಡಾನ್ಹ ಮಾತನಾಡಿ, ಸಮಾಜದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರಲ್ಲಿ ಸಂತ ಅಲೋಶೀಯಸ್ ಶಿಕ್ಷಣ ಸಂಸ್ಥೆಗಳು ಅಂದಿನಿಂದ ಇಂದಿನವರೆಗೂ ಯಾವುದೇ ಅಡೆತಡೆಗಳನ್ನು ಉಂಟುಮಾಡಿಲ್ಲ. ನನ್ನ ಎರಡೂ ಅಜ್ಜಂದಿರು ಉನ್ನತ ಹುದ್ದೆಯಲ್ಲಿದ್ದು, ನಿವೃತ್ತಿ ಹೊಂದಬೇಕಾದರೆ ಪ್ರಾಥಮಿಕ ಹಂತದಲ್ಲಿ ಈ ಶಿಕ್ಷಣ ಸಂಸ್ಥೆಯಿಂದ ದೊರೆತ ಜ್ಞಾನ, ಪ್ರೋತ್ಸಾಹ ಅವರಿಗೆ ನೀಡಿದ ಕೊಡುಗೆ ಅಪಾರ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ವರಿಷ್ಠಾಧಿಕಾರಿ ವಂ. ಮೆಲ್ವಿನ್ ಜೋಸೆಫ್ ಪಿಂಟೋ ಎಸ್. ಜೆ. ಮಾತನಾಡಿ, ಈ ಬಾರಿ ಭಾರತ ಸಂವಿಧಾನದ 75 ವರ್ಷದ ಸಂಭ್ರಮವನ್ನು ನಾವೆಲ್ಲರೂ ಆಚರಿಸುತ್ತಿರುವಾಗ. ಸಂವಿಧಾನದ ಉದ್ದೇಶಗಳಂತೆ ನಮ್ಮ ಸಂಸ್ಥೆ ಹಾಗೂ ನಮ್ಮ ವಿದ್ಯಾರ್ಥಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ನಮ್ಮ ಸಂಸ್ಥೆಯ ಪಠ್ಯೇತರ ಚಟುವಟಿಕೆಗಳಾದ ಎನ್.ಎಸ್.ಎಸ್., ಸಹಾಯಗಳಂತ ಚಟುವಟಿಕೆಯಿಂದಾಗಿ ನಮ್ಮ ವಿದ್ಯಾರ್ಥಿಗಳೂ ಸಮಾಜದ ಎಲ್ಲಾ ವರ್ಗಗಳ ಜನರೊಂದಿಗೆ ಬೆರೆತು ಅವರ ಕಷ್ಟಗಳಿಗೆ ಕೈಜೋಡಿಸಿ, ಸಮಾಜದ ಅಭಿವೃದ್ದಿಯನ್ನು ಬೆಂಬಲಿಸಿ, ಸೇವೆಯನ್ನು ನೀಡುತ್ತಿದ್ದಾರೆ ಎಂದರು.
ಪರೀಕ್ಷಾಂಗ ಕುಲಸಚಿವರಾದ ಡಾ. ಆಲ್ವಿನ್ ಡೇಸಾ, ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ರೊನಾಲ್ಡ್ ನಜರೆತ್, ಹಣಕಾಸು ಅಧಿಕಾರಿ, ವಂ. ಫಾ. ವಿಶ್ವಾಸ್ ಮಿಸ್ಕಿತ್ ಎಸ್.ಜೆ., ವಿವಿಧ ಬ್ಲಾಕಿನ ನಿರ್ದೇಶಕರುಗಳಾದ, ವಂ. ಡಾ. ಕಿರಣ್ ಕೋತ ಎಸ್.ಜೆ., ಡಾ. ಲೋವೀನಾ ಲೋಬೊ, ಡಾ. ಆಶಾ ಅಬ್ರಾಹಂ, ಡಾ. ಚಾರ್ಲ್ಸ್ ವಿ. ಫುರ್ಟಾಡೊ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ವಂ. ಡಾ. ಪ್ರವೀಣ್ ಮಾರ್ಟೀಸ್ ಎಸ್. ಜೆ. ವಾರ್ಷಿಕ ವರದಿಯನ್ನು ಮಂಡಿಸಿದರು. ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮ ಸಹಯೋಜಕರಾದ ಡಾ. ಡೆನ್ನಿಸ್ ಫೆರ್ನಾಂಡಿಸ್ ಸ್ವಾಗತಿಸಿ, ಸಹ ಸಹಯೋಜಕರಾದ ಡಾ. ಈಶ್ವರ್ ಭಟ್ ಎಸ್ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ವ್ಯಾನ್ಸ್ ರಿಯೋನ್ ಡಿ'ಸೋಜ ವಂದಿಸಿದರು. ವಿದ್ಯಾರ್ಥಿಗಳಾದ ರೂಬನ್, ಜೆನಿಶ್ಯಾ ಸಭಾ ಕಾರ್ಯಕ್ರಮ ಹಾಗೂ ವೆನ್ಸಿಟಾ ಡಯಾಸ್, ಕ್ಯಾರಲ್ ರಿಯೋನ, ದಿಲ್ರೋಯ್ ಮಸ್ಕರೇನ್ಹಸ್, ಪವನ್ ಕುಮಾರ್ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ