ಕೊಣಾಜೆ: ಉಳ್ಳಾಲ ತಾಲೂಕು ಕುರ್ನಾಡು ಹೂವಿನಕೊಪ್ಪಲದ ಪುಟಾಣಿ ಯನ್ಷ್ ಸಿ. ಶೆಟ್ಟಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಅವರ ಗ್ಲಾಸ್ ಪೈಂಟಿಂಗ್ ರಚಿಸಿ ಗಮನ ಸೆಳೆದಿದ್ದಾನೆ.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಒಂದನೇ ತರಗತಿ ವಿದ್ಯಾರ್ಥಿಯಾಗಿರುವ ಈತ ಇತ್ತೀಚೆಗೆ ಶಾಲೆಯಲ್ಲಿ ಪ್ರಭಾಕರ್ ಭಟ್-ಕಮಲಾ ಭಟ್ ದಂಪತಿಗೆ ಚಿತ್ರ ಸಮರ್ಪಿಸಿ ಮೆಚ್ಚುಗೆ ಪಡೆದಿದ್ದಾನೆ.
ಈತ ಕುರ್ನಾಡು ಚಂದ್ರಹಾಸ ಶೆಟ್ಟಿ- ಜಯಲಕ್ಷ್ಮೀ ದಂಪತಿ ಪುತ್ರ. ತಲಪಾಡಿ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆ ಚಿತ್ರಕಲಾ ಶಿಕ್ಷಕರಾದ ಮನೋಜ್ ಅವರಿಂದ ಚಿತ್ರಕಲೆ ತರಬೇತಿ ಪಡೆಯುತ್ತಿದ್ದಾನೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ